ಭಾರತದ ಪಾರಂಪರಿಕ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿ 8 ವರ್ಷಗಳಾದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಇದರಂಗವಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮರವರು ಯೋಗ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಯೋಗದ ಪ್ರಯೋಜನಗಳನ್ನು ತಿಳಿಸಿ, ಹಲವು ಸರಳ ಯೋಗಾಸನಗಳನ್ನು ಮಾಡಿ ಪ್ರದರ್ಶಿಸಿದರು. ಮಕ್ಕಳು ಈ ಯೋಗಾಸನಗಳನ್ನು ಮಾಡಿ ಸಂತಸ ಪಟ್ಟರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
No comments:
Post a Comment