FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 19 December 2024

ಕುಳೂರು ಶಾಲೆಗೆ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳ ಭೇಟಿ :

       ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿಗೆ ಇಂದು‌ ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳಾದ ಶ್ರೀಯುತ ರಾಜಗೋಪಾಲ ಎನ್. ರವರು ಭೇಟಿ ನೀಡಿದರು. 

Wednesday, 18 December 2024

ಹುಟ್ಟುಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

         ಇಂದು ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಅವನಿಯ ಹುಟ್ಟು ಹಬ್ಬದ ಪ್ರಯುಕ್ತ ಅವಳ ಹೆತ್ತವರು ಶಾಲಾ ಮಕ್ಕಳಿಗೆ ಮಧ್ಯಾಹ್ನ‌ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 

Friday, 13 December 2024

ಕುಳೂರು ಶಾಲೆಯಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ದಿವಸ ಆಚರಣೆ :

         ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ 'ಸಿರಿಧಾನ್ಯ ದಿವಸ' ಆಚರಿಸಲಾಯಿತು. 

Tuesday, 10 December 2024

ಎನ್.ಎಸ್.ಎಸ್. ಸಹವಾಸ ಶಿಬಿರದ ಸಂಘಟನಾ ಸಮಿತಿ ರೂಪೀಕರಣ ಸಭೆ :

        ಇಂದು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇದರ ನೇತೃತ್ವದಲ್ಲಿ ಕ್ರಿಸ್ಮಸ್ ರಜೆಯಲ್ಲಿ ನಡೆಯಲಿರುವ ಎನ್.ಎಸ್.ಎಸ್. ಸಹವಾಸ ಶಿಬಿರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸಲು ಸಂಘಟನಾ ರೂಪೀಕರಣ ಸಭೆ ನಡೆಯಿತು. 

Thursday, 5 December 2024

ಗೃಹಪ್ರವೇಶದ ಪ್ರಯುಕ್ತ ಮಕ್ಕಳಿಗೆ ವಿಶೇಷ ಮಧ್ಯಾಹ್ನದೂಟ :

       ಇಂದು ಕುಳೂರು ಚಿನಾಲದ ಮಠದ ಮನೆಯ ಶ್ರೀ ರವೀಂದ್ರ ದಾಸ್ ಮತ್ತು ಕರುಣಾಕರ ದಾಸ್ ರವರು ತಮ್ಮ ನೂತನ ಮನೆಯ ಗೃಹ ಪ್ರವೇಶದ ಪರವಾಗಿ ಶಾಲಾ ಮಕ್ಕಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದರು. 

Wednesday, 4 December 2024

ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

        ಇಂದು‌ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಕೃತಿಕ್ ನ ಹುಟ್ಟು ಹಬ್ಬದ ಪ್ರಯುಕ್ತ ಅವನ ಹೆತ್ತವರು ಶಾಲಾ ಹೂದೋಟಕ್ಕೆ ಹೂವಿನ  ಗಿಡ, ಮಧ್ಯಾಹ್ನದೂಟದಲ್ಲಿ ಪಾಯಸ, ಶಾಲಾ ಮಕ್ಕಳಿಗೆ ಪೆನ್ಸಿಲ್ ನೀಡಿ ಸಂಭ್ರಮಿಸಿದರು.‌ 

Monday, 2 December 2024

ಹುಟ್ಟುಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

      ಇಂದು ಒಂದನೇ ತರಗತಿಯ ವಿದ್ಯಾರ್ಥಿ ಪ್ರದ್ಯುತ್ ಆರ್ ಅಂಚನ್ ನ ಹುಟ್ಟು ಹಬ್ಬದ ಪ್ರಯುಕ್ತ ಅವನ ಹೆತ್ತವರು ಮಧ್ಯಾಹ್ನದೂಟದ ಸಮಯದಲ್ಲಿ ಶಾಲಾ ಮಕ್ಕಳಿಗೆ ಪಲಾವ್ ಹಾಗೂ ಪಾನೀಯ ನೀಡಿ ಸಹಕರಿಸಿದರು.