ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳಾದ ಶ್ರೀಯುತ ರಾಜಗೋಪಾಲ ಎನ್. ರವರು ಭೇಟಿ ನೀಡಿದರು.
ಇವರೊಂದಿಗೆ ಮಂಜೇಶ್ವರ ಬಿ.ಆರ್.ಸಿ. ಯ ಬ್ಲಾಕ್ ಪ್ರೋಗ್ರಾಂ ಕೋರ್ಡಿನೇಟರ್ ಶ್ರೀ ಜೋಯ್ ಪಿ ಇದ್ದರು. ಶಾಲೆಯ ಮಧ್ಯಾಹ್ನದೂಟವನ್ನು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಭೌತಿಕ ಸೌಕರ್ಯ, ದಾಖಲೆಗಳನ್ನು ಪರಿಶೀಲಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ಆತ್ಮೀಯವಾಗಿ ಸಂವಾದ ನಡೆಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಹಾಗೂ ಶಾಲಾ ಶಿಕ್ಷಕ ವೃಂದದೊಂದಿಗೆ ಸಭೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಸಲಹೆ ಸೂಚನೆಗಳನ್ನಿತ್ತು ಪ್ರೋತ್ಸಾಹಿಸಿದರು.
No comments:
Post a Comment