ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ 'ಸಿರಿಧಾನ್ಯ ದಿವಸ' ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪ್ರತೀ ಮಕ್ಕಳು ಸಿರಿಧಾನ್ಯಗಳಾದ ರಾಗಿ ಗೋಧಿ,ಜೋಳ ಸಾಮೆ ನವಣೆ ಇತ್ಯಾದಿಗಳನ್ನುಪಯೋಗಿಸಿ ತಯಾರಿಸಿದ ತಿಂಡಿ ತಿನಸುಗಳನ್ನು ತಂದಿದ್ದರು.ಮಕ್ಕಳು ತಂದ ತಿಂಡಿ ತಿನಸುಗಳ ಪ್ರದರ್ಶನ ನಡೆಸಲಾಯಿತು. ಪ್ರತಿ ತಿಂಡಿಗಳ ಹೆಸರು ತಯಾರಿಸುವ ವಿಧಾನ ತಿಂಡಿಯ ಸೇವನೆಯಿಂದ ಇರುವ ಪ್ರಯೋಜನಗಳ ಬಗ್ಗೆ ಚರ್ಚಿಸಲಾಯಿತು. ತಂದ ತಿಂಡಿಗಳನ್ನು ಪರಸ್ಪರ ಹಂಚಿಕೊಂಡು ಸವಿದು ಆನಂದಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೀಂಜ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರಾದ ಕುಮಾರಿ ಅಶ್ವಿನಿ ಹಾಗೂ ಜಸೀಲ ಆಗಮಿಸಿದ್ದರು. ಅತಿಥಿಗಳು ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳ ಮಹತ್ವದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯಶಿಕ್ಷಕಿ ಮಕ್ಕಳ ಉತ್ತಮ ಪ್ರತಿಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಇನ್ನು ಹೆಚ್ಚು ಸಿರಿಧಾನ್ಯಗಳನ್ನು ತನ್ನ ಆಹಾರದಲ್ಲಿ ಬಳಸುವಂತೆ ಪ್ರೋತ್ಸಾಹಿಸಿದರು. ಅಧ್ಯಾಪಿಕೆ ಸೌಮ್ಯ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಿಕೆ ಶ್ರೀಮತಿ ನಯನ ವಂದಿಸಿದರು ಹಾಗೂ ಅಧ್ಯಾಪಕರಾದ ಶ್ರೀಯುತ ಜಯಪ್ರಶಾಂತ್, ಅಧ್ಯಾಪಿಕೆಯರಾದ ಶ್ರೀಮತಿ ಅಶ್ವಿನಿ ಹಾಗೂ ಶ್ರೀಮತಿ ಶ್ವೇತ ಸಹಕರಿಸಿದರು.
No comments:
Post a Comment