FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 18 December 2024

ಹುಟ್ಟುಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

         ಇಂದು ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಅವನಿಯ ಹುಟ್ಟು ಹಬ್ಬದ ಪ್ರಯುಕ್ತ ಅವಳ ಹೆತ್ತವರು ಶಾಲಾ ಮಕ್ಕಳಿಗೆ ಮಧ್ಯಾಹ್ನ‌ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 

       ಬಂಟ್ವಾಳದ ಸುವರ್ಣ ಕ್ಯಾಟರರ್ಸ್ ನವರ ಶುಚಿ‌-ರುಚಿಯಾದ ಭರ್ಜರಿ ಭೋಜನವನ್ನು ಮಕ್ಕಳು ಸವಿದು ಐಸ್ ಕ್ರೀಂ ತಿಂದು ಖುಷಿ ಪಟ್ಟರು. ಇಂದಿನ ಈ ಭೂರಿ ಭೋಜನವನ್ನು ಒದಗಿಸಿದ ಅವನಿಯ ಹೆತ್ತವರಾದ ಶ್ರೀಮತಿ ವಿದ್ಯಾ ಹಾಗೂ ಶ್ರೀ ಶ್ರೀನಿವಾಸ್ ಆಚಾರ್ಯ ಕಾಯರ್'ತೊಟ್ಟಿ ಯವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.

       ಪುಟಾಣಿ ಅವನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು



No comments:

Post a Comment