ಮಕ್ಕಳಲ್ಲಿ ಪ್ರಜಭಭುತ್ವದ ಪರಿಕಲ್ಪನೆಯನ್ನು ಮೂಡಿಸಲು ನಮ್ಮ ಕುಳೂರು ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಚುನಾವಣೆ ನಡೆಸುತ್ತಿದ್ದು, ಈ ವರ್ಷವೂ ಮಕ್ಕಳ ಕುತೂಹಲ, ಹುಮ್ಮಸ್ಸನ್ನು ಈ ಚುನಾವಣೆ ಹೆಚ್ಚು ಮಾಡಿತ್ತು.
ಕಳೆದ ಶುಕ್ರವಾರದಂದು ನಾಮಪತ್ರ ಸಲ್ಲಿಕೆ ಆದ ಬಳಿಕ ಇಂದು ಶಾಲಾ ನಾಯಕನ ಆಯ್ಕೆಗೆ ಚುನಾವಣೆಯು ನಡೆದಿದ್ದು, ಮಕ್ಕಳೆಲ್ಲರೂ ಈ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಸರದಿ ಸಾಲಿನಲ್ಲಿ ಬಂದ ಮತದಾರ ಮಕ್ಕಳು, ಕೋವಿಡ್ - 19 ರ ನಿಯಂತ್ರಣಾ ಕ್ರಮಗಳನ್ನು ಪಾಲಿಸಿಕೊಂಡು, ಯಾವುದೇ ಗೊಂದಲವಿಲ್ಲದೆ ಸಭ್ಯತೆಯಿಂದ ಗುರುತಿನ ಚೀಟಿ ಹಿಡಿದುಕೊಂಡು ಮತ ಹಾಕುವ ಮೂಲಕ ಮಾದರಿಯಾದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಕ್ಕಳು ತಮ್ಮ ಕೈ ಬೆರಳಿಗೆ ಮತದಾನ ಗುರುತನ್ನು ಹಾಕಿಸಿಕೊಂಡು, ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಮತದಾನದ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಾದ ಅಂಕಿತ್, ಹರ್ಷಿತ ಕೆ, ಶ್ರೀನಿಧಿ ವಿ ಆರ್ ಪೋಲ್ಲಿಂಗ್ ಆಫೀಸರುಗಳಾಗಿ, ರಜ್'ತೇಶ್ ಡಿ. ಕೆ ಹಾಗೂ ಆಕಾಶ್ ಶೆಟ್ಟಿ ಪೊಲೀಸ್ ಅಧಿಕಾರಿಗಳಾಗಿ ಸಹಕರಿಸಿದರು.
ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತದಾನ ಎಣಿಕಾ ಪ್ರಕ್ರಿಯೆ ನಡೆಯಿತು. ಎಲ್ಲರ ಕಾತರ, ಕುತೂಹಲಕ್ಕೆ ಕಾರಣವಾದ ವಿಜೇತ ಅಭ್ಯರ್ಥಿಯ ಘೋಷಣೆಯನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರು ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯರು ವಿಜೇತ ಅಭ್ಯರ್ಥಿಗಳಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಶಾಲಾ ನಾಯಕನಾಗಿ ಸಾನ್ವಿತ್ ಶೆಟ್ಟಿ, ಉಪನಾಯಕಿಯಾಗಿ ಚಿನ್ಮಯಿ ಜೆ ಆಳ್ವ ಆಯ್ಕೆಯಾದರು. ಆರೋಗ್ಯ ಮಂತ್ರಿಯಾಗಿ ಶ್ರೇಯ ಕೆ ಸಿ ಆಯ್ಕೆಯಾದಳು.
ಶಾಲಾ ಮುಖ್ಯೋಪಾಧ್ಯಾಯರು ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳನ್ನು ಮೆರವಣಿಗೆಯ ಮೂಲಕ ಮಕ್ಕಳು ಅಭಿನಂದನೆ ಸಲ್ಲಿಸಿದರು.
Nice 🥰
ReplyDelete