ಶಾಲಾರಂಭದ ಮೂರನೇ ದಿನ. ದೀಪಾವಳಿ ಹಬ್ಬದ ಸಂಭ್ರಮ. ಇಂದು ಶಾಲೆಯಲ್ಲೂ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಗೂಡು ದೀಪ ಹಾಗೂ ಶುಭಾಶಯ ಪತ್ರ ರಚನೆಯನ್ನು ತರಗತಿಯಲ್ಲಿ ನಡೆಸಲಾಯಿತು. ದೀಪಾವಳಿಯ ಹಿನ್ನೆಲೆಯನ್ನು ಶಾಲಾ ಮುಖ್ಯೋಧ್ಯಾಯರಾದ ಸತ್ಯನಾರಾಯಣ ಶರ್ಮರವರು ಮಕ್ಕಳಿಗೆ ತಿಳಿಸಿದರು. ಅಕ್ಷರದಲ್ಲಿ ಹಣತೆಗಳನ್ನು ಬೆಳಗಿಸಿ ದೀಪಾವಳಿಯ ಆಶಯವನ್ನು ಮೂಡಿಸಲಾಯಿತು. ನಕ್ಷತ್ರ ಕಡ್ಡಿ ಉರಿಸುವ ಮೂಲಕ ಮಕ್ಕಳು ಸಂಭ್ರಮಪಟ್ಟರು. ಇಂದು ಕೂಡ ಮಕ್ಕಳ ಮಧ್ಯಾಹ್ನದೂಟದಲ್ಲಿ ಪಾಯಸ ನೀಡಲಾಯಿತು. ಇಂದಿನ ಪಾಯಸವನ್ನು ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿಯವರ ವತಿಯಿಂದ ನೀಡಲಾಯಿತು. ತನ್ನ ಮಗನ ಹುಟ್ಟು ಹಬ್ಬದ ಪ್ರಯುಕ್ತ ನೀಡಿದರು.
No comments:
Post a Comment