ಕುಳೂರು ಶಾಲೆಯ ಹಳೆ ವಿದ್ಯಾರ್ಥಿಗಳಾದ ಜಯರಾಜ್ ಶೆಟ್ಟಿ ಚಾರ್ಲ ಹಾಗೂ ಹರಿರಾಮ ಕುಳೂರುರವರು ಇಂದು ಶಾಲೆಯ ಕೆಲವು ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಿ ಸಹಕರಿಸಿದರು. ನೂತನವಾಗಿ ನವೀಕರಿಸಲಾದ ಪಾಯಿಖಾನೆಗೆ ಪೈಪ್ ಜೋಡಣೆ ಹಾಗೂ ಶಾಲಾ ತರಕಾರಿ ತೋಟದ ಗಿಡಗಳಿಗೆ ಸಾವಯವ ಗೊಬ್ಬರ ಹಾಕುವ ಕೆಲಸದಲ್ಲಿ ಸಹಕರಿಸಿದರು. ತರಕಾರಿ ತೋಟದ ಗಿಡಗಳಿಗೆ ಹಾಗೂ ತೆಂಗಿನ ಗಿಡಗಳಿಗೆ ಸಾವಯವ ಗೊಬ್ಬರವನ್ನು ಜಯರಾಜ್ ಶೆಟ್ಟಿ ಚಾರ್ಲರವರು ಒದಗಿಸಿ ಕೊಟ್ಟರು. ಇವರಿಗೆ ಶಾಲೆಯ ಪರವಾಗಿ ಧನ್ಯವಾದವನ್ನು ಅರ್ಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ತರಕಾರಿ ಕೃಷಿಗೆ ಸೊಪ್ಪು ಹಾಕುವ ಕೆಲಸದಲ್ಲಿ ಸಹಕರಿಸಿದರು.
No comments:
Post a Comment