FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 23 December 2016

ಕ್ರಿಸ್'ಮಸ್ ಆಚರಣೆ

        ಕ್ರಿಸ್'ಮಸ್ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಗೋದಳಿ ಹಾಗೂ 'ಕ್ರಿಸ್ಮಸ್ ಟ್ರೀ' ರಚಿಸಲಾಯಿತು. ವಿದ್ಯಾರ್ಥಿ ಅಕ್ಷಯ್ ಕುಮಾರ್ ಹಾಕಿದ ಕ್ರಿಸ್ಮಸ್ ಅಜ್ಜನ ವೇಷ ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ಪಾಯಸದೊಂದಿಗೆ ಭೂರಿ ಭೋಜನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಎಲ್ಲರಿಗೂ ಕ್ರಿಸ್ಮಸ್ ಕೇಕ್, ಚಾಕಲೇಟ್'ಗಳನ್ನು ಹಂಚಲಾಯಿತು.













Monday, 19 December 2016

ಉಪಜಿಲ್ಲಾ ಕಲೋತ್ಸವದ ಪ್ರತಿಭೆ

        ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕುಮಾರಿ ಭುವನ 'ಎ' ಗ್ರೇಡ್ ಪಡೆದುಕೊಂಡಿದ್ದಾಳೆ. ಅವಳಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಪಿ.ಟಿ.ಎ ಅಭಿನಂದನೆ ಸಲ್ಲಿಸಿದ್ದಾರೆ.



Thursday, 8 December 2016

'ಹಸಿರು ಕೇರಳ - ಸುಂದರ ಕೇರಳ' ಕಾರ್ಯಕ್ರಮ

        ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ಸರಕಾರದ ಯೋಜಿತ 'ಹಸಿರು ಕೇರಳ - ಸುಂದರ ಕೇರಳ' ಕಾರ್ಯಕ್ರಮವನ್ನು ನಡೆಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಅಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಯ ಕುರಿತಾದ ಪ್ರತಿಜ್ಞೆಗೈಯಲಾಯಿತು. ಬಳಿಕ ಶಾಲಾ ಪರಿಸರದ ಶುಚೀಕರಣದೊಂದಿಗೆ ತ್ಯಾಜ್ಯ ಸಂಸ್ಕರಣೆಗೆ ಹೊಂಡವನ್ನು ಶಾಲಾ ಅಧ್ಯಾಪಕರು ನಿರ್ಮಿಸಿದರು. 'ಹಸಿರು ಕೇರಳ - ಸುಂದರ ಕೇರಳ'ದ ಅಂಗವಾಗಿ ಮಕ್ಕಳು ನಡೆಸಿದ ಪರಿಸರ ಸ್ನೇಹೀ ಮೆರವಣಿಗೆಗೆ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ಚಾಲನೆಯನ್ನಿತ್ತರು. ಮನೆ-ಮನೆ ಭೇಟಿಯೊಂದಿಗೆ ಮೆರವಣಿಗೆ ನಡೆಸಿ ಪರಿಸರ ಹಾಗೂ ಜಲ ಸಂರಕ್ಷಣೆಯ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿನ ಉಪಾಧ್ಯಕ್ಷೆ ಶ್ರೀಮತಿ ಮಮತಾ ದಿವಾಕರ್, ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಆಶಾ ಹಾಗೂ ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಸಂಶಾದ್ ಶಕೂರ್, ಉಪಾಧ್ಯಕ್ಷೆ ಶ್ರೀಮತಿ ಫಾತಿಮಾ, ಪಂಚಾಯತ್ ಕಾರ್ಯದರ್ಶಿ ಶ್ರೀ ನಂದಗೋಪಾಲನ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಕುಂಞ್ಞಿ, ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಶೋಭಾ ಸೋಮಪ್ಪ, ವಾರ್ಡ್ ಪ್ರತಿನಿಧಿಗಳಾದ ಶ್ರೀಮತಿ ಚಂದ್ರಾವತಿ ವಿ.ಪಿ, ಶ್ರೀ ಚಂದ್ರಶೇಖರ, ಶ್ರೀಮತಿ ಚಂದ್ರಾವತಿ ಮೂಡಂಬೈಲ್, ಗ್ರಾಮಾಧಿಕಾರಿ ಶ್ರೀ ಅಬ್ದುಲ್ ನಾಸೀರ್ ಶಾಲೆಯನ್ನು ಸಂದರ್ಶಿಸಿ ಶಾಲಾಮಟ್ಟದಲ್ಲಿ ನಡೆಸಿದ ಹಸಿರು ಕೇರಳ ಮೆರವಣಿಗೆ, ತ್ಯಾಜ್ಯ ಸಂಸ್ಕರಣೆಗೆ ಮಾಡಿದ ಹೊಂಡ, ಪರಿಸರ ಶುಚಿತ್ವ ಹಾಗೂ ಎರಡನೇ ಹಂತದ ಕೃಷಿ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ವಿನೋದ್ ಕುಮಾರ್ ಬಿ, ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತ, ಕುಮಾರಿ ರೇಷ್ಮ, ಸ್ಥಳೀಯರಾದ ಶ್ರೀ ಹರಿರಾಮ್ ಕುಳೂರು ಉಪಸ್ಥಿತರಿದ್ದು ಸಹಕರಿಸಿದರು.











Friday, 18 November 2016

ಮಕ್ಕಳ ವೃತ್ತಿ ಪರಿಚಯ ಮೇಳದ 'ಪ್ರತಿಭಾ ಪ್ರದರ್ಶನ' ಉದ್ಘಾಟನೆ

         ಶಾಲಾ ಮಕ್ಕಳ ವೃತ್ತಿ ಪರಿಚಯ ಮೇಳಗಳ ಪ್ರತಿಭೆಯನ್ನು ಮಕ್ಕಳ ಹೆತ್ತವರಿಗೆ ಪರಿಚಯಿಸುವ ಉದ್ದೇಶದಿಂದ ತಾ. 18-11-2016 ನೇ ಶುಕ್ರವಾರದಂದು ಮಕ್ಕಳ ವೃತ್ತಿ ಪರಿಚಯ ಮೇಳದ 'ಪ್ರತಿಭಾ ಪ್ರದರ್ಶನ' ನಡೆಸಲಾಯಿತು. ಪ್ರದರ್ಶನವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ಉದ್ಘಾಟಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ, ಮಾಜಿ ಪಿ.ಟಿ.ಎ ಅಧ್ಯಕ್ಷ ಶ್ರೀ ಹರಿರಾಮ ಕುಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ರಚಿತವಾದ 'ಚಿಗುರು' ಹಸ್ತಪತ್ರಿಕೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ಬಿಡುಗಡೆ ಮಾಡಿದರು. ಹಾಗಯೇ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬರೆಯವ ಚೋಕ್ ನಿರ್ಮಾಣದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೇಯ ಕರ್ಕೇರ, ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ದ್ವಿತೀಯ ಸ್ಥಾನ ಪಡೆದ ಹರ್ಷಿತ, ಗೆರಟೆಯಿಂದ ಉತ್ಪನ್ನಗಳ ನಿರ್ಮಾಣದಲ್ಲಿ ತೃತೀಯ ಸ್ಥಾನ ಪಡೆದ ಲಕ್ಷಣ ಹಾಗೂ ಮೆಟಲ್ ಎನ್'ಗ್ರೇವಿಂಗ್'ನಲ್ಲಿ ತೃತೀಯ ಸ್ಥಾನ ಪಡೆದ ಶ್ರವನ್ ಕುಮಾರ್ ಇವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು. ಜೊತೆಗೆ ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ತರಭೇತಿ ನೀಡಿ ಸಹಕರಿಸಿದ ಚೋಮು ಕುಳೂರುರವರಿಗೆ ಶಾಲಾ ಶಿಕ್ಷಕ ವೃಂದದ ಪರವಾಗಿ ಸ್ಮರಣಿಕೆಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂಧಿ ಶ್ರೀಮತಿ ಅಂಬುಜಾಕ್ಷಿ ರವರು ತಮ್ಮ ವತಿಯಿಂದ ಬಹುಮಾನ ವಿಜೇತ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿದರು.  ಶಾಲಾ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ವಂದಿಸಿ, ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.



















Tuesday, 15 November 2016

ಮಕ್ಕಳ ದಿನಾಚರಣೆ

           ಪಂಡಿತ್ ಜವಹರಲಾಲ್ ನೆಹರುರವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ರವರು ನೆಹರೂರವರ ಜೀವನ ಸಾಧನೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಮಕ್ಕಳಿಗೆ ನೆಹರೂರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಕಾರ್ಯಕ್ರಮವನ್ನು ಮುನ್ನಡೆಸಿದರು. ಮಧ್ಯಾಹ್ನ ಪಾಯಸದೂಟವನ್ನು ಸವಿಯಲಾಯಿತು.













Saturday, 29 October 2016

ಶಾಸ್ತ್ರ ಮೇಳದ ಪ್ರತಿಭೆಗಳು

ಶಾಸ್ತ್ರ ಮೇಳದ ಪ್ರತಿಭೆಗಳು
ಸರಕಾರಿ ಪ್ರೌಢ ಶಾಲೆ ಪೈವಳಿಕೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ಬರೆಯುವ ಚೋಕ್ ನಿರ್ಮಾಣ ಸ್ಪರ್ಧೆಯಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ಪ್ರಥಮ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣ ಸ್ಪರ್ಧೆಯಲ್ಲಿ ಹರ್ಷಿತ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೆಟಲ್ ಎನ್'ಗ್ರೇವಿಂಗ್'ನಲ್ಲಿ ಶ್ರವಣ್ 'ಎ' ಗ್ರೇಡ್'ನೊಂದಿಗೆ ತೃತೀಯ, ತೆಂಗಿನ ಕಾಯಿ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲಾ ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಶಾಲಾ ಪಿ.ಟಿ.ಎ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Friday, 28 October 2016

ದೀಪಾವಳಿ ಆಚರಣೆ

             ನಮ್ಮ ಶಾಲೆಯಲ್ಲಿ ದೀಪಾವಳಿ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸಾಲು ಹಣತೆಗಳನ್ನು ಹಚ್ಚಿ, ವಿವಿಧ ಪಟಾಕಿಗಳನ್ನು ಸಿಡಿಸಿ ಮಕ್ಕಳು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ದೀಪಾವಳಿಯ ಹಿನ್ನೆಲೆಯನ್ನು ಕಥೆ ಹೇಳುವುದರೊಂದಿಗೆ ಮಕ್ಕಳಿಗೆ ವಿವರಿಸಿದರು. ಮಧ್ಯಾಹ್ನ ಪಾಯಸದ ಊಟ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಸೌಮ್ಯ ಪಿ, ರಘುನಾಥ ಕೆ, ಕುಮಾರಿ ಶ್ವೇತ ಹಾಗೂ ಗಂಜಿ ಬೇಯಿಸುವ ಜಲಜ ರವರು ಉಪಸ್ಥಿತರಿದ್ದು ಸಹಕರಿಸಿದರು.