ಇಂದಿನ ವೇಗದ ಬದುಕಿನಲ್ಲಿ ನಿತ್ಯ ಉಪಯೋಗಿಸುವ ಆಹಾರ ಅದೆಷ್ಟೋ ಬದಲಾವಣೆಗಳನ್ನು ಕಂಡಿದೆ. ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ರಾಗಿ, ಜೋಳ, ಅಕ್ಕಿ, ತರಕಾರಿಗಳು, ಸೊಪ್ಪು, ಬೇಳೆಕಾಳುಗಳು ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದರು. ಮನೆಯಲ್ಲಿಯೇ ತಾಜಾ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಪಿಜ್ಜಾ, ಬರ್ಗರ್, ನೂಡಲ್ಸ್ ಮತ್ತು ಪ್ಯಾಕೆಟ್ ಆಹಾರಗಳ ಸೇವನೆ ಹೆಚ್ಚಾಗಿದೆ. ಹಿಂದಿನ ಆಹಾರ ಪದ್ಧತಿಯಲ್ಲಿ ನೈಸರ್ಗಿಕ ಆಹಾರಗಳಿಗೆ ಹೆಚ್ಚಿನ ಮಹತ್ವವಿತ್ತು. ರಾಗಿ, ಜೋಳ, ಸೊಪ್ಪು, ತರಕಾರಿಗಳು ಮತ್ತು ಬೇಳೆಕಾಳುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಹಿಂದಿನ ಆಹಾರ ಪದ್ಧತಿಯು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತಿತ್ತು. ಹಾಗಾಗಿ ನಾವು ಹಿಂದಿನ ಆಹಾರ ಪದ್ಧತಿಯಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು, ಪೌಷ್ಟಿಕ ಆಹಾರವನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಪೋಷಕಾಹಾರಗಳ ಪರಿಚಯ ಹಾಗೂ ಅವುಗಳ ಪ್ರಾಮುಖ್ಯತೆಗಳ ಬಗ್ಗೆ ತಿಳಿಯಲು ಇಂದು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ವಿಶ್ವ ಆಹಾರ ದಿನಾಚರಣೆ'ಯನ್ನು ವಿಭಿನ್ನವಾಗಿ ಆಚರಿಸಲಾಯಿತು.
FLASH NEWS
Friday, 16 October 2026
Thursday, 15 October 2026
ವಿಶ್ವ ಕೈ ತೊಳೆಯುವ ದಿನಾಚರಣೆ:
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ವ್ಯಕ್ತಿ ಶುಚಿತ್ವವು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಈ ಶುಚಿತ್ವದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ವಿಶ್ವ ಕೈ ತೊಳೆಯುವ ದಿನ'ವನ್ನು ಆಚರಿಸಲಾಯಿತು.
Monday, 12 October 2026
ಕುಮಾರಿ ಆರ್ವಿ ಶೆಟ್ಟಿಯ ಹುಟ್ಟು ಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :
ಕುಳೂರು ಶಾಲಾ ಒಂದನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರ್ವಿ ಶೆಟ್ಟಿಯ ಹುಟ್ಟು ಹಬ್ಬಕ್ಕೆ ಹೆತ್ತವರು ವಿಶೇಷ ಮಧ್ಯಾಹ್ನದೂಟ ನೀಡುವ ಮೂಲಕ ಸಂಭ್ರಮಿಸಿದರು.
Friday, 9 October 2026
ಶ್ರೀಮತಿ ಪೃಥ್ವಿಯವರ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ವಿಶೇಷ ಭೋಜನ :
ನಮ್ಮ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಮಾಲತಿರವರ ಪುತ್ರಿಯಾಗಿರುವ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಪೃಥ್ವಿ ರಕ್ಷಿತ್ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ನಮ್ಮ ಕುಳೂರು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಯಿತು.
Friday, 2 October 2026
ಗಾಂಧೀಜಿ ಜಯಂತಿ ಹಾಗೂ ಶಾಸ್ತ್ರೀಜಿ ಜಯಂತಿ ಪ್ರಯುಕ್ತ ಸೇವನಾ ವಾರಾಚರಣೆ :
ದೇಶ ಕಂಡ ಮಹಾನ್ ನಾಯಕರಾದ ಮೋಹನ್ದಾಸ್ ಕರಮ ಚಂದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವನಾ ವಾರಾಚರಣೆಯನ್ನು ಆಚರಿಸಲಾಯಿತು.
Saturday, 26 September 2026
ಸಪ್ಟೆಂಬರ್ ತಿಂಗಳ ಬಾಲಸಭೆ :
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಸೆಪ್ಟಂಬರ್ ತಿಂಗಳ ಬಾಲಸಭೆಯನ್ನು ನಡೆಸಲಾಯಿತು.
Saturday, 19 September 2026
ಶಾಲಾ ಮಟ್ಟದ ಕ್ರೀಡಾಕೂಟ :
ಮಕ್ಕಳಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ, ಶಿಸ್ತು, ಸಮಯಪ್ರಜ್ಞೆ, ಸಮಾನತೆ, ಒಗ್ಗಟ್ಟು ಹಾಗೂ ಕ್ರೀಡಾಸಕ್ತಿಯನ್ನು ಮೂಡಿಸಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಯಿತು.