FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 30 October 2017

ಶಾಲಾ ಪ್ರತಿಭೆಗಳು

ನಮ್ಮ ಶಾಲಾ ಹೆಮ್ಮೆಯ ಪ್ರತಿಭೆಗಳಿವರು..‌... ಶಾಲೆಗೂ ಊರಿಗೂ ಕೀರ್ತಿ ತಂದ ವಿದ್ಯಾರ್ಥಿಗಳು.....

Sunday 29 October 2017

ಹೂದೋಟದಲ್ಲಿ ಶ್ರಮದಾನ

                 ನಮ್ಮ ಶಾಲಾ ಉದ್ಯಾನದಲ್ಲಿ ಬೆಳೆದಿರುವ ಕಳೆಗಳನ್ನು ಕೀಳಲು ಹಾಗೂ ಸುಂದರವಾಗಿಸಲು ಶಾಲಾ ಪಿ.ಟಿ.ಎ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶ್ರಮದಾನ ನಡೆಯಿತು.

Friday 27 October 2017

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ನಮ್ಮ ಶಾಲಾ ಮಕ್ಕಳ ಅಮೋಘ ಸಾಧನೆ: ಎಲ್ಲರಿಂದ ಪ್ರಶಂಸೆ

               ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಅಮೋಘ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
               ಮೀಯಪದವು ಹೈಸ್ಕೂಲ್ ಹಾಗೂ ಯು.ಪಿ ಶಾಲೆಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷಾ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವರ್ಕ್'ನಲ್ಲಿ ನಾಗರತ್ನ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಜಾಣ್ಮೆ ಪ್ರಶ್ನೆಯ ಸ್ಪರ್ಧೆಯಲ್ಲಿ ಭುವನ ಕೆ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್'ನಲ್ಲಿ ಸಾನ್ವಿಕ ಹಾಗೂ ನವ್ಯ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದಲ್ಲಿ ಎಲ್.ಪಿ. ವಿಭಾಗದ ಮಿನಿ 50 ಮೀ. ಓಟದ ಸ್ಪರ್ಧೆಯಲ್ಲಿ ನವ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಕುಳೂರು ಶಾಲೆಯ ಮಕ್ಕಳ ಈ ಪ್ರತಿಭೆಗಳನ್ನು ಕಂಡು ಊರವರು ಕೊಂಡಾಡಿ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾತೃ ಮಂಡಳಿ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ. 

 ಹೇಮಂತ್

 ಲಕ್ಷ್ಮಣ

 ಶ್ರೇಯಾ ಕರ್ಕೇರ

 ಶ್ರವಣ್ ಕುಮಾರ್ 

 ವರ್ಷಾ ಬಿ

 ನಾಗರತ್ನ 

 ನವ್ಯ
  ಭುವನ ಕೆ

  ಸಾನ್ವಿಕ

ಶಾಲೋದ್ಯಾನಕ್ಕೆ ಹಸಿರು ಹುಲ್ಲು

                 ನಮ್ಮ ಶಾಲಾ ಉದ್ಯಾನವನ್ನು ಇನ್ನಷ್ಟು ಸುಂದರವಾಗಿಸಲು ಉದ್ಯಾನಕ್ಕೆ ಹಸಿರು ಹುಲ್ಲು ಹಾಸಲಾಯಿತು. ಶ್ರೀ ಸತೀಶ್ ಎಲಿಯಾಣ ಹಾಗೂ ಶ್ರೀ ಅಭಿಜಿತ್ ಶೆಟ್ಟಿ ಕೊಂಡಾಣರವರು ಕೊಡುಗೆಯಾಗಿ ನೀಡಿದ ಹಸಿರು ಹುಲ್ಲನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಹರಿರಾಮ ಕುಳೂರು, ಸದಸ್ಯರಾದ ಶ್ರೀ ಅಬ್ದುಲ್ ಮಜೀದ್ ಸಾಹೇಬ್, ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಸೇರಿ ಶಾಲೋದ್ಯಾನಕ್ಕೆ ಹಾಸಿ,ಹಲವು ಹೂಗಿಡಗಳನ್ನು ನೆಟ್ಟು ಶಾಲೋದ್ಯಾನವನ್ನು ಇನ್ನಷ್ಟು ಸುಂದರವನ್ನಾಗಿಸಲಾಯಿತು.

Wednesday 25 October 2017

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಕುಳೂರು ಶಾಲಾ ಮಕ್ಕಳ ಅಮೋಘ ಸಾಧನೆ: ಎಲ್ಲರಿಂದ ಪ್ರಶಂಸೆ

ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಅಮೋಘ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೀಯಪದವು ಹೈಸ್ಕೂಲ್ ಹಾಗೂ ಯು.ಪಿ ಶಾಲೆಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷಾ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವರ್ಕ್'ನಲ್ಲಿ ನಾಗರತ್ನ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಜಾಣ್ಮೆ ಪ್ರಶ್ನೆಯ ಸ್ಪರ್ಧೆಯಲ್ಲಿ ಭುವನ ಕೆ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್'ನಲ್ಲಿ ಸಾನ್ವಿಕ ಹಾಗೂ ನವ್ಯ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದಲ್ಲಿ ಎಲ್.ಪಿ. ವಿಭಾಗದ ಮಿನಿ 50 ಮೀ. ಓಟದ ಸ್ಪರ್ಧೆಯಲ್ಲಿ ನವ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಕುಳೂರು ಶಾಲೆಯ ಮಕ್ಕಳ ಈ ಪ್ರತಿಭೆಗಳನ್ನು ಕಂಡು ಊರವರು ಕೊಂಡಾಡಿ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾತೃ ಮಂಡಳಿ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ.

Tuesday 24 October 2017

ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ

                 ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವವು ಮೀಯಪದವು ಯು.ಪಿ ಹಾಗೂ ಪ್ರೌಢ ಶಾಲೆಗಳಲ್ಲಿ ನಡೆಯಿತು. ನಮ್ಮ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿಸಿದರು. ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷಾ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವರ್ಕ್'ನಲ್ಲಿ ನಾಗರತ್ನ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಜಾಣ್ಮೆ ಪ್ರಶ್ನೆಯ ಸ್ಪರ್ಧೆಯಲ್ಲಿ ಭುವನ ಕೆ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್'ನಲ್ಲಿ ಸಾನ್ವಿಕ ಹಾಗೂ ನವ್ಯ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ.

Monday 23 October 2017

ಶಾಸ್ತ್ರೋತ್ಸವಕ್ಕೆ ತಯಾರಿ:

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವಕ್ಕೆ ಮಕ್ಕಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಯಿತು.

Thursday 19 October 2017

ದೀಪಾವಳಿ ಆಚರಣೆ

              ನಮ್ಮ ಶಾಲೆಯಲ್ಲಿ ದೀಪಾವಳಿ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸಾಲು ಹಣತೆಗಳನ್ನು ಹಚ್ಚಿ, ವಿವಿಧ ಪಟಾಕಿಗಳನ್ನು ಸಿಡಿಸಿ ಮಕ್ಕಳು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ದೀಪಾವಳಿಯ ಹಿನ್ನೆಲೆಯನ್ನು ಕಥೆ ಹೇಳುವುದರೊಂದಿಗೆ ಮಕ್ಕಳಿಗೆ ವಿವರಿಸಿದರು. ಮಧ್ಯಾಹ್ನ ಪಾಯಸದ ಊಟ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಸೌಮ್ಯ ಪಿ, ಕುಮಾರಿ ರೇಷ್ಮ, ಕುಮಾರಿ ಶ್ವೇತ ಹಾಗೂ ಗಂಜಿ ಬೇಯಿಸುವ ಜಲಜ ರವರು ಉಪಸ್ಥಿತರಿದ್ದು ಸಹಕರಿಸಿದರು.