FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 30 September 2022

ಸೆಪ್ಟಂಬರ್ 2022 - ಐದನೇ ವಾರದ ಮಧ್ಯಾಹ್ನದೂಟಕ್ಕೆ ಸಹಕರಿಸಿದವರು

 


ದಸರಾ ನಾಡ ಹಬ್ಬ ಆಚರಣೆ

        ಕನ್ನಡ ಭಾಷೆ, ಸಂಸ್ಕೃತಿಯ ಕುರಿತು ಮಕ್ಕಳಲ್ಲಿ ಒಲವು ಹಾಗೂ ಅರಿವನ್ನು ಮೂಡಿಸುವ ಉದ್ದೇಶದಿಂದ ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ನಾಡ ಹಬ್ಬವನ್ನು ಆಚರಿಸಲಾಯಿತು.

       ಆ ಪ್ರಯುಕ್ತ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಬಳಿಕ ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ರೀತಿಯ ಛಾಪನ್ನು ಮೂಡಿಸಿದ ಜಾನಪದ ಹಾಡುಗಳನ್ನು ಹಾಡುವುದರೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯವನ್ನು ಮಾಡಲಾಯಿತು. ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.





Monday 26 September 2022

ಶಾಲಾ ಮಟ್ಟದ ಮಕ್ಕಳ ಕ್ರೀಡಾಕೂಟ

      ಮಕ್ಕಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಲು, ಉಪಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳ ಆಯ್ಕೆ ಮಾಡಲು ಇಂದು ಶಾಲಾ ಮಟ್ಟದ ಕ್ರೀಡಾಕೂಟ ನಡೆಯಿತು.

      ಪ್ರತೀ ತರಗತಿಯ ಮಕ್ಕಳು ಈ ಕ್ರೀಡಾಕೂಟದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಶಾಲಾ ಶಿಕ್ಷಕ ವೃಂದ ಕ್ರೀಡಾಕೂಟವನ್ನು ನಡೆಸಿಕೊಟ್ಟರು.
















Monday 19 September 2022

ಹೂವಿನ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ

        ಕೇರಳದ ಪ್ರಾಂತೀಯ ಹಬ್ಬವಾದ ಓಣಂ ಆಚರಣೆಯ ಸಂದರ್ಭದಲ್ಲಿ ನಮ್ಮ ಕುಳೂರು ಶಾಲೆಯಲ್ಲಿ ಪ್ರತೀ ತರಗತಿಯಲ್ಲಿ ಹಾಕಿದ ಹೂವಿನ ರಂಗೋಲಿಯಲ್ಲಿ ಅತ್ಯುತ್ತಮವಾಗಿ ರಚನೆಯಾದ ಎರಡನೇ ತರಗತಿಯ ಮಕ್ಕಳ ಹೂವಿನ ರಂಗೋಲಿಗೆ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಪ್ರೋತ್ಸಾಹಕ ಬಹುಮಾನವನ್ನು ನೀಡಿದರು. ಅವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ. 



Saturday 17 September 2022

ಶಾಲಾ ತರಕಾರಿ ತೋಟದಲ್ಲಿ ಹಳೆ ವಿದ್ಯಾರ್ಥಿಗಳ ಶ್ರಮದಾನ

         ಪ್ರತೀ ವರ್ಷ ಶಾಲಾ ತರಕಾರಿ ತೋಟ ನಿರ್ಮಾಣ ಮಾಡಿ ಮಾದರಿ ಎನಿಸಿದ ನಮ್ಮೀ ಶಾಲೆಯಲ್ಲಿ ಈ ವರ್ಷವೂ ತರಕಾರಿ ತೋಟ ನಿರ್ಮಾಣಕ್ಕೆ ಇಂದು ಶ್ರಮದಾನ ನಡೆಯಿತು.

         ನಮ್ಮೀ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಮತ್ತು ಸಕ್ರಿಯ ಕಾರ್ಯಕರ್ತ ಹರಿರಾಮ ಕುಳೂರು ರವರು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಇಂದು ಬೆಳಗ್ಗಿನಿಂದ ಸಂಜೆಯ ತನಕ ಶಾಲಾ ತರಕಾರಿ ತೋಟದಲ್ಲಿ ಕೃಷಿ ಮಾಡಲು ಶ್ರಮದಾನ ನಡೆಸಿದರು.

      ಮೊದಲ ಹಂತವಾಗಿ ತೊಂಡೆ ಕೃಷಿಗೆ ತರಕಾರಿ ತೋಟವನ್ನು ಸಜ್ಜುಗೊಳಿಸಿದರು. ಮುಂದಿನ ದಿನಗಳಲ್ಲಿ ಇತರ ತರಕಾರಿ ಉಪ ಬೆಳೆಗಳನ್ನು ಬೆಳೆಸುವ ಯೋಜನೆಯನ್ನೂ ಹಾಕಿಕೊಂಡರು.

       ತರಕಾರಿ ತೋಟ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ತರಕಾರಿ ಕೃಷಿ ಮಾಡಲೂ ತಮ್ಮ ಸಮಯವನ್ನು ಮೀಸಲಿಟ್ಟು ಸಹಕರಿಸಿದ ಇಬ್ಬರಿಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.






      

Sunday 11 September 2022

ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ

         2024 ನೇ ವರ್ಷದಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಿರುವ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಈ ಆಚರಣೆಯನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ನಿರ್ಧರಿಸಲಾಗಿದೆ. ಆ ಪ್ರಯುಕ್ತ ಶಾಲಾ ಹಳೆ ವಿದ್ಯಾರ್ಥಿ ಸಂಘವು ಕಾರ್ಯಾಚರಿಸುತ್ತಿದೆ.

         ಇದರ ಭಾಗವಾಗಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

         ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಜತೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ವಂದಿಸಿದರು.




Friday 2 September 2022

ಓಣಂ ಆಚರಣೆ:

          ಕೇರಳ ಪ್ರಾಂತೀಯ ಹಬ್ಬವಾದ ಓಣಂ ಹಬ್ಬದ ಆಚರಣೆಯನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

          ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಓಣಂ ಹಬ್ಬದ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸಿದರು. ಮಕ್ಕಳಿಗೆ ವಿವಿಧ ಮನೋರಂಜನಾ ಆಟಗಳನ್ನು ಆಡಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಮದ್ಯಾಹ್ನ ಎಲ್ಲರಿಗೂ ಓಣಂ ಊಟ ಏರ್ಪಡಿಸಲಾಯಿತು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

















ಆಗಸ್ಟ್ 2022 - ನಾಲ್ಕನೇ ವಾರದ ಮಧ್ಯಾಹ್ನದೂಟಕ್ಕೆ ಸಹಕರಿಸಿದವರು