FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 26 February 2022

ಫೆಬ್ರವರಿ ತಿಂಗಳ ನಾಲ್ಕನೇ ವಾರದ ಮಧ್ಯಾಹ್ನದೂಟಕ್ಕೆ ಸಹಕರಿಸಿದವರು





ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆ

       ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಇಂದು ಕರೆಯಲಾಯಿತು.

      ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಪ್ರೀ ಪ್ರೈಮರಿ ವಿಭಾಗದ ಮಧ್ಯಾಹ್ನದೂಟದ ಪ್ರಾಯೋಜಕತ್ವವನ್ನು ಈ ಹಿಂದಿನಂತೆ ರಕ್ಷಕ-ಶಿಕ್ಷಕ ಸಂಘವು ವಹಿಸಿಕೊಂಡಿತು. 2022-23 ಸಾಲಿನ ಮಕ್ಕಳ ದಾಖಲಾತಿಗೆ ಎಲ್ಲರ ಸಹಕಾರವನ್ನು ಕೋರಿ, ಮಕ್ಕಳ ಶಾಲಾ ಸೇರ್ಪಡೆಗೆ ಮನೆ ಭೇಟಿ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಶಾಲಾ ವಾರ್ಷಿಕೋತ್ಸವವನ್ನು ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಸರಕಾರದ ಅನುಮತಿ ದೊರೆತರೆ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



Monday 21 February 2022

ವಿಶ್ವ ಮಾತೃ ಭಾಷಾ ದಿನಾಚರಣೆ

       ವಿಶ್ವ ಮಾತೃ ಭಾಷಾ ದಿನಾಚರಣೆಯ ಅಂಗವಾಗಿ ಇಂದು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ದಿನದ ವಿಶೇಷತೆಯ ಕುರಿತು ಮಕ್ಕಳಿಗೆ ತಿಳಿಸಿದರು. ಬಳಿಕ ಮಾತೃ ಭಾಷೆಯ ಕುರಿತು ಪ್ರತಿಜ್ಞೆ ಬೋಧಿಸಲಾಯಿತು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.




Thursday 17 February 2022

ಅಡುಗೆ ಕೋಣೆ ಮತ್ತು ಶೇಖರಣಾ ಕೋಣೆ ನಿರ್ಮಾಣಕ್ಕೆ ಪೂರ್ವಬಾವಿ ಸಭೆ

       ವಿಶೇಷ ಪ್ಯಾಕೆಜ್ ಮೂಲಕ ಶಾಲೆಗೆ ದೊರಕುವ ಮಧ್ಯಾಹ್ನದೂಟದ ಯೋಜನೆಗೆ ಅಡುಗೆ ಕೋಣೆ ಮತ್ತು ಶೇಖರಣಾ ಕೋಣೆಯ ನಿರ್ಮಾಣ ಕಾರ್ಯದ ಮೊದಲ ಭಾಗವಾಗಿ ಇಂದು ಪೂರ್ವಬಾವಿ ಸಭೆ ಸೇರಲಾಯಿತು. ಈ ಸಭೆಯಲ್ಲಿ ಮೀಂಜ ಪಂಚಾಯತ್ ಮಟ್ಟದ ಉಸ್ತುವಾರಿ ಹೊಂದಿದ ಎಂಜಿನಿಯರ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಯೋಜನೆಗೆ ಬಂದಿರುವ ಮೊತ್ತವನ್ನು ವಿನಿಯೋಗಿಸುವ ಬಗೆಗೆ ಮೀಂಜ ಪಂಚಾಯತ್ ಕಚೇರಿಗೆ ಹಾಗೂ ಎಂಜಿನಿಯರ್ ಗೆ ಯಾವುದೇ ಆದೇಶಗಳು ಬರದೇ ಇರುವುದರಿಂದ ಅಲ್ಲಿವರೆಗೆ ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಬಗೆಗೆ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.



Monday 14 February 2022

ಪ್ರೀ ಪ್ರೈಮರಿ ವಿಭಾಗದ ತರಗತಿಗಳಿಗೆ ಚಾಲನೆ

      ಕಳೆದ 2 ವರ್ಷಗಳಿಂದ ಸ್ಥಗಿತವಾಗಿದ್ದ ಪ್ರೀ ಪ್ರೈಮರಿ ವಿಭಾಗದ ತರಗತಿಗಳು ಇದೀಗ ಸರಕಾರದ ಆದೇಶದ ಮೇರೆಗೆ ಆರಂಭಿಸಲು ಅನುಮತಿ ದೊರೆತಿದ್ದು, ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೀ ಪ್ರೈಮರಿ ವಿಭಾಗದ ತರಗತಿಗೆ ಇಂದು ಚಾಲನೆ ನೀಡಲಾಯಿತು.

       ಶಾಲೆಯ ಪ್ರೀ ಪ್ರೈಮರಿ ವಿಭಾಗದ ನೇತೃತ್ವ ವಹಿಸುತ್ತಿರುವ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಸಹಕರಿಸುತ್ತಿರುವ ರಕ್ಷಕ ಶಿಕ್ಷಕ ಸಂಘದ ಸಹಯೋಗದಲ್ಲಿ ಇಂದು ಆಫ್ಲೈನ್ ತರಗತಿಗಳಿಗೆ ಚಾಲನೆ ನೀಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಮಕ್ಕಳಿಗೆ ಬಲೂನ್ ಹಾಗೂ ಮಾಸ್ಕ್ ಗಳನ್ನು ನೀಡಿ ಸ್ವಾಗತಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ, ರಕ್ಷಕ ಸಂಘದ ಉಪಾಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಮಾತೃ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿ ಕುಮಾರ್ ಕುಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

      ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.















Tuesday 8 February 2022

2022-23 ನೇ ಸಾಲಿನ ದಾಖಲಾತಿಗೆ ಕರಪತ್ರ ಬಿಡುಗಡೆ

        2022-23 ನೇ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಗೆ ಪ್ರಾರಂಭದ ಹಂತವಾಗಿ ಶಾಲಾ ಮಾಹಿತಿಯನ್ನೊಳಗೊಂಡ ಕರಪತ್ರ (pamplet) ಬಿಡುಗಡೆಯು ಇಂದು ನಡೆಯಿತು.

       ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನ ರವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಪೊಯ್ಯೆಲ್, ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.





ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆ

       2021-22 ನೇ ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ ಇರುವ ಈ ಸಮಯದಲ್ಲಿ ಕೊರೋನ ಕಾರಣದಿಂದ ಶಾಲೆ ಮುಚ್ಚಲ್ಪಟ್ಟು ಇದೀಗ ಬರುವ 14-02-2022 ನೇ ಸೋಮವಾರದಿಂದ ಮತ್ತೆ ತೆರೆಯುತ್ತಿದೆ.

       ಈ ಸಂದರ್ಭದಲ್ಲಿ ಮುಂದಿನ ದಿನಗಳ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆಯನ್ನು ಇಂದು ಕರೆಯಲಾಗಿದ್ದು ಇದರ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮ ರವರು ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.




Sunday 6 February 2022

ತರಕಾರಿ ಕೃಷಿಗೆ ಜೈವಿಕ ಗೊಬ್ಬರ ಬಳಕೆ

       ಶಾಲಾ ತರಕಾರಿ ತೋಟಕ್ಕೆ ಇಂದು ಜೈವಿಕ ಗೊಬ್ಬರ ತಂದು ಇಡಲಾಯಿತು.

      ಹಟ್ಟಿ ಗೊಬ್ಬರದ ವ್ಯವಸ್ಥೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನರವರು ಒದಗಿಸುವ ಮೂಲಕ ಸಹಕರಿಸಿದರು. ಶಶಿಧರ ಶೆಟ್ಟಿ ಪೊಯ್ಯೆಲ್ ಸಹಕರಿಸಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.