FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 29 March 2019

ಹಳೆ ವಿದ್ಯಾರ್ಥಿ ಸಂಘದ ಸಮಿತಿ ಪುನರ್ ರೂಪೀಕರಣ ಸಭೆ

    ತಾ. 29-03-2019 ನೇ ಶುಕ್ರವಾರದಂದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಮಿತಿ ಪುನರ್ ರೂಪೀಕರಣ ಸಭೆಯು ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ವಹಿಸಿದ್ದರು. ಶಾಲಾ ಪಿ. ಟಿ. ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಕೃಷ್ಣವೇಣಿ ಪಾದೆ ಕುಳೂರು ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮುಂದಿನ ಎರಡು ವರ್ಷಗಳ ಕಾಲದ ಹಳೆ ವಿದ್ಯಾರ್ಥಿ ಸಂಘದ ಸಮಿತಿಯ ಪುನರ್ ರೂಪೀಕರಣದಲ್ಲಿ ಆಯ್ಕೆಯಾದ ಸಾರಥಿಗಳು..
ಅಧ್ಯಕ್ಷ:  ಮೊಹಮ್ಮದ್ ಕಂಚಿಲ
ಉಪಾಧ್ಯಕ್ಷರು: ಬಾಲಕೃಷ್ಣ ಶೆಟ್ಟಿ, ಪೊಯ್ಯೆಲ್
ಚಂದ್ರಹಾಸ ಶೆಟ್ಟಿ, ಕುಳೂರು ಕನ್ಯಾನ
ಕೃಷ್ಣವೇಣಿ, ಕುಳೂರು ಪಾದೆ
ಕಾರ್ಯದರ್ಶಿ:  ಶಶಿಕುಮಾರ್ ಕುಳೂರು
ಜತೆ ಕಾರ್ಯದರ್ಶಿ:  ಅಬ್ದುಲ್ ಮಜೀದ್ ಸಾಹೇಬ್, ಚಾರ್ಲ
ಕೋಶಾಧಿಕಾರಿ:  ಚಿಕ್ಕಪ್ಪ ಶೆಟ್ಟಿ, ಎಲಿಯಾಣ
ಎಲ್ಲರಿಗೂ ಶಾಲಾ ಪರವಾಗಿ ಅಭಿನಂದನೆಗಳು...





ಪಿ. ಟಿ. ಎ ಸಭೆ ಹಾಗೂ ವರ್ಕ್ ಶೀಟ್ ವಿತರಣೆ

       2018-19 ನೇ ಶೈಕ್ಷಣಿಕ ವರ್ಷದ ಕೊನೆಯ ಪಿ. ಟಿ. ಎ ಸಭೆಯು ತಾ. 29-03-2019 ನೇ ಶುಕ್ರವಾರದಂದು ನಡೆಯಿತು. ಶಾಲಾ ಪಿ. ಟಿ. ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ಅಧ್ಯಕ್ಷತೆ ವಹಿಸಿದ್ದರು.ಮಾತೃ ಪಿ.ಟಿ.ಎ ಅಧ್ಯಕ್ಷೆ ಆಶಾಲತ ಕುಳೂರು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಕಮಲಾಕ್ಷ ಕಲ್ಕಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಶಾಲಾ ಮಕ್ಕಳ ಬೇಸಿಗೆ ರಜೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಪಿ. ಟಿ. ಎ ವತಿಯಿಂದ ಆದ ವಿವಿಧ ಶಾಲಾಭಿವೃದ್ಧಿ ಕಾರ್ಯಕ್ರಮಗಳು, ಚಟುವಟಿಕೆಗಳ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.




ನಾಲ್ಕನೇ ತರಗತಿ ಮಕ್ಕಳ ವಿದಾಯ ಕೂಟ

        2018-19 ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಕೊನೆಯ ದಿನವಾದ ತಾ. 29-03-2019 ನೇ ಶುಕ್ರವಾರದಂದು ನಾಲ್ಕನೇ ತರಗತಿ ಮಕ್ಕಳ ವಿದಾಯ ಕೂಟ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪಿ. ಟಿ. ಎ ಅಧ್ಯಕ್ಷ ಶ್ರೀ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಮಾತೃ ಪಿ. ಟಿ. ಎ ಅಧ್ಯಕ್ಷೆ ಶ್ರೀಮತಿ ಆಶಾಲತ ಕುಳೂರು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಕಮಲಾಕ್ಷ ಕಲ್ಕಾರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಕ್ಕಳ ಹೆತ್ತವರ ಪರವಾಗಿ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಶ್ರೀಮತಿ ರೇಣುಕ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಾಲ್ಕನೇ ತರಗತಿ ಮಕ್ಕಳು ತಾವೇ ರಚಿಸಿ ಹಾಡಿದ 'ಬಿಟ್ಟೋಗಲ್ಲಾ ಶಾಲೆನಾ... ' ಹಾಡು ಎಲ್ಲರ ಮನ ಮುಟ್ಟಿ ಕಣ್ನಂಚಲ್ಲಿ ನೀರು ತರಿಸಿತು. ಶಾಲಾ ವಿದ್ಯಾರ್ಥಿಗಳಾದ ದುರ್ಗಾಪ್ರಸಾದ್ ಶಾಲೆಗೆ ಗಡಿಯಾರ, ಸಾನ್ವಿಕ ಹೂದಾಣಿ ಹಾಗೂ ವಿದ್ಯಾರ್ಥಿ ವೃಂದ  ಅಧ್ಯಾಪಕ ವೃಂದಕ್ಕೆ ವಿವಿಧ ಉಡುಗೊರೆಗಳನ್ನು ನೀಡಿದರು. ತಮಗೆ ವಿದ್ಯೆಯನ್ನು ಕಲಿಸಿದ ಗುರು ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಶಾಲಾ ಅಧ್ಯಾಪಕ ವೃಂದ ಮಕ್ಕಳಿಗೆ ಶುಭ ಕೋರಿ ಹಾರೈಸಿದರು.






















Wednesday 27 March 2019

ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

           ಆತ್ಮೀಯ ವಿದ್ಯಾಭಿಮಾನಿಗಳೇ, ನಮ್ಮ ಹೆಮ್ಮೆಯ ಪ್ರತೀಕವಾಗಿರುವ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಳೆದ ಕೆಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಸಮಾಜಕ್ಕೆ ಮಾದರಿಯಾಗುವಂತೆ ಪುರೋಗತಿಯನ್ನು ಕಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ನಮಗೆಲ್ಲಾ ಹೆಮ್ಮೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಳೆದ ಎರಡು ವರ್ಷಗಳ ಹಿಂದೆ ರೂಪುಗೊಂಡ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಸಂಘ. ಎಲ್ಲಿಯೂ ಕಂಡು ಕೇಳರಿಯದ ರೀತಿಯಲ್ಲಿ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲರೂ ನಿಬ್ಬೆರಗಾಗುವಂತೆ ಶಾಲಾ ಚಟುವಟಿಕೆ/ಕಾರ್ಯಕ್ರಮಗಳ ಜೊತೆಗೆ ಶಾಲೆಯಲ್ಲಿ ಹಲವಾರು ಬದಲಾವಣೆಗಳನ್ನು ಕಾಣುವಂತೆ ಮಾಡಿರುವುದು ಈಗ ಇತಿಹಾಸ. ಹಳೆ ವಿದ್ಯಾರ್ಥಿ ಸಂಘದ ದಿಟ್ಟ ಹೆಜ್ಜೆ, ಎಲ್ಲರ ಒಗ್ಗಟ್ಟು, ಸಹಕಾರ ಹಾಗೂ ದಕ್ಷ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಸ್ವಾರ್ಥ ರಹಿತ ಆಡಳಿತ ಎಲ್ಲವೂ ಕುಳೂರು ಶಾಲಾ ಚಿತ್ರಣವನ್ನೇ ಧನಾತ್ಮಕವಾಗಿ ಬದಲಾವಣೆ ಮಾಡಿದೆ.*
          ಹಳೆ ವಿದ್ಯಾರ್ಥಿ ಸಂಘ ರೂಪುಗೊಂಡಾಗ ತೆಗೆದುಕೊಂಡ ನಿರ್ಧಾರದಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಸಮಿತಿಯ ಪುನರ್ ರೂಪೀಕರಣ ನಡೆಯುತ್ತದೆ. ನಮ್ಮ ಈಗಿನ ಸಮಿತಿಗೆ ಈಗಾಗಲೇ ಎರಡು ವರ್ಷಗಳು ಆಗಿದ್ದು ಮುಂದಿನ ಎರಡು ವರ್ಷಗಳ ಅವಧಿಗೆ ಸಮಿತಿಯ ಪುನರ್ ರೂಪೀಕರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇದೇ ಬರುವ ತಾ. 29-03-2019 ನೇ ಶುಕ್ರವಾರದಂದು ಅಪರಾಹ್ನ ಗಂಟೆ 03:00 ಕ್ಕೆ ಸರಿಯಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಮಹಾ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಶಾಲಾಭಿಮಾನಿಗಳಾದ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ, ಸಲಹೆ ಸೂಚನೆಗಳನ್ನಿತ್ತು ಸಮಿತಿಯ ಪುನರ್ ರೂಪೀಕರಣದಲ್ಲಿ ಭಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಇತೀ,

ಕಾರ್ಯದರ್ಶಿ
ಹಳೆ ವಿದ್ಯಾರ್ಥಿ ಸಂಘ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಳೂರು

ವಿ.ಸೂ: 2019-20 ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯತನವನ್ನು ಆರಂಭಿಸಲಾಗಿದೆ. ಸಮಿತಿಯಲ್ಲಿ ಸದಸ್ಯತ್ವವನ್ನು ಪಡೆಯಲು ವಾರ್ಷಿಕ ಸದಸ್ಯತನ ರೂ. 100, ಪಂಚ ವಾರ್ಷಿಕ ಸದಸ್ಯತನ ರೂ. 500 ಅಥವಾ ಅಜೀವ ಸದಸ್ಯತನ (ಹತ್ತು ವರ್ಷ) ರೂ. 1000 ತೆತ್ತು ನೂತನ ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾಗಿ ಸಹಕರಿಸಬೇಕಾಗಿ ವಿನಂತಿ.

Sunday 24 March 2019

ಮಾದರಿಯೆನಿಸಿದ ಶಾಲಾ ಜೈವಿಕ ತರಕಾರಿ ಕೃಷಿ ತೋಟ


           ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಜೈವಿಕ ತರಕಾರಿ ಕೃಷಿ ತೋಟ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. 
       ಮಕ್ಕಳಲ್ಲಿ ಎಳವೆಯಲ್ಲೇ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಲು, ಸ್ವಾವಲಂಬಿ ಜೀವನದ ಅರಿವನ್ನು ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ಜೈವಿಕ ತರಕಾರಿ ಕೃಷಿ ತೋಟ ಇದೀಗ ಎಲ್ಲರಿಗೂ ಮಾದರಿಯೆನಿಸಿದೆ. ಮೀಂಜ ಕೃಷಿ ಇಲಾಖೆಯ ಸಹಕಾರದೊಂದಿಗೆ ಶಾಲಾ ಪಿ. ಟಿ. ಎ ಅಧ್ಯಕ್ಷರ ಮುತುವರ್ಜಿಯಿಂದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪಿ. ಟಿ. ಎ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದಿಂದ ನಿರ್ಮಾಣಗೊಂಡ ತೊಂಡೆ ಕೃಷಿ ತೋಟವು ಶಾಲೆಗೊಂದು ಆದಾಯ ಮೂಲವಾಗಿ ಪರಿಣಮಿಸಿದೆ. ಶಾಲಾ ಮಕ್ಕಳ ಮಧ್ಯಾಹ್ನದೂಟಕ್ಕೆ ಸಾಕಷ್ಟು ಬಳಸಿ ಉಳಿದ ತೊಂಡೆ ಕಾಯಿಯನ್ನು ಮಾರಾಟ ಮಾಡಲಾಗಿದ್ದು ಈಗಾಗಲೇ ಸುಮಾರು 8 ಕ್ವಿಂಟಾಲ್ ನಷ್ಟು ಮಾರಾಟ ಮಾಡಲಾಗಿದೆ. ಮಾರಾಟದಿಂದ ದೊರಕಿದ ಮೊತ್ತವನ್ನು ಶಾಲಾಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. "ಕೇವಲ ಒಂದು ಕೃಷಿ ತೋಟದಿಂದ ಮಕ್ಕಳಿಗೆ ಕೃಷಿಯ ಕಡೆಗೆ ಒಲವನ್ನು ಮೂಡಿಸುವುದರ ಜೊತೆಗೆ ಆದಾಯ ಮೂಲವಾಗಿ ಪರಿಣಮಿಸಿದ್ದು ಶಾಲೆಗೊಂದು ವರದಾನವಾಗಿದೆ, ಎಲ್ಲರ ಸಹಕಾರ ಇದ್ದರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ" ಎಂದು ಶಾಲಾ ಮುಖ್ಯೋಪಾಧ್ಯಾಯರು ಹೆಮ್ಮೆಯಿಂದ ಹೇಳುವರು.











Saturday 2 March 2019

ಶೈಕ್ಷಣಿಕ ಪ್ರವಾಸ 2018-19

        2018-19 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವಾಸವು ತಾ. 02-03-2018 ನೇ ಶನಿವಾರದಂದು ನಡೆಸಲಾಯಿತು. ಶಾಲಾ ಮಕ್ಕಳು, ಅಧ್ಯಾಪಕ ವೃಂದ ಹಾಗೂ ಮಕ್ಕಳ ಹೆತ್ತವರು ಸೇರಿ ಕರ್ನಾಟಕ ರಾಜ್ಯದ ವಿವಿಧ ಪ್ರವಾಸೀ ತಾಣಗಳನ್ನು ಸಂದರ್ಶಿಸಿದೆವು. ಮೂಡಬಿದಿರೆ ಸಾವಿರ ಕಂಬದ ಬಸದಿ, ಅಲಂಕಾರಗುಡ್ಡೆ ನಿಸರ್ಗಧಾಮ, ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟ, ಮಣಿಪಾಲದ ಉದಯವಾಣಿ ದಿನಪತ್ರಿಕೆಯ ಮುದ್ರಣಾಲಯ, ಮಣಿಪಾಲದ ಕೆ. ಎಂ. ಸಿ ಅಂಗರಚನಾ ಶಾಸ್ತ್ರ ಕೇಂದ್ರ (Anatomy Museum), ಕಾಪು ಲೈಟ್ ಹೌಸ್ ಹಾಗೂ ಸಮುದ್ರ ತೀರ ಮೊದಲಾದ ಸ್ಥಳಗಳನ್ನು ಸಂದರ್ಶಿಸಲಾಯಿತು.