FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 27 June 2022

ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ, ವಿದ್ಯಾರಂಗ ಸಾಹಿತ್ಯ ವೇದಿಕೆ ಹಾಗೂ ಬಾಲ ಸಭೆಯ ಉದ್ಘಾಟನೆ

          ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ, ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ವಿದ್ಯಾರಂಗ ಸಾಹಿತ್ಯ ವೇದಿಕೆ ಹಾಗೂ ಬಾಲ ಸಭೆಯ ಉದ್ಘಾಟನೆಯು ನಡೆಯಿತು.

Tuesday 21 June 2022

ಯೋಗ ದಿನಾಚರಣೆ

         ಭಾರತದ ಪಾರಂಪರಿಕ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿ 8 ವರ್ಷಗಳಾದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

Monday 20 June 2022

ರಕ್ಷಕ-ಶಿಕ್ಷಕ ಸಂಘದ ಮಹಾಸಭೆ : ನೂತನ ಸಮಿತಿ ರೂಪೀಕರಣ

        ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಇಂದು ನಡೆಯಿತು.

ವಾಚನ ವಾರಚರಣೆಯ ಉದ್ಘಾಟನೆ

          ಕೇರಳ ರಾಜ್ಯಾದ್ಯಂತ ಪುಸ್ತಕ ಓದುವಿಕೆಗೆ ಪ್ರೇರಣೆ ನೀಡಿ, ಅಸಂಖ್ಯಾತ ಗ್ರಂಥಾಲಯದ ಸ್ಥಾಪನೆಗೆ ಕಾರಣಕರ್ತರಾದ, ಗ್ರಂಥ ಶಾಲಾ ಸ್ಥಾಪಕ ಪಿ. ಎನ್. ಪಣಿಕ್ಕರ್ ರವರ ಚರಮ ದಿನವಾದ ಜೂನ್ 19 ಕೇರಳದೆಲ್ಲೆಡೆ ವಾಚನಾ ದಿನವಾಗಿ ಆಚರಿಸುತ್ತಿದ್ದು, ಇದರಂಗವಾಗಿ ಕುಳೂರು ಶಾಲೆಯಲ್ಲಿ ಇಂದು ವಾಚನ ವಾರಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು.

Sunday 19 June 2022

ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ : ನೂತನ ಸಮಿತಿ ರೂಪೀಕರಣ

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಇಂದು ಶಾಲೆಯಲ್ಲಿ ನಡೆಯಿತು.

Wednesday 15 June 2022

ಶಾಲಾ ಪರಿಸರದಲ್ಲಿ ತೆಂಗಿನ ಸಸಿ ನೆಟ್ಟು ಹುಟ್ಟು ಹಬ್ಬ ಆಚರಣೆ

       ತನ್ನ ಹುಟ್ಟಿದ ದಿನದಂದು ಶಾಲಾ ಪರಿಸರದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ರವರು ಹುಟ್ಟು ಹಬ್ಬವನ್ನು ಆಚರಿಸಿದರು.

       ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದು, ಶುಭಾಶಯ ಕೋರಿದರು.





Thursday 9 June 2022

ವಿಶೇಷ ಹುಟ್ಟು ಹಬ್ಬ ಆಚರಿಸಿ ಮಾದರಿಯಾದ ಶಾಲಾ ವಿದ್ಯಾರ್ಥಿನಿ

          ಶಾಲಾ ವಿದ್ಯಾರ್ಥಿನಿ ತನ್ನ ಹುಟ್ಟುಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿಕೊಂಡು ಮಾದರಿಯಾದಳು.

          ಮೂರನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿ ತನ್ನ ಹುಟ್ಟಿದ ದಿನವಾದ ಇಂದು ಶಾಲೆಯ ಎಲ್ಲಾ ತರಗತಿಗಳಿಗೆ ಆಕರ್ಷಕ ಕಲಿಕಾ ಚಾರ್ಟುಗಳನ್ನು ನೀಡುವ ಮೂಲಕ ಗಮನ ಸೆಳೆದಳು.

Monday 6 June 2022

ಪರಿಸರ ದಿನಾಚರಣೆ:

          ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.

         ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮರವರು ಚಾಲನೆ ನೀಡಿದರು.

Wednesday 1 June 2022

ನವಾಗತ ಮಕ್ಕಳ ಸ್ವಾಗತಕ್ಕೆ ಸಂಭ್ರಮದ ಪ್ರವೇಶೋತ್ಸವ:

            ಜೂನ್ ಮೊದಲ ದಿನಗಳಲ್ಲಿ ನಡೆಯುತ್ತಿದ್ದ ಶಾಲಾ ಪ್ರವೇಶೋತ್ಸವ ಕಳೆದ ಎರಡು ವರ್ಷಗಳಲ್ಲಿ ಕೊರೋನ ಸಂಧಿಗ್ಧ ಪರಿಸ್ಥಿತಿಯಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ. ಆ ನೋವನ್ನು ಮರೆಸುವಂತೆ ಈ ವರ್ಷ ಹೊಸ ಹುರುಪಿನೊಂದಿಗೆ, ನವೀನ ಚಿಂತನೆಗಳೊಂದಿಗೆ ಕಾಲಿಟ್ಟ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶೋತ್ಸವವನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸಲಾಯಿತು.

        ಬೆಳಿಗ್ಗೆ ನವಾಗತ ಮಕ್ಕಳನ್ನು ಪರಿಸರ ಸ್ನೇಹಿಯಾಗಿ ಅಲಂಕಾರದಿಂದ ಶಾಲೆಯು ಸ್ವಾಗತಿಸಿತು. ಮಕ್ಕಳಿಗೆ ಕಿರೀಟ ಧರಿಸಿ, ಬಲೂನ್ ನೀಡಿ ಶಾಲಾ ಶಿಕ್ಷಕ ವೃಂದ ಹಾಗೂ ಅತಿಥಿಗಳು ತರಗತಿಗಳಿಗೆ ಕರೆತಂದರು.

        ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮೀಂಜ ಪಂಚಾಯತು ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹೇರಂಭ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕಾಧ್ಯಕ್ಷರು ಹಾಗೂ ಶಾಲಾ ಹಳೆ ವಿದ್ಯಾರ್ಥಿಯೂ ಆಗಿರುವ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಆಗಮಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾರಾಯಣ ನೈಕ್ ನಡುಹಿತ್ಲು, ಮಜಿಬೈಲ್ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಮಮ್ಮುಞಿ ಹಾಜಿ ಉಪಸ್ಥಿತರಿದ್ದರು.

           ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೊಡುಗೆಯಾಗಿ ನೀಡಿದ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ಅತಿಥಿಗಳು ಮಕ್ಕಳಿಗೆ ವಿತರಿಸಿದರು. ಕೊಡುಗೆ ನೀಡಿದ ಸ್ನೇಹ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಶಾಂತಿನಗರ ಕುಳೂರು, ಟೀಮ್ ಅಘೋರ ಕುಳೂರು, ನಿತ್ಯಾನಂದ ಭಜನಾ ಮಂದಿರ ಕುಳೂರು, ನವಯುವಕ ಕಲಾ ವೃಂದ ಚಿನಾಲ, ಮಜಿಬೈಲು ಸಹಕಾರಿ ಬ್ಯಾಂಕ್ (ನಿ.), ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘಗಳಿಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ದೊರೆತ ಸಮವಸ್ತ್ರವನ್ನು ವಿತರಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶಾಲೆಯ ಮಧ್ಯಾಹ್ನದೂಟಕ್ಕೆ ಕೊಡುಗೆಯಾಗಿ ಕುಕ್ಕರನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ನವಾಗತ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. 2022-23 ನೇ ಸಾಲಿನ ಶಾಲಾ ಅಕಾಡೆಮಿಕ್ ಮಾಸ್ಟರ್ ಪ್ಲಾನ್ ನ್ನು ಶಾಲಾ ಶಿಕ್ಷಕಿ ನಯನ ಎಂ ಮಂಡಿಸಿದರು.

           ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

          ಬಳಿಕ ಶಾಲಾ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಶಿಕ್ಷಕಿಯರು ನಡೆಸಿಕೊಟ್ಟರು. ಇತ್ತೀಚೆಗೆ ಮದುವೆಯಾದ ಶಾಲಾ ಶಿಕ್ಷಕಿ ನಯನ ಎಂ ರವರು ಮಧ್ಯಾಹ್ನ ಎಲ್ಲರಿಗೂ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.