FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 15 February 2020

ಶಾಲಾ ವಾರ್ಷಿಕೋತ್ಸವ @ ಯೂಟ್ಯೂಬ್

       ಶಾಲಾ ವಾರ್ಷಿಕೋತ್ಸವದ ಸಂಪೂರ್ಣ ವೀಕ್ಷಣೆಗೆ ಈ ಕೆಳಗಿನ ಯೂಟ್ಯೂಬ್ ಲಿಂಕ್ ಸಂಪರ್ಕಿಸಿ 👇

Part - 1 👇



Part - 2 👇

ಶಾಲಾ ವಾರ್ಷಿಕೋತ್ಸವದ ಕಿರು ನೋಟದ ಯೂಟ್ಯೂಬ್ ಲಿಂಕ್

      ನಮ್ಮ ಕುಳೂರು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳ ಕಿರು ನೋಟದ ಯೂಟ್ಯೂಬ್ ಲಿಂಕ್ 👇


Friday 14 February 2020

ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ

          ನಮ್ಮ ಕುಳೂರು ಶಾಲೆಯಲ್ಲಿ ಕಲಿಕೋತ್ಸವದ ಪೂರ್ವಭಾವಿಯಾಗಿ ಹಾಗೂ ಶಾಲಾ ವಾರ್ಷಿಕೋತ್ಸವದ ಅವಲೋಕನ ನಡೆಸಲು ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆಯು ತಾ. 14-02-2020 ನೇ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಕಲಿಕೋತ್ಸವದ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಮಾರ್ಚ್ ಎರಡನೇ ವಾರದಲ್ಲಿ ನಡೆಯವುದೆಂದು ತೀರ್ಮಾನಿಸಲಾಯಿತು. ಶಾಲಾ ವಾರ್ಷಿಕೋತ್ಸವದ ಅವಲೋಕನ ನಡೆಯಿತು. ರಕ್ಷಕರು ಸಲಹೆ ಸೂಚನೆಗಳನ್ನಿತ್ತರು. ಶಾಲಾ ಶಿಕ್ಷಕಿ ನಯನ ಎಂ ಸ್ವಾಗತಿಸಿ, ಸೌಮ್ಯ ಪಿ ವಂದಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ನಿರೂಪಿಸಿದರು.




ರಕ್ಷಕರಿಗೆ ತರಬೇತಿ

       ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ರಕ್ಷಕರಿಗೆ ತರಬೇತಿಯು ತಾ. 14-02-2020 ನೇ ಶುಕ್ರವಾರದಂದು ನಡೆಯಿತು. ಈ ಮಾಹಿತಿ ಶಿಬಿರವನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ನಾಲ್ಕನೇ ತರಬೇತಿ ಮಕ್ಕಳಿಗಿರುವ ಎಲ್. ಎಸ್. ಎಸ್ ಪರೀಕ್ಷೆಯ ಕುರಿತು ಹಾಗೂ ಕಲಿಕಾ ಹಂತಗಳ ಕುರಿತಾಗಿ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ತರಗತಿ ನಡೆಸಿಕೊಟ್ಟರು.




Sunday 9 February 2020

ಸಾಂಸ್ಕೃತಿಕ ಕಾರ್ಯಕ್ರಮಗಳು

       ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಹಳೆ ವಿದ್ಯಾರ್ಥಿಗಳ, ಊರವರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಶಸ್ವೀ ಕಲಾವಿದರು ಮಂಜೇಶ್ವರ ಇವರ ಅಭಿನಯದ ತುಳು ಹಾಸ್ಯಮಯ ನಾಟಕದತ್ತ ಒಂದು ನೋಟ....










Saturday 8 February 2020

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

        ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಂದರ ಕ್ಷಣಗಳು...


 















 




ಬಹುಮಾನ ವಿತರಣಾ ಕಾರ್ಯಕ್ರಮ

         ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ, ಪಿ. ಟಿ. ಎ ಸದಸ್ಯರಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಊರ ವಿದ್ಯಾಭಿಮಾನಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ಸಭಾ ಕಾರ್ಯಕ್ರಮದಲ್ಲಿ ನಡೆಯಿತು.