FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 17 December 2021

ಡಿಸೆಂಬರ್ ತಿಂಗಳ ಎರಡನೇ ವಾರದ ಮಧ್ಯಾಹ್ನದೂಟ ಕ್ಕೆ ಸಹಕರಿಸಿದರು

 


ಶಾಲಾ ಮಕ್ಕಳಿಗೆ ಮಾಸ್ಕ್ ಕೊಡುಗೆ

         ಕೊರೋನ ಕಾಲಘಟ್ಟದಲ್ಲಿ ಎಲ್ಲರ ಸುರಕ್ಷತೆಗೆ ಕೊರೋನ ಮಾನದಂಡಗಳನ್ನು ಪಾಲಿಸಬೇಕಾದ ಅಗತ್ಯತೆ ಇದೆ. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಬೇಕಾಗಿ ಒಂದನೇ ತರಗತಿಯ ವಿದ್ಯಾರ್ಥಿ ಪ್ರಶಸ್ತ್ ವೈ ಶೆಟ್ಟಿ ಪರವಾಗಿ ಆತನ ತಂದೆ ಯೋಗೀಶ್ ಶೆಟ್ಟಿ ಪೊಯ್ಯೆಲ್ ರವರು ಶಾಲಾ ಮಕ್ಕಳಿಗೆ 100 ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.



Saturday 11 December 2021

ಆಟದ ಉದ್ಯಾನಕ್ಕೆ ಶ್ರಮದಾನ

         ಶಾಲಾ ಆಟದ ಉದ್ಯಾನದ ಕಾಮಗಾರಿ ನಡೆಯುತ್ತಿದ್ದು, ಇಂದು ಶ್ರಮದಾನದ ಮೂಲಕ ಮಣ್ಣು ಸಮತಟ್ಟು ಮಾಡಲಾಯಿತು. ಈ ಶ್ರಮದಾನದಲ್ಲಿ ಹಳೆ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಜಯರಾಜ್ ಶೆಟ್ಟಿ ಚಾರ್ಲ, ಸತೀಶ್ ಎಲಿಯಾಣ, ಹರಿರಾಮ ಕುಳೂರು, ರಫೀಕ್ ಪೊಯ್ಯೆಲ್ ಹಾಗೂ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಸಹಕರಿಸಿದರು. ಇವರಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಹಾಗೂ ಯುವ ಉದ್ಯಮಿ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರ ಪ್ರಾಯೋಜಕತ್ವದಲ್ಲಿ ಈ ಆಟದ ಉದ್ಯಾನ ನಿರ್ಮಾಣವಾಗುತ್ತಿದೆ.









Friday 10 December 2021

ಡಿಸೆಂಬರ್ ಮೊದಲ ವಾರದ ಶಾಲಾ ಮಧ್ಯಾಹ್ನದೂಟಕ್ಕೆ ಸಹಕರಿಸಿದರು

 


'ಮರಳಿ ಬದುಕಿಗೆ' ಎಂಬ ವಿನೂತನ ಕಾರ್ಯಕ್ರಮ

          ಕೊರೋನ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಶಾಲಾ ಕಲಿಕೆಯು ಆನ್ಲೈನ್ ಮೂಲಕ ಮನೆಯಲ್ಲೇ ನಡೆದಿದ್ದು, ಇದು ಮಕ್ಕಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವಾರು ಬದಲಾವಣೆಗಳು ಕಂಡು ಬರಲು ಕಾರಣವಾಯಿತು. ಇದೀಗ ನವೆಂಬರ್ ತಿಂಗಳ ಬಳಿಕ ಮತ್ತೆ ಶಾಲಾರಂಭವಾಗಿ ಮಕ್ಕಳಲ್ಲಿ ಮತ್ತೆ ಶಾಲಾ ದಿನಗಳ ಉತ್ಸಾಹ ತುಂಬಿದೆ. ಇದನ್ನು ಇನ್ನಷ್ಟು ಊರ್ಜಿತಗೊಳಿಸಲು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ಮರಳಿ ಬದುಕಿಗೆ' (ATHIJEEVANAM) ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.

          ಕಾರ್ಯಕ್ರಮವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಪೊಯ್ಯೆಲ್, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಶಾಲಾ ಶಿಕ್ಷಕಿ ನಯನ ಎಂ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಬಳಿಕ ಮಕ್ಕಳಿಗೆ ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿ, ಶಾಲಾ ಶಿಕ್ಷಕಿ ನಯನ ಎಂ ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು. ಇದೇ ವೇಳೆ ಶಾಲಾ ಮಕ್ಕಳ ಚಟುವಟಿಕೆಗಳ ಉತ್ಪನ್ನಗಳನ್ನು ಪುಸ್ತಕ ರೂಪದಲ್ಲಿ ಮಾಡಲಾಯಿತು. ಇದನ್ನು ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಪೊಯ್ಯೆಲ್ ರವರು ಬಿಡುಗಡೆಗೊಳಿಸಿದರು. ಬಳಿಕ ಪಾಯಸದೂಟ ಮಾಡಲಾಯಿತು.


















Saturday 4 December 2021

ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ

       ಶಾಲಾರಂಭವಾಗಿ ಒಂದು ತಿಂಗಳು ಕಳೆದ ಬಳಿಕ ಇಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆಯನ್ನು ಕರೆಯಲಾಯಿತು. ಕಳೆದ ಒಂದು ತಿಂಗಳಲ್ಲಿ ನಡೆದ ಶಾಲಾ ಚಟುವಟಿಕೆಗಳ ಕುರಿತು ಅವಲೋಕನ ಮಾಡಲಾಯಿತು. ಮಕ್ಕಳಿಗೆ ಮಾಡಿದ ಶಾಲಾ ವಾಹನದ ವ್ಯವಸ್ಥೆ ಹಾಗೂ ಮಧ್ಯಾಹ್ನದೂಟದ ಖರ್ಚು ವೆಚ್ಚಗಳನ್ನು ಸಭೆಯ ಮುಂದಿಡಲಾಯಿತು. ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದನ್ನು ಮನಗಂಡು ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ಸಹಕಾರ ನೀಡುವ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಭರವಸೆ ನೀಡಿದರು. ಚರ್ಚೆಯಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ಶಾಲಾ ಪಿ.ಟಿ.ಎ ಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.

        ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮಾತೃ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪ್ರೇಮ ಜಿ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.