FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 29 December 2019

ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಸಭೆ

        ಶಾಲಾ ವಾರ್ಷಿಕೋತ್ಸವದ ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಇಂದು (29-12-2019 ನೇ ಆದಿತ್ಯವಾರ) ಸಂಜೆ ಶಾಲಾ ಹಳೆ ವಿದ್ಯಾರ್ಥಿಗಳ, ಶಾಲಾ ರಕ್ಷಕರ, ವಿದ್ಯಾಭಿಮಾನಿಗಳ ಸಭೆಯನ್ನು ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲರವರು ವಹಿಸಿದ್ದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಶಾಲಾ ಶಿಕ್ಷಕರ ಭಾಗವಹಿಸಿದ್ದರು. ಸಭೆಯಲ್ಲಿ ವಾರ್ಷಿಕೋತ್ಸವದ ವಿವಿಧ ಕಾರ್ಯಕ್ರಮಗಳನ್ನು ತೀರ್ಮಾನಿಸಿ, ಪ್ರಾಯೋಜಕರನ್ನು ಕಂಡುಕೊಳ್ಳಲಾಯಿತು. ಕಾರ್ಯಕ್ರಮದ ಅತಿಥಿಗಳ ಪಟ್ಟಿಯನ್ನು ಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಅಧ್ಯಾಪಕಿ ಸೌಮ್ಯ ಪಿ ವಂದಿಸಿದರು.









Friday 20 December 2019

ಹಳೆ ವಿದ್ಯಾರ್ಥಿ ಸಂಘದ ಸಭೆ

          ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ತೀರ್ಮಾನವನ್ನು ಕೈಗೊಳ್ಳಲು 20-12-2019 ನೇ ಶುಕ್ರವಾರದಂದು ಹಳೆ ವಿದ್ಯಾರ್ಥಿ ಸಂಘದ ಸಭೆಯನ್ನು ಸೇರಲಾಯಿತು. ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 2020 ಫೆಬ್ರವರಿ 8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುವ ತೀರ್ಮಾನಕ್ಕೆ ಬರಲಾಯಿತು. ಕಾರ್ಯಕ್ರಮಗಳ ರೂಪುರೇಷೆಗಳನ್ನು ತೀರ್ಮಾನಿಸಲು ತಾ. 29-12-2019 ನೇ ಆದಿತ್ಯವಾರದಂದು ಅಪರಾಹ್ನ ಗಂಟೆ 02:30 ಕ್ಕೆ ಸರಿಯಾಗಿ ಹಳೆ ವಿದ್ಯಾರ್ಥಿಗಳ, ಶಾಲಾ ಮಕ್ಕಳ ರಕ್ಷಕರ, ಊರ ಹಾಗೂ ಪರವೂರ ವಿದ್ಯಾಭಿಮಾನಿಗಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಜಂಟೀ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಜಯರಾಜ್ ಶೆಟ್ಟಿ ಚಾರ್ಲ ವಂದಿಸಿದರು.



ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ

       ತಾ. 20-12--2019 ನೇ ಶುಕ್ರವಾರದಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆಯನ್ನು ನಡೆಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಅಧ್ಯಕ್ಷತೆ ವಹಿಸಿದ್ದರು. ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳಗುತ್ತು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವ, ದ್ವಿತೀಯ ಹಂತದ ಮೌಲ್ಯಮಾಪನ ಇವೇ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಶಾಲಾ ಅಧ್ಯಾಪಿಕೆ ಸೌಮ್ಯ ಪಿ ಸ್ವಾಗತಿಸಿ, ಅಧ್ಯಾಪಿಕೆ ನಯನ ಎಂ ವಂದಿಸಿದರು ಬಳಿಕ ಕ್ಲಾಸ್ ಪಿ. ಟಿ. ಎ ನಡೆಸಿ ಮಕ್ಕಳ ದ್ವಿತೀಯ ಹಂತದ ಮೌಲ್ಯಮಾಪನದ ಕುರಿತು ಚರ್ಚಿಸಿ, ಮಕ್ಕಳ ಪ್ರಶ್ನೆ ಪತ್ರಿಕೆಯನ್ನು ಹೆತ್ತವರಿಗೆ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮರವರ ಮಗಳ ಮದುವೆಯ ಪ್ರಯುಕ್ತ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.






'ಬುಲ್ ಬುಲ್' ಉದ್ಘಾಟನೆ

           ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ 'ಬುಲ್ ಬುಲ್' ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
           ಶಾಲೆಯಲ್ಲಿ ನೂತನವಾಗಿ ಆರಂಭವಾದ ಬುಲ್ ಬುಲ್ ವಿಭಾಗಕ್ಕೆ ಮಕ್ಕಳನ್ನು ಬ್ಯಾಡ್ಜ್ ಹಾಗೂ ಸ್ಕಾರ್ಫ್ ಹಾಕುವ ಮೂಲಕ ಸೇರಿಸಿಕೊಳ್ಳಲಾಯಿತು. ಶಾಲಾ ಬುಲ್ ಬುಲ್ ಅಧ್ಯಾಪಿಕೆ ನಯನ ಯಂ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ಉದ್ಘಾಟಿಸಿ, 'ಮಕ್ಕಳಲ್ಲಿ ಶಿಸ್ತು, ಆತ್ಮಸ್ಥೈರ್ಯ ತುಂಬಲು ಬುಲ್ ಬುಲ್ ಸಹಕಾರಿಯಾಗುತ್ತದೆ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಗೈಡ್ ವಿಭಾಗದ ಜಿಲ್ಲಾ ಉಪ ಆಯುಕ್ತರು ಹಾಗೂ ಆನೆಕಲ್ಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಬ್ ಬುಲ್ ಬುಲ್ ವಿಭಾಗದ ಜಿಲ್ಲಾ ಸ್ಥಾನೀಯ ಆಯುಕ್ತರು, ಕೊಡ್ಲಮೊಗರು ವಾಣೀ ವಿಜಯ ಎ.ಯು. ಪಿ ಶಾಲಾ ಅಧ್ಯಾಪಿಕೆ ಜ್ಯೋತಿಲಕ್ಷ್ಮಿ, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳಗುತ್ತು, ಶಾಲಾ ಬುಲ್ ಬುಲ್ ಅಧ್ಯಾಪಿಕೆ ನಯನ ಯಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಂಕಿ ಅನಾಹುತಕ್ಕೆ ಮನೆಯು ಭಾಗಶಃ ಹಾನಿಗೀಡಾಗಿದ್ದು ಮನೆಯ ಕುಟುಂಬಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಸಹಾಯ ನೀಡಲಾಯಿತು. ಗೈಡ್ ಶಿಕ್ಷಕಿ ಶ್ರೀಕುಮಾರಿ ಟೀಚರ್ ಮಕ್ಕಳಿಗೆ ಅಭಿನಯ ಗೀತೆಯನ್ನು ಹಾಡಿಸುವುದರ ಮೂಲಕ ಮನರಂಜಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ಎಲಿಯಾಣ ವಂದಿಸಿದರು. ಶಾಲಾ ಅಧ್ಯಾಪಿಕೆ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು.














ಸೂರ್ಯ ಗ್ರಹಣ ಮಾಹಿತಿ

         ಇದೇ ಬರುವ 26 ನೇ ತಾರೀಕಿನಂದು ಸಂಭವಿಸುವ ಕಂಕಣ ಸೂರ್ಯ ಗ್ರಹಣದ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಲು ವಿಶೇಷ ಅಸೆಂಬ್ಲಿಯನ್ನು ಕರೆಯಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಮಕ್ಕಳಿಗೆ ಗ್ರಹಣ ವೀಕ್ಷಣೆಯ ಕುರಿತು ಮಾಹಿತಿ ನೀಡಿದರು. ಬಳಿಕ ಸೂರ್ಯ ಗ್ರಹಣದ ವೀಡಿಯೋ ಪ್ರದರ್ಶನ ನಡೆಯಿತು.





Wednesday 27 November 2019

ಪರಿಸರ ಶುಚೀಕರಣ

     ಇಂದು ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಪರಿಸರ ಶುಚೀಕರಣ ನಡೆಯಿತು. ಈ ಶ್ರಮದಾನದಲ್ಲಿ ಹುಲ್ಲು ತೆಗೆಯುವ ಯಂತ್ರದ ಮೂಲಕ ಹುಲ್ಲನ್ನು ಉಚಿತವಾಗಿ ತೆಗೆದು ಸಹಕರಿಸಿದ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶುಭಾನಂದ ಕುಳೂರು (ಸುಬ್ಬು), ಪಿ. ಟಿ. ಎ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷರಾದ ಸತೀಶ್ ಎಲಿಯಾಣ, ಮಾತೃ ಸಂಘದ ಉಪಾಧ್ಯಕ್ಷೆಯಾದ ಸುಪ್ರೀತ ಕುಳೂರು ಹೊಸಮನೆ, ಸದಸ್ಯರಾದ ರೂಪ ಕುಳೂರು ಪಾದೆ, ಸ್ವಾತಿ ದೇರಂಬಳ, ಪ್ರೇಮ ಜಿ ಶೆಟ್ಟಿ ಕುಳೂರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಹರಿರಾಮ ಕುಳೂರು ರವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.








Wednesday 20 November 2019

ವಿದ್ಯಾಲಯವು ಪ್ರತಿಭೆಯೊಂದಿಗೆ - 1

       'ವಿದ್ಯಾಲಯವು ಪ್ರತಿಭೆಯೊಂದಿಗೆ' ಕಾರ್ಯಕ್ರಮದಂಗವಾಗಿ ಯುವ ಬರಹಗಾರ, ಗಾಯಕ ಶ್ರೀ ಲವಾನಂದ ಎಲಿಯಾಣರವರನ್ನು ನಮ್ಮ ಶಾಲಾ ಮಕ್ಕಳು ಸಂದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ ಹಾಗೂ ಶಾಲಾ ನಾಯಕಿ ಕುಮಾರಿ ನವ್ಯರವರು ಲವಾನಂದ ಎಲಿಯಾಣರವರಿಗೆ ಶಾಲು ಹೊದಿಸಿ, ಫಲ-ಪುಷ್ಪವನ್ನು ನೀಡಿ ಗೌರವಿಸಿದರು.





Thursday 14 November 2019

ರಕ್ಷಕರಿಗೆ ಮಾಹಿತಿ ಶಿಬಿರ

        ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕರಿಗೆ ಮಾಹಿತಿ ಶಿಬಿರ ನಡೆಯಿತು.
        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ಬಿ. ಆರ್. ಸಿ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಟೀಚರ್, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಬಳಿಕ ಗುರುಪ್ರಸಾದ್ ರೈ ಯವರಿಂದ ರಕ್ಷಕರಿಗೆ ಮಾಹಿತಿ ಶಿಬಿರ ನಡೆಯಿತು. ಬಿ. ಆರ್. ಸಿ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಟೀಚರ್ ಸಹಕರಿಸಿದರು. ಶಿಬಿರದಲ್ಲಿ ರಕ್ಷಕರು ಸಕ್ರಿಯವಾಗಿ ಪಾಲ್ಗೊಂಡರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.





ಸಂಭ್ರಮದ ಮಕ್ಕಳ ದಿನಾಚರಣೆ

        ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
        ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಮೀಂಜ ಪಂಚಾಯತಿನ ಅಧ್ಯಕ್ಷೆ ಶಂಶಾದ್ ಶುಕೂರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ 'ಕುಳೂರ ಧ್ವನಿ' ರೇಡಿಯೋ ಸ್ಟೇಷನ್ ಗೆ ಪಂಚಾಯತು ಸದಸ್ಯೆ ಚಂದ್ರಾವತಿ ವಿ.ಪಿ ಚಾಲನೆಯನ್ನಿತ್ತರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಜೇಶ್ವರ ಉಪಜಿಲ್ಲಾ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ ಉಲ್ಲಾಸ ಗಣಿತ ಕಾರ್ಯಕ್ರಮದ ಕಿಟ್ ನ್ನು ಮಕ್ಕಳಿಗೆ ನೀಡುವ ಮೂಲಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ, ಶಾಲಾ ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಮಂಜೇಶ್ವರ ಬಿ. ಆರ್. ಸಿ ಯ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಉಪಸ್ಥಿತರಿದ್ದು ಶುಭ ಕೋರಿದರು. ಇದೇ ಸಂದರ್ಭದಲ್ಲಿ 2019-20 ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಹಾಗೂ ಕಲೋತ್ಸವದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
        ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.