FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 20 December 2019

'ಬುಲ್ ಬುಲ್' ಉದ್ಘಾಟನೆ

           ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ 'ಬುಲ್ ಬುಲ್' ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
           ಶಾಲೆಯಲ್ಲಿ ನೂತನವಾಗಿ ಆರಂಭವಾದ ಬುಲ್ ಬುಲ್ ವಿಭಾಗಕ್ಕೆ ಮಕ್ಕಳನ್ನು ಬ್ಯಾಡ್ಜ್ ಹಾಗೂ ಸ್ಕಾರ್ಫ್ ಹಾಕುವ ಮೂಲಕ ಸೇರಿಸಿಕೊಳ್ಳಲಾಯಿತು. ಶಾಲಾ ಬುಲ್ ಬುಲ್ ಅಧ್ಯಾಪಿಕೆ ನಯನ ಯಂ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ಉದ್ಘಾಟಿಸಿ, 'ಮಕ್ಕಳಲ್ಲಿ ಶಿಸ್ತು, ಆತ್ಮಸ್ಥೈರ್ಯ ತುಂಬಲು ಬುಲ್ ಬುಲ್ ಸಹಕಾರಿಯಾಗುತ್ತದೆ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಗೈಡ್ ವಿಭಾಗದ ಜಿಲ್ಲಾ ಉಪ ಆಯುಕ್ತರು ಹಾಗೂ ಆನೆಕಲ್ಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಬ್ ಬುಲ್ ಬುಲ್ ವಿಭಾಗದ ಜಿಲ್ಲಾ ಸ್ಥಾನೀಯ ಆಯುಕ್ತರು, ಕೊಡ್ಲಮೊಗರು ವಾಣೀ ವಿಜಯ ಎ.ಯು. ಪಿ ಶಾಲಾ ಅಧ್ಯಾಪಿಕೆ ಜ್ಯೋತಿಲಕ್ಷ್ಮಿ, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳಗುತ್ತು, ಶಾಲಾ ಬುಲ್ ಬುಲ್ ಅಧ್ಯಾಪಿಕೆ ನಯನ ಯಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಂಕಿ ಅನಾಹುತಕ್ಕೆ ಮನೆಯು ಭಾಗಶಃ ಹಾನಿಗೀಡಾಗಿದ್ದು ಮನೆಯ ಕುಟುಂಬಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಸಹಾಯ ನೀಡಲಾಯಿತು. ಗೈಡ್ ಶಿಕ್ಷಕಿ ಶ್ರೀಕುಮಾರಿ ಟೀಚರ್ ಮಕ್ಕಳಿಗೆ ಅಭಿನಯ ಗೀತೆಯನ್ನು ಹಾಡಿಸುವುದರ ಮೂಲಕ ಮನರಂಜಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ಎಲಿಯಾಣ ವಂದಿಸಿದರು. ಶಾಲಾ ಅಧ್ಯಾಪಿಕೆ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು.














4 comments:

  1. Very very nice program God bless your team work

    ReplyDelete
  2. ನಮ್ಮ ಶಾಲೆ
    ನಮಗೆ ಹೆಮ್ಮೆ
    🙏🙏🙏

    ReplyDelete
    Replies
    1. ಜೈ ಕುಳೂರು ಶಾಲೆ..👍👍🙏🙏

      Delete