FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 23 August 2019

ತೊಂಡೆ ಚಪ್ಪರದ ಶ್ರಮದಾನ

         ದಿನಾಂಕ 23-08-2019 ನೇ ಶುಕ್ರವಾರದಂದು ತೊಂಡೆ ಕೃಷಿ ತೋಟದ ಚಪ್ಪರದ ಕೆಲಸ ಕಾರ್ಯಗಳಿಗೆ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಹರಿರಾಮ ಕುಳೂರು, ಶುಭಾನಂದ (ಸುಬ್ಬು) ಕುಳೂರು, ಜಯರಾಜ್ ಶೆಟ್ಟಿ ಚಾರ್ಲ, ಜಯಪ್ರಶಾಂತ್ ಪಾಲೆಂಗ್ರಿ ಭಾಗವಹಿಸಿದರು.


Sunday 18 August 2019

ತರಕಾರಿ ಕೃಷಿ ತೋಟದ ಶ್ರಮದಾನ

           ದಿನಾಂಕ 18-08-2019 ನೇ ಆದಿತ್ಯವಾರದಂದು ನಮ್ಮ ಕುಳೂರು ಶಾಲೆಯಲ್ಲಿ ತರಕಾರಿ ಕೃಷಿಯ ಸಲುವಾಗಿ ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಹರಿರಾಮ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಚಂದ್ರ ಪ್ರಸಾದ್ ಕರಿಪ್ಪಾರ್, ಸತೀಶ್ ಎಲಿಯಾಣ, ಉದಯ ಸಿ. ಎಚ್ ಚಿನಾಲ, ನಂದು ಕುಳೂರು, ಶಿವರಾಜ್ ಕುಳೂರು, ಪ್ರವೀಣ್ ಕರಿಪ್ಪಾರ್, ಜಯರಾಜ್ ಕರಿಪ್ಪಾರ್, ಶಿವು ಕರಿಪ್ಪಾರ್, ರವಿ ಪ್ರಸಾದ್ ಕರಿಪ್ಪಾರ್, ದೀಕ್ಷಿತ್, ವಿಖ್ಯಾತ್, ಶಿವಪ್ರಸಾದ್, ಭವಿತ್, ಯತೀಶ್, ಜೀವನ್ ಕುಳೂರು ಶಾಂತಿನಗರ, ಶ್ರೇಯ ಕರ್ಕೇರ ಮದಂಗಲ್, ಸೌಮ್ಯ ಟೀಚರ್ ಹಾಗೂ ನಯನ ಟೀಚರ್ ಭಾಗವಹಿಸಿದರು.





Thursday 15 August 2019

ಸಂಭ್ರಮದ 73 ನೇ ಸ್ವಾತಂತ್ರ್ಯ ದಿನಾಚರಣೆ

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
       ಆ ಪ್ರಯುಕ್ತ ನಡೆದ ಧ್ವಜಾರೋಹಣವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ 'ಸ್ವತಂತ್ರ ಭಾರತವು ಹಲವಾರು ಧನಾತ್ಮಕ ಬದಲಾವಣೆಗಳನ್ನು ಕಂಡಿದೆ. ಆದರೂ ಭಾರತ ಇನ್ನೂ ಅಭಿವೃದ್ಧಿಯನ್ನು ಕಾಣಬೇಕಾದರೆ ಬಡತನ ನಿರ್ಮೂಲನೆ, ಅಸಮಾನತೆಯನ್ನು ಹೊರಗಟ್ಟುವಿಕೆ, ಮಾದಕವಸ್ತುಗಳಿಂದ ಮಕ್ಕಳು ಹಾಗೂ ಯುವ ಜನತೆಯನ್ನು ದೂರ ಇಡುವುದು ಮೊದಲಾದ ಕಾರ್ಯಗಳು ನಡೆಯಬೇಕಾಗಿದೆ' ಎಂದು ಕರೆಯಿತ್ತರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಯಲ್, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ಅಧ್ಯಕ್ಷರಾದ ಸತೀಶ್ ಎಲಿಯಾಣ ಉಪಸ್ಥಿತರಿದ್ದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಿಕರ ಪರವಾಗಿ ನಾರಾಯಣ ನೈಕ್ ನಡುಹಿತ್ಲು, ಮೀನಾಕ್ಷಿ ಬೊಡ್ಡೋಡಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು, ಹರಿರಾಮ ಕುಳೂರು ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಸ್ವಾಗತಿಸಿ, ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




































Tuesday 13 August 2019

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಗಳು

     ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ತಾ. 13-08-2019 ನೇ ಮಂಗಳವಾರದಂದು ನಡೆಸಲಾಯಿತು.




Thursday 1 August 2019

ಆಟಿಕಳಂಜನ ಆಗಮನ

        ನಮ್ಮ ತುಳುನಾಡಿನ ಸಂಸ್ಕೃತಿ, ಪರಂಪರೆಯ ಕುರಿತು ಕಣ್ಣಾರೆ ನೋಡಲು, ಅನುಭವಿಸಲು ಅವಕಾಶ ಸಿಗುತ್ತಿರುವುದು ನಮ್ಮ ಕುಳೂರು ಶಾಲಾ ಮಕ್ಕಳ ಭಾಗ್ಯವೆಂದೇ ಹೇಳಬಹುದು. ಯಾಕೆಂದರೆ ಅಳಿವಿನಂಚಿಗೆ ಹೋಗುತ್ತಿರುವ ನಮ್ಮ ಸಂಸ್ಕೃತಿಯ ಭಾಗವಾಗಿರುವ ಹಲವಾರು ಕಲಾ ಪ್ರಕಾರಗಳು, ಆಚರಣೆಗಳನ್ನು ಕಾಣಲು ನಮ್ಮ ಕುಳೂರು ಗ್ರಾಮದಲ್ಲಿ ಸಿಗುತ್ತಿರುವುದು ನಮ್ಮ ಮಕ್ಕಳ ಸೌಭಾಗ್ಯ. ಕೇವಲ ಗೂಗಲ್'ನಲ್ಲಿ ಇಂತಹ ವೀಡಿಯೋಗಳನ್ನು ನೋಡಿ ಆನಂದಿಸುವವರಿಗೆ ಇದೊಂದು ಸೋಜಿಗದ ಸಂಗತಿಯೇ ಹೌದು. ಏನೇ ಆದರು ಈಗಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಕಲಿಕೆ ಎಂಬುದು ಸ್ವ ಅನುಭವದೊಂದಿಗೆ, ಪ್ರಯೋಗಾತ್ಮಕವಾಗಿ ಸ್ವ ಕಲಿಕೆ ನಡೆದಾಗಲೇ ಪರಿಪೂರ್ಣ ವಿದ್ಯೆಯ ಗುರಿಯನ್ನು ತಲುಪಲು ಸಾಧ್ಯ. ಅಂತಹ ಅನುಭವ ಪಾಠಗಳು ನಮ್ಮ ಕುಳೂರು ಶಾಲಾ ಮಕ್ಕಳಿಗೆ ಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.