FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 2 April 2022

ವಾಚನಾ ಮಿತ್ರತ್ವ 2021-22 : ಮಕ್ಕಳ ಹೆತ್ತವರ ಕಾರ್ಯಕ್ರಮ

          ವಾಚನಾ ಮಿತ್ರತ್ವ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಇಂದು ಮಕ್ಕಳ ಉತ್ಪನ್ನಗಳ ಪ್ರದರ್ಶನ ನಡೆಯಿತು. ಮಕ್ಕಳು ತಮ್ಮ ಸಾಹಿತ್ಯಿಕ ರಚನೆಗಳನ್ನು ಎಲ್ಲರ ಮುಂದೆ ತೆರೆದಿಟ್ಟರು. ಮಕ್ಕಳ ಉತ್ಪನ್ನಗಳನ್ನು ಒಟ್ಟು ಮಾಡಿ 'ಕಾಮನಬಿಲ್ಲು' ಎನ್ನುವ ಹಸ್ತಪತ್ರಿಕೆ ರಚಿಸಲಾಯಿತು.

         ನಂತರ ಮಕ್ಕಳ ಹೆತ್ತವರಿಗೆ ಈ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಹೆತ್ತವರು ಬಹಳ ಉತ್ಸಾಹದಿಂದ ಭಾಗವಹಿಸಿ, ಅತ್ಯುತ್ತಮ ಸಾಹಿತ್ಯಿಕ ರಚನೆಗಳನ್ನು ರಚಿಸಿ, ಎಲ್ಲರ ಮುಂದೆ ಓದಿದರು. ಕತೆ, ಕವನ, ಆಶಯ ಟಿಪ್ಪಣಿ, ಗಾದೆ ಮಾತು ವಿಸ್ತರಣೆ, ಸಂಭಾಷಣೆ, ಚಿತ್ರ ರಚನೆ ಮೊದಲಾದ ರಚನೆಗಳು ಉತ್ತಮವಾಗಿ ಮೂಡಿ ಬಂದಿತು. ಅವುಗಳನ್ನು ಒಟ್ಟು ಮಾಡಿ ' ಹೊಂಬೆಳಕು ಎಂಬ ಹಸ್ತಪತ್ರಿಕೆ ರಚಿಸಲಾಯಿತು.

       ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಲ ಗುತ್ತು, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರಫುಲ್ಲ ಕುಮಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ಹಸ್ತಪತ್ರಿಕೆಯಾದ 'ಕಾಮನಬಿಲ್ಲು'ನ್ನು ರಾಜಲಕ್ಷ್ಮಿ ದೇರಂಬಲ ಗುತ್ತು, ಹೆತ್ತವರಿಂದ ರಚನೆಯಾದ 'ಹೊಂಬೆಳಕು' ಹಸ್ತಪತ್ರಿಕೆಯನ್ನು ಪ್ರಫುಲ್ಲ ಕುಮಾರಿ ಬಿಡುಗಡೆ ಮಾಡಿದರು. ಮೀನಾಕ್ಷಿ ಬೊಡ್ಡೋಡಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಶಿಕ್ಷಕಿ ನಯನ ಎಂ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.


































Friday 1 April 2022

ವಾಚನಾ ಮಿತ್ರತ್ವ 2021-22 : ಮಕ್ಕಳ ಕಾರ್ಯಕ್ರಮ

           ಮಕ್ಕಳಲ್ಲಿ ಓದಿನ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಲು, ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಲು ವಾಚನಾ ಮಿತ್ರತ್ವ ಎಂಬ ವಿನೂತನ ಕಾರ್ಯಕ್ರಮವನ್ನು ಇಂದು ಶಾಲೆಯಲ್ಲಿ ಆಯೋಜಿಸಲಾಯಿತು. ಪದ್ಯ ಓದುವುದು, ಕತೆ ಓದುವುದು ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಸಾಹಿತ್ಯಿಕ ರಚನೆಗಳಲ್ಲಿ ತೊಡಗುವುದು ಇವೇ ಮೊದಲಾದ ಚಟುವಟಿಕೆಗಳನ್ನು ನೀಡಿ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸಲು ವಾಚನಾ ಮಿತ್ರತ್ವ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪ್ರತೀ ತರಗತಿಯ ಶಿಕ್ಷಕ-ಶಿಕ್ಷಕಿಯರು ಕಾರ್ಯಕ್ರಮವನ್ನು ಮುನ್ನಡೆಸಿದರು. ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಉಪಸ್ಥಿತರಿದ್ದು ಸಹಕರಿಸಿದರು.