FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 30 June 2016

ಹಳಸಿನ ಮೇಳ

               ನಮ್ಮ ಶಾಲೆಯಲ್ಲಿ ನಡೆದ ಹಳಸಿನ ಮೇಳದ ಅಂಗವಾಗಿ ಮಕ್ಕಳಿಗೆ ವಿವಿಧ ಹಳಸಿನ ಹಣ್ಣಿನ ಸೊಳೆಯನ್ನು ನೀಡುವುದರ ಮೂಲಕ ನಡೆಸಲಾಯಿತು. ಅಧ್ಯಾಪಿಕೆ ಶ್ರೀಮತೀ ಸೌಮ್ಯ ಪಿ ಮಕ್ಕಳಿಗೆ ಹಳಸಿನ ಸೊಳೆಯನ್ನು ನೀಡಿದರು. ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.





Monday 27 June 2016

ವಿಶ್ವ ಮಾದಕ ವಸ್ತು ವಿರೋಧಿ ದಿನ

            ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಸೇವನೆಗೆ ವಿರೋಧವಾಗಿ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀ ಗಣೇಶ್ ರಾವ್ ರವರು ಶಾಲಾ ಮಕ್ಕಳಿಗೆ ಬೋಧಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.





Sunday 26 June 2016

ವಿಶ್ವ ಯೋಗ ದಿನಾಚರಣೆ

               ಜುಲೈ 21 ರಂದು ವಿಶ್ವ ಯೋಗ ದಿನವನ್ನು ಶಾಲೆಯಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಯೋಗಗಳ ಪರಿಚಯ ಮಾಡಿಸುವುದರೊಂದಿಗೆ ಅವುಗಳ ಪ್ರಾಮುಖ್ಯತೆಗಳ ಕುರಿತು ಕಿರು ವಿವರಣೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀ ಗಣೇಶ್ ರಾವ್ ರವರು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.