ನಮ್ಮ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸಿದ ಮಲಯಾಳಂ ಶಿಕ್ಷಕಿ ಕುಮಾರಿ ಶರಣ್ಯರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
FLASH NEWS
Monday, 30 March 2026
ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ; ಶಾಲೆಗೆ ಟೇಬಲ್ ನೀಡಿದ ಹೆತ್ತವರು :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಈ ವರ್ಷದ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಇಂದು ನಡೆಯಿತು.
Monday, 16 March 2026
ವೀಕ್ಷಿತಳ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಉಡುಗೊರೆ :
ನಮ್ಮ ಶಾಲಾ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವೀಕ್ಷಿತ ತನ್ನ 10 ನೇ ವರ್ಷದ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಉಡುಗೊರೆಯನ್ನು ನೀಡಿ ವಿಶೇಷವಾಗಿ ಆಚರಿಸಿದಳು.
Tuesday, 24 February 2026
ಬೇಬಿ ಸನ್ಮಯಳ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ವಿಶೇಷ ಮಧ್ಯಾಹ್ನದೂಟ :
ನಮ್ಮ ಶಾಲಾ ಶಿಕ್ಷಕಿ ಶ್ರೀಮತಿ ನಯನ ಸತೀಶ್ ರವರ ಮುದ್ದಿನ ಮಗಳಾದ ಬೇಬಿ ಸನ್ಮಯಳ ಎರಡನೇ ವರ್ಷದ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಇಂದು ವಿಶೇಷ ಭೋಜನವನ್ನು ಏರ್ಪಡಿಸಲಾಯಿತು.
Wednesday, 18 February 2026
ಕುಳೂರು ಶಾಲೆಯಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ :
ಶತಮಾನವನ್ನು ಕಂಡಂತಹ ಕುಳೂರಿನ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಡಗರ ಸಂಭ್ರಮದಿಂದ ಜರಗಿತು.
Monday, 9 February 2026
ಕುಳೂರು ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ :
ಶತಮಾನೋತ್ಸವವನ್ನು ಕಂಡು ಇದೀಗ 102 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು.
Monday, 2 February 2026
ಜಲಜರವರ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ವಿಶೇಷ ಭೋಜನ :
ನಮ್ಮ ಶಾಲಾ ಅಡುಗೆಯಾಳು ಆಗಿರುವ ಶ್ರೀಮತಿ ಜಲಜ ಶಶಿಧರ್ ಪೊಯ್ಯೇಲು ರವರು ಇಂದು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನವನ್ನು ಏರ್ಪಡಿಸಿದರು.
Wednesday, 14 January 2026
ಹುಟ್ಟು ಹಬ್ಬಕ್ಕೆ ಪುಸ್ತಕಗಳನ್ನು ಕೊಡುಗೆ ನೀಡಿ ಮಾದರಿಯಾದ ಪ್ರಣವ್ಯ ಭಾರದ್ವಾಜ್ :
ಹುಟ್ಟು ಹಬ್ಬವು ಎಲ್ಲರೂ ಕಾತರದಿಂದ ಕಾಯುವ ಒಂದು ದಿನವಾಗಿದೆ. ಈ ದಿನವನ್ನು ಬಹಳ ವಿಶೇಷತೆಯಿಂದ ಆಚರಿಸಲು ಎಲ್ಲರೂ ಕಾತರದಿಂದ ಕಾಯುತ್ತಿರುತ್ತಾರೆ. ಇಂತಹ ದಿನವನ್ನು ಎಲ್ಲರಿಗೂ ಮಾದರಿಯಾದಂತೆ ಔಚಿತ್ಯಪೂರ್ಣವಾಗಿ ಆಚರಿಸುವವರು ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತಾರೆ. ಅಂತವರಲ್ಲಿ ನಮ್ಮ ಶಾಲಾ ಒಂದನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಣವ್ಯ ಭಾರದ್ವಾಜ್ ಕೂಡಾ ಒಬ್ಬಳು.
Monday, 12 January 2026
ಶ್ರೀ ಹರಿ ಭಜನಾ ಮಂದಿರದ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನ :
ಶ್ರೀ ಹರಿ ಭಜನಾ ಮಂದಿರ ಆದರ್ಶನಗರ ಕುಳೂರು ಇದರ ವಾರ್ಷಿಕ ಮಹೋತ್ಸವದ ಅಂಗವಾಗಿ ಇಂದು ನಮ್ಮ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಯಿತು.