ಕಾಸರಗೋಡು, ದಕ್ಷಿಣ-ಕನ್ನಡ, ಉಡುಪಿ ಹೀಗೆ ತುಳುನಾಡಿನೆಲ್ಲೆಡೆ ತಮ್ಮ ದಾನ ಧರ್ಮಗಳಿಂದ ಹೆಸರುವಾಸಿಯಾದ ತುಳುನಾಡ ಕಣ್ಮನಿ, ಬಡವರ ಬಂಧು, ಕುಳೂರು ಶಾಲಾ ಮಹಾಪೋಷಕರಾದ ಶ್ರೀ ಡಾ. ಸದಾಶಿವ ಕೆ ಶೆಟ್ಟಿ ಯವರ ಜನ್ಮದಿನದ ಪ್ರಯುಕ್ತ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ವತಿಯಿಂದ ಇಂದು ಕುಳೂರು ಶಾಲಾ ಮಕ್ಕಳಿಗೆ ಮಧ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ಕಳೆದ ಕೆಲವು ವರ್ಷಗಳಲ್ಲಿ ಕುಳೂರು ಶಾಲೆಯ ಭೌತಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಂದ ನೆರವೇರಿಸಿ ಸಮಾಜವು ಶಾಲೆಯತ್ತ ನೋಡುವಂತೆ ಮಾಡಿದ ಕೀರ್ತಿಯು ಇದೇ ಶಾಲೆಯಲ್ಲಿ ಕಲಿತ ಹೆಮ್ಮೆಯ ಹಳೆ ವಿದ್ಯಾರ್ಥಿ, ಹೇರಂಭ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕರಾದ ಗೌರವಾನ್ವಿತ ಶ್ರೀ ಸದಾಶಿವ ಕೆ ಶೆಟ್ಟಿಯವರಿಗೆ ಸಲ್ಲುತ್ತದೆ. ತಾನು ನಡೆದ ಬಂದ ಹಾದಿಯನ್ನು ಮರೆತದೆ ತನ್ನ ಪ್ರಾಥಮಿಕ ಶಿಕ್ಷಣಕ್ಕೆ ಅಡಿಪಾಯವನ್ನು ಹಾಕಿದ ಕುಳೂರು ಶಾಲೆಯ ಅಭಿವೃದ್ಧಿಗೆ ಕಳೆದ ಕೆಲವು ವರುಷಗಳಿಂದ ಸಹಕರಿಸುತ್ತಿರುವ ಶ್ರೀಯುತರ ಸಹಕಾರ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಜೊತೆಗೆ ಸಮಾಜದ ಅಸಕ್ತ ಕುಟುಂಬಗಳಿಗೆ ದಾರಿದೀಪವಾಗಿ, ಅಸಂಖ್ಯಾತ ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ, ಧಾರ್ಮಿಕ ಶ್ರದ್ಧಾ ಕೇಂಡ್ರಗಳ ಜೀರ್ಣೊದ್ಧಾರದ ರೂವಾರಿಯಾಗಿ, ನಿರಂತರ ಸಹಾಯಹಸ್ತದ ಮೂಲಕ ಹಲವರ ಕಣ್ಣೊರೆಸುವ ಬಡವರ ಬಂಧುವಾಗಿರುವ ಇಂತಹ ಮೇರು ವ್ಯಕ್ತಿತ್ವದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ವತಿಯಿಂದ ಕುಳೂರು ಶಾಲೆಯ ಮಕ್ಕಳು ಹಾಗೂ ಅಧ್ಯಾಪಕ ವೃಂದಕ್ಕೆ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಮಾದರಿಯಾದರು.ಈ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಉಪಾಧ್ಯಕ್ಷರೂ, ಶ್ರೀ ಸದಾಶಿವ ಶೆಟ್ಟಿಯವರ ಸಹೋದರರೂ ಆದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉಪಾಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಸದಸ್ಯರಾದ ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಸ್ವಾಗತಿಸಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಪಿ, ಶ್ರೀಮತಿ ನಯನ ಎಂ, ಶ್ರೀಮತಿ ಅಶ್ವಿನಿ ಎಂ, ಶ್ರೀಮತಿ ಶ್ವೇತ ಇ, ಅಡುಗೆಯಾಳು ಶ್ರೀಮತಿ ಜಲಜ, ಶಾಲಾ ಪಿ.ಟಿ.ಎ. ಉಪಾಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕವಿತಾ ದೇರಂಬಳ, ಪ್ರೀ ಪ್ರೈಮರಿ ವಿಭಾಗದ ಪಿ.ಟಿ.ಎ. ಅಧ್ಯಕ್ಷೆ ಶ್ರೀಮತಿ ಪ್ರಿಯಾಂಕ ಕೇಮಜಲ್, ಪಿ.ಟಿ.ಎ. ಸದಸ್ಯರಾದ ಶ್ರೀಮತಿ ಶ್ವೇತ ಕೇಮಜಲ್, ಶ್ರೀಮತಿ ಹರಿಣಾಕ್ಷಿ ಕೇಮಜಲ್ ಉಪಸ್ಥಿತರಿದ್ದರು. ಭರ್ಜರಿ ಊಟದ ಜೊತೆಗೆ ಐಸ್ಕ್ರೀಂ ಕೂಡಾ ಸವಿಯಲಾಯಿತು.







No comments:
Post a Comment