FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 26 June 2026

ಕುಳೂರು ಶಾಲೆಯಲ್ಲಿ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ :

        ಕೇರಳದ ಗ್ರಂಥಾಲಯ ಆಂದೋಲನದ ಪಿತಾಮಹನೆಂದು ಕರೆಯಲ್ಪಡುವ ಪಿ. ಎನ್.‌ ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ವಾರಾಚರಣೆಯೊಂದಿಗೆ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. 

      ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಜೇಶ್ವರ ಬಿ.ಆರ್.ಸಿ. ಯ ಶಿಕ್ಷಕಿ ಶ್ರೀಮತಿ ಶಾರದಾ ರವರು ಆಗಮಿಸಿದ್ದರು. ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಸಿ. ಯ ಸಿ.ಆರ್.ಸಿ. ಕೋರ್ಡಿನೇಟರ್ ಶ್ರೀಮತಿ ಮೋಹಿನಿ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಚನಾ ವಾರಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶ್ರೀಮತಿ ಶಾರದಾರವರು ಶಾಲಾ ಮಕ್ಕಳಿಗೆ ಕಥೆ, ಪದ್ಯಗಳನ್ನು ಹೇಳಿ, ಅಭಿನಯ ಗೀತೆಗಳನ್ನು ಹಾಡಿ ಮನರಂಜಿಸಿದರು.

          ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ. ಸ್ವಾಗತಿಸಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. 




















No comments:

Post a Comment