FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 30 June 2026

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ವ್ಯವಸ್ಥಾಪನಾ ಸಮಿತಿ (ರಕ್ಷಕ-ಶಿಕ್ಷಕ ಸಂಘ) ಯ ಮಹಾಸಭೆ ನಡೆಯಿತು. 

        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
        ಇದೇ ಸಂದರ್ಭದಲ್ಲಿ ಪಿ.ಟಿ.ಎ. ಉಪಾಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣರವರು ಶಾಲೆಗೆ ಒಂದು ಸೀಲಿಂಗ್ ಫ್ಯಾನ್ ಕೊಡುಗೆಯಾಗಿ ನೀಡಿದರು. ಅವರಿಗೆ ಶಾಲಾ‌ ಪರವಾಗಿ ಧನ್ಯವಾದವನ್ನು ಸಲ್ಲಿಸಲಾಯಿತು.

        ಬಳಿಕ ರಕ್ಷಕ-ಶಿಕ್ಷಕ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಮತ್ತು ಉಪಾಧ್ಯಕ್ಷರಾಗಿ ಶ್ರೀ ಸತೀಶ್ ಎಲಿಯಾಣ ಅವಿರೋಧವಾಗಿ ಪುನರಾಯ್ಕೆಯಾದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಶ್ವೇತ ಕೇಮಜಲ್, ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಿಯಾಂಕ ಕೇಮಜಲ್ ಹಾಗೂ ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಕವಿತಾ ದೇರಂಬಳ ಅವಿರೋಧವಾಗಿ ಆಯ್ಕೆಯಾದರು.

       ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀ ವಿಶ್ವನಾಥ ಸುಣ್ಣಾರ, ಶ್ರೀ ಸಾಯಿನಾಥ್ ಮಾನೂರು, ಶ್ರೀಮತಿ ಪ್ರತಿಭಾ ಕುಳಬೈಲು, ಶ್ರೀಮತಿ ಅಂಬಿಕ ಚಿನಾಲ, ಶ್ರೀಮತಿ ಸುಚರಿತ ಚಿನಾಲ, ಶ್ರೀಮತಿ ಶ್ರೀಲತ ಬಟ್ಟಿಪದವು, ಶ್ರೀಮತಿ ಜೈನಬ ಕುಳೂರು, ಶ್ರೀಮತಿ ಸುಮಿತ್ರ ಚಿನಾಲ, ಶ್ರೀಮತಿ ಆರತಿ ಪೊಯ್ಯೇಲು, ಶ್ರೀಮತಿ ಜ್ಯೋತಿಶ್ರೀ ಚಿನಾಲ, ಶ್ರೀಮತಿ ಹರಿಣಾಕ್ಷಿ ಕೇಮಜಲ್, ಶ್ರೀಮತಿ ಶಾರದ ಕುಳೂರು ಹಾಗೂ ಶ್ರೀಮತಿ ಸವಿತ ಕುಳೂರು ಆಯ್ಜೆಯಾದರು‌.

       ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ನಯನ ಎಂ ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರ ವತಿಯಿಂದ  ಲಘು ಉಪಹಾರ ವಿತರಿಸಲಾಯಿತು. 












No comments:

Post a Comment