FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 22 November 2017

ಬಾಳೆಗೊನೆಯ ಕೊಯ್ಲು

         ಶಾಲಾ ತರಕಾರಿ ತೋಟದಲ್ಲಿ ಆದಂತಹ ಬಾಳೆಗೊನೆಯನ್ನು ಕೊಯ್ದು ಹಣ್ಣಾಗಿಸಿ ಮಕ್ಕಳಿಗೆ ನೀಡಲಾಯಿತು.

Saturday 18 November 2017

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕುಳೂರು ಶಾಲಾ ಮಕ್ಕಳ ಅಪ್ರತಿಮ ಸಾಧನೆ

                ಉದಿನೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಅಪ್ರತಿಮ ಸಾಧನೆಗೈದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್ ಹಾಗೂ ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್ ಪಡೆದಿದ್ದಾರೆ. ಎಲ್. ಪಿ ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಒಟ್ಟು 1317 ಅಂಕಗಳನ್ನು ಪಡೆದು ಜಿಲ್ಲೆಯಲ್ಲೇ 9 ನೇ ಸ್ಥಾನ ಪಡೆದು ಅಪ್ರತಿಮ ಸಾಧನೆಗೈದಿದ್ದಾರೆ. ಈ ಪ್ರತಿಭೆಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಶಾಲಾ ಮಾತೃ ಸಂಘ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ.

  ವರ್ಷ ಬಿ

 ಹೇಮಂತ್

 ಲಕ್ಷ್ಮಣ

 ಶ್ರೇಯಾ ಕರ್ಕೇರ

 ಶ್ರವಣ್ ಕುಮಾರ್

Friday 17 November 2017

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳ

               ಉದಿನೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಅಪ್ರತಿಮ ಸಾಧನೆಗೈದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್ ಹಾಗೂ ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್ ಪಡೆದಿದ್ದಾರೆ. ಎಲ್. ಪಿ ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಒಟ್ಟು 1317 ಅಂಕಗಳನ್ನು ಪಡೆದು ಜಿಲ್ಲೆಯಲ್ಲೇ 9 ನೇ ಸ್ಥಾನ ಪಡೆದು ಅಪ್ರತಿಮ ಸಾಧನೆಗೈದಿದ್ದಾರೆ. ಈ ಪ್ರತಿಭೆಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಶಾಲಾ ಮಾತೃ ಸಂಘ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ.

Tuesday 14 November 2017

ಮಕ್ಕಳ ದಿನಾಚರಣೆ:

             ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
            ಶಾಲೆಯ ಹಳೆ ವಿದ್ಯಾರ್ಥಿಯೂ, ಮುಂಬೈಯಲ್ಲಿ ಉದ್ಯಮಿಯೂ ಆಗಿರುವ ರಘುರಾಮ ಶೆಟ್ಟಿ, ಕುಳೂರು ಕನ್ಯಾನ ರವರು ಶಾಲೆಗೆ ಕೊಡುಗೆಯಾಗಿ ನೀಡಿದ ಧ್ವನಿವರ್ಧಕವನ್ನು ಅವರ ಮಾತೃಶ್ರೀಯಾದ ಲೀಲಾವತಿ ಬಿ. ಶೆಟ್ಟಿ, ಕುಳೂರು ಕನ್ಯಾನ ರವರು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಜೊತೆಗೆ ಶಾಲೆಗೆ ಪಿ.ಟಿ.ಎ ವತಿಯಿಂದ ಕೊಡುಗೆಯಾಗಿ ದೊರೆತ ಮೈಕ್ ಸ್ಟ್ಯಾಂಡ್'ನ್ನು ಪಿ.ಟಿ.ಎ ಅಧ್ಯಕ್ಷರಾದ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ಅನಾವರಣಗೊಳಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಮೀಂಜ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾರ್ಡ್ ಸದಸ್ಯೆ ಚಂದ್ರಾವತಿ ವಿ.ಪಿ, ಮೀಂಜ ಪಂಚಾಯತ್ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕ್ಷೇತ್ರ ನಿರೂಪಣಾಧಿಕಾರಿ ವಿಜಯ್ ಕುಮಾರ್ ಪಿ, ಕುಳೂರು ಶಾಲಾ ಹಳೆ ವಿದ್ಯಾರ್ಥಿಯೂ, ಲೆಫ್ಟಿನೆಂಟ್ ಕರ್ನಲ್ ಆಗಿರುವ ಪ್ರಭಾಕರ ರೈ ನಡುಹಿತ್ಲು ಆಗಮಿಸಿದ್ದರು. ಲೀಲಾವತಿ ಬಿ. ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಹಾಸ ಶೆಟ್ಟಿ, ಕುಳೂರು ಕನ್ಯಾನ, ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ನಾರಾಯಣ ನೈಕ್ ನಡುಹಿತ್ಲು, ಬಾಲಕೃಷ್ಣ ಶೆಟ್ಟಿ ಪೊಯ್ಯೆಲ್, ಶಾಲಾ ಮಾತೃ ಸಂಘದ ಅಧ್ಯಕ್ಷೆ ಆಶಾಲತ ಕುಳೂರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ಗ್ರಂಥಾಲಯಕ್ಕೆ 'ಪುಸ್ತಕ ಸಂಗ್ರಹ ಅಭಿಯಾನ'ದ ಅಂಗವಾಗಿ ಊರವರು ಹಾಗೂ ಮಕ್ಕಳು ಸೇರಿ ಸಂಗ್ರಹಿಸಿದ ಹಲವಾರು ಪುಸ್ತಕಗಳನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡುವ ಮೂಲಕ ಗಮನ ಸೆಳೆದರು. ಬಳಿಕ ಉಪಜಿಲ್ಲಾ ಕ್ರೀಡಾಕೂಟ ಹಾಗೂ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ನಂತರ ಕುಳೂರು ಶಾಲಾ ಹಳೆ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.

ಸಂಭ್ರಮದ ಮಕ್ಕಳ ದಿನಾಚರಣೆ

                ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.

Monday 13 November 2017

ಮಕ್ಕಳ ದಿನಾಚರಣೆಯ ಸ್ಪರ್ಧೆಗಳು

          ಮಕ್ಕಳ ದಿನಾಚರಣೆಯ ಭಾಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ತಾ. 13-11-2017 ರಂದು ನಡೆಯಿತು.

Wednesday 1 November 2017

ಬಾಲಸಭೆ

                 ಒಕ್ಟೋಬರ್ ತಿಂಗಳ ಬಾಲಸಭೆಯು ಮಕ್ಕಳ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು, ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಲತಾ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಹರಿರಾಮ ಕುಳೂರು, ಶಾಲಾ ನಾಯಕಿ ಕುಮಾರಿ ಶ್ರೇಯಾ ಕರ್ಕೇರ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ವಿದ್ಯಾರ್ಥಿ ಲಕ್ಷ್ಮಣ ಸ್ವಾಗತಿಸಿ, ಕುಮಾರಿ ಸಾನ್ವಿಕ ವಂದಿಸಿದಳು. ಭುವನ ಕೆ ಕಾರ್ಯಕ್ರಮ ನಿರೂಪಿಸಿದಳು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.

'ಶ್ರದ್ಧ' ಉದ್ಘಾಟನೆ

              ಶಾಲಾ ಮಟ್ಟದ 'ಶ್ರದ್ಧ' ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು. ಉದ್ಘಾಟನೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಲತಾ ಕುಳೂರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಹರಿರಾಮ ಕುಳೂರು ಉಪಸ್ಥಿತರಿದ್ದು ಶುಭಹಾರೈಸಿದರು.