FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

S.VISITORS

2021-22

ತಾ. 31-01-2022 ನೇ ಸೋಮವಾರದಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್ ವಿ ಸರ್ ರವರು ನಮ್ಮ ಶಾಲೆಗೆ ಭೇಟಿ ಇತ್ತರು.

............................................................................

2020-21

ತಾ. 25-09-2020 ನೇ ಶುಕ್ರವಾರದಂದು ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್ ವಿ ರವರು ಶಾಲೆಗೆ ಭೇಟಿಯಿತ್ತು, ನಡೆಯುತ್ತಿರುವ ಆನ್ಲೈನ್ ಕ್ಲಾಸುಗಳ ಕುರಿತು ಚರ್ಚಿಸಿದರು. ಶಾಲಾ ಶಿಕ್ಷಕ ವೃಂದ ಮಕ್ಕಳ ಮನೆ ಮನೆಗೆ ಭೇಟಿ ಕೊಟ್ಟು ಆನ್ಲೈನ್ ಕ್ಲಾಸುಗಳ ಹಾಗೂ ಮಕ್ಕಳ ಕಲಿಕಾ ಚಟುವಟಿಕೆಗಳ ಪರಿಶೀಲನೆ ನಡೆಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

.....................................................................................................

2019-20

ತಾ. 05-11-2019 ನೇ ಬುಧವಾರದಂದು ಡಯೆಟ್ ಕಾಸರಗೋಡಿನ ಪ್ರಾಧ್ಯಾಪಕ ಶ್ರೀ ಶಶಿಧರ್ ಹಾಗೂ ಬಿ. ಆರ್. ಸಿ ಮಂಜೇಶ್ವರದ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ಗುರುಪ್ರಸಾದ್ ರೈ ರವರು ನಮ್ಮ ಕುಳೂರು ಶಾಲೆಗೆ ಭೇಟಿ ನೀಡಿ ಶಾಲಾ ಚಟುವಟಿಕೆಗಳನ್ನು ವೀಕ್ಷಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. 

ತಾ. 27-09-2019 ನೇ ಶುಕ್ರವಾರದಂದು ಶಾಲಾ ಮಧ್ಯಾಹ್ನದೂಟದ ವ್ಯವಸ್ಥೆಯ ಪರಿಶೀಲನೆಗಾಗಿ ಎಂ. ಡಿ. ಯಂ (Mid Day Meal) ಹೊಣೆಗಾರಿಕೆಯ ಅಧಿಕಾರಿ ಶ್ರೀ ಜಿತೇಂದ್ರರವರು ನಮ್ಮ ಕುಳೂರು ಶಾಲೆಯನ್ನು ಸಂದರ್ಶಿಸಿದರು.

ಮೊದಲ ಹಂತದ ಮೌಲ್ಯ ಮಾಪನ ಸಂದರ್ಭದಲ್ಲಿ ದಿನಾಂಕ
 29-08-2019 ನೇ ಗುರುವಾರದಂದು ಬಿ. ಆರ್. ಸಿ ತರಬೇತುದಾರರಾದ ಮೋಹಿನಿ ಟೀಚರ್ ಶಾಲೆಯನ್ನು ಸಂದರ್ಶಿಸಿದರು.

ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ರವರು ತಾ. 08-07-2019 ನೇ ಸೋಮವಾರದಂದು ವಾಚನಾ ಪಕ್ಷಾಚರಣೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಭೇಟಿ ನೀಡಿದ ಕ್ಷಣ. 

..................................................................................................... 

2018-19

ಕಾಸರಗೋಡು ಸಂಸದ ಶ್ರೀ ಪಿ. ಕರುಣಾಕರನ್ ರವರು ತಾ. 28-01-2019 ರಂದು ಶಾಲೆಗೆ ಕಂಪ್ಯೂಟರ್ ಉದ್ಘಾಟನಾ ಸಮಾರಂಭಕ್ಕೆ ಬಂದ ಸಂದರ್ಭ...

ತಾ.30-01-2019ನೇ ಬುಧವಾರದಂದು ಶಾಲಾ ಜೈವ ತರಕಾರಿ ತೋಟಕ್ಕೆ ಮೀಂಜ ಕೃಷಿ ಇಲಾಖೆಯ ಅಧಿಕಾರಿ ಭೇಟಿ ನೀಡಿದ ಸಂದರ್ಭ....

..................................................................................................... 

 2017-18

ಶಾಲಾ ಹಳೆ ವಿದ್ಯಾರ್ಥಿ ಹನೀಫ್ ಮಂಗಲಿಮಾರ್ ರವರು ಶಾಲೆಗೆ ಭೇಟಿ ಕೊಟ್ಟು ಶಾಲಾಭಿವೃದ್ಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ತಮ್ಮ ಕೈಲಾದ ಸಹಕಾರವನ್ನು ನೀಡುವುದಾಗಿ ಭರವಸೆಯಿತ್ತರು.

ಜಿ. ಎಲ್. ಪಿ ಶಾಲೆ, ವಾಮಂಜೂರು ಇಲ್ಲಿಯ ಅಧ್ಯಾಪಕರು ಹಾಗೂ ಪಿ. ಟಿ. ಎ ಸದಸ್ಯರು ನಮ್ಮ ಶಾಲಾ ಜೈವ ವೈವಿಧ್ಯ ಉದ್ಯಾನವನ್ನು ವೀಕ್ಷಿಸಲು ಬಂದ ಸಂದರ್ಭ...

ಜಿ. ಎಲ್. ಪಿ ಶಾಲೆ, ವಾಮಂಜೂರು ಇಲ್ಲಿಯ ಅಧ್ಯಾಪಕರು ಹಾಗೂ ಪಿ. ಟಿ. ಎ ಸದಸ್ಯರು ನಮ್ಮ ಶಾಲಾ ಜೈವ ವೈವಿಧ್ಯ ಉದ್ಯಾನವನ್ನು ವೀಕ್ಷಿಸಲು ಬಂದ ಸಂದರ್ಭ...

.....................................................................................................

2016-17

ತಾ. 08-12-2016 ರಂದು 'ಹಸಿರು ಕೇರಳ, ಸುಂದರ ಕೇರಳ' ಕಾರ್ಯಕ್ರಮದ ಸಂದರ್ಭದಲ್ಲಿ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ರವರು ಭೇಟಿಯಿತ್ತ ಕ್ಷಣ... 

No comments:

Post a Comment