ನಮ್ಮ ಶಾಲಾ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುತ್ ನ ಹುಟ್ಟು ಹಬ್ಬಕ್ಕೆ ಹೆತ್ತವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಭರ್ಜರಿ ಮಧ್ಯಾಹ್ನದೂಟ ನೀಡಿದರು.
ಪ್ರದ್ಯುತ್ ನ ಹೆತ್ತವರಾದ ಶ್ರೀ ರವಿರಾಜ್ ಚಿಗುರುಪಾದೆ ಹಾಗೂ ಮೀಯಪದವು ವಿದ್ಯಾವರ್ಧಕ ಎ.ಯುಪಿ.ಶಾಲಾ ಶಿಕ್ಷಕಿ ಶ್ರೀಮತಿ ದಿವ್ಯ ರವರು ಶಾಲೆಗೆ ಆಗಮಿಸಿ ತಮ್ಮ ಮಗನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವೆಜ್ ಪಲಾವ್, ಸಲಾಡ್, ಗೋಬಿ ಮಂಚೂರಿ, ಪಾಯಸ ಮತ್ತು ಹೋಳಿಗೆಯ ಸವಿ ಭೋಜನವನ್ನು ಉಣಬಡಿಸಿದರು.ಇಂದಿನ ಮಧ್ಯಾಹ್ನದೂಟವನ್ನು ಭರ್ಜರಿಯಾಗಿಸಿದ ಇವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ವಿದ್ಯಾರ್ಥಿ ಪ್ರದ್ಯುತ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.....




No comments:
Post a Comment