FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

ABOUT US

          ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು ಪ್ರಕೃತಿ ಸೌಂದರ್ಯದಿಂದ ಕೂಡಿದ ಶೈಕ್ಷಣಿಕ ಕೇಂದ್ರವಾಗಿದೆ. ಸುತ್ತಲೂ ಗುಡ್ಡ, ಗದ್ದೆ, ನದಿ-ತೋಡುಗಳಿಂದ ಕೂಡಿದ್ದು ನಿಸರ್ಗದ ಮಡಿಲಲ್ಲಿ ತಲೆಯೆತ್ತಿ ನಿಂತಿದೆ. ಇಲ್ಲಿನ ಹಿರಿಯರ ಸಹಕಾರದಿಂದ 10-02-1924 ರಲ್ಲಿ ಸ್ಥಾಪಿತವಾದ ಈ ವಿದ್ಯಾಕೇಂದ್ರವು ಬಳಿಕ 22-10-1982 ರಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಪುನರ್ ನಿರ್ಮಾಣಗೊಂಡಿತು. ಪ್ರಸ್ತುತ ಈ ಶಾಲೆಯು ಮೀಂಜ ಗ್ರಾಮ ಪಂಚಾಯತಿನಲ್ಲಿದ್ದು IX ನೇ ವಾರ್ಡಿನಲ್ಲಿದ್ದು ಸುಮಾರು 1.5 ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ.
          ತೀರಾ ಹಿಂದುಳಿದ ಪ್ರದೇಶವಾದ ಕುಳೂರು ಜನರ ಅನಕ್ಷರತೆ, ಬಡತನ ಮೊದಲಾದ ಪಿಡುಗನ್ನು ತೊಡೆದು ಹಾಕಲು ಇಲ್ಲಿನ ಕೆಲವು ಹಿರಿಯ ವಿದ್ಯಾಭಿಮಾನಿಗಳ ಮುತುವರ್ಜಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಂಜೂರಾಗಲು ಸಾಧ್ಯವಾಯಿತು. ಸುಮಾರು 9 ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡುತ್ತಾ ಬಂದಿರುವ ಈ ಶಾಲೆಯು ಶಾಲಾ ಪಿ.ಟಿ.ಎ ಹಾಗೂ ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
          ಆರಂಭದಲ್ಲಿ ಕೆಲವೇ ಮಕ್ಕಳಿಂದ ಆರಂಭಗೊಂಡ ಈ ಶಾಲೆಯು ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಹೆಚ್ಚುತ್ತಾ ಹೋಗಿ 4 ಮಂದಿ ಅಧ್ಯಾಪಕರನ್ನು ಒಳಗೊಂಡಿತ್ತು. ಕ್ರಮೇಣ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿಯಿಂದ ನಲುಗಿದ ಸಂಸ್ಥೆಯು ಇದೀಗ ಮಕ್ಕಳ ದಾಖಲಾತಿಯಲ್ಲಿ ಗಣನೀಯ ಇಳಿಮುಖವನ್ನು ಕಾಣುತ್ತಿದ್ದೆ. ಹೀಗಾಗಿ ಮಕ್ಕಳ ದಾಖಲಾತಿಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು, ಸಹ ಅಧ್ಯಾಪಕರು, ಪಿ.ಟಿ.ಎ, ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಊರಿನ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ವಿವಿಧ ಶಾಲಾಭಿವೃದ್ಧಿ ಕಾರ್ಯಕ್ರಮಗಳನ್ನಿಟ್ಟು ಕಾರ್ಯವೆಸಗುತ್ತಿದ್ದು ಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ.
         ಶಾಲೆಯು ಎಲ್ಲಾ ತರದ ಸೌಲಭ್ಯಗಳನ್ನು ಹೊಂದಿಕೊಂಡಿದ್ದು ಶಾಲಾ ಮಕ್ಕಳಲ್ಲಿ ಜಾತಿ ಬೇಧವಿಲ್ಲದೆ ಐಕ್ಯತೆಯಿಂದ ಮುನ್ನಡೆಯುವ ಪ್ರತ್ಯೇಕತೆ ಈ ಶಾಲೆಗಿದೆ ಎಂದು ಹೇಳಲು ಹಮ್ಮೆ ಪಡುತ್ತೇವೆ.


















       ಕುಳೂರು ಶಾಲೆಯು ಮೊದಲು ಇದ್ದ ಸ್ಥಳ. ಶಾಲೆದಪಡ್ಪು ಎಂದು ಕರೆಯಲ್ಪಡುವ ಈ ಸ್ಥಳದಿಂದ ಶಾಲೆಯು ಅಲ್ಲಿಯೇ ಸ್ವಲ್ಪ ದೂರದಲ್ಲಿ ಸ್ಥಳಾಂತರಗೊಂಡು ಸುಂದರ, ವ್ಯವಸ್ಥಿತ ಕಟ್ಟಡದಲ್ಲಿ ಈಗ ಕಾರ್ಯಾಚರಿಸುತ್ತಿದೆ.

No comments:

Post a Comment