FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 20 September 2019

ಕ್ಲಾಸ್ ಪಿ.ಟಿ.ಎ

       ದಿನಾಂಕ 20-09-2019 ನೇ ಶುಕ್ರವಾರ ದಂದು ಮೊದಲ ಹಂತದ ಮೌಲ್ಯ ಮಾಪನದ ನಂತರದ ಮೊದಲ ಕ್ಲಾಸ್ ಪಿ. ಟಿ. ಎ ನಡೆಯಿತು.


ಲ್ಯಾಪ್ಟಾಪ್, ಪ್ರೋಜೆಕ್ಟರ್ ಉದ್ಘಾಟನೆ

        ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ದೊರೆತ ಲ್ಯಾಪ್ಟಾಪ್ ಹಾಗೂ ಪ್ರೋಜೆಕ್ಟರ್ ನ ಉದ್ಘಾಟನಾ ಸಮಾರಂಭ ನಡೆಯಿತು. 
        ಲ್ಯಾಪ್ಟಾಪ್ ಹಾಗೂ ಪ್ರೋಜೆಕ್ಟರ್ ನ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ನೆರವೇರಿಸಿ 'ಶಿಕ್ಷಣ ಇಲಾಖೆ ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸುವ ಮೂಲಕ ಮಹತ್ತರವಾದ ಹೆಜ್ಜೆ ಇಡುತ್ತಿದ್ದು, ಕೇರಳದ ಶಿಕ್ಷಣ ರಂಗದಲ್ಲಿ ಮತ್ತಷ್ಟು ಆಮೂಲಾಗ್ರ ಬದಲಾವಣೆ ಆಗಲಿದೆ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರೀತ ಕುಳೂರು ಹೊಸಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿ  ನಯನ ಎಂ ಬುಲ್ ಬುಲ್ ನ  ಕುರಿತು ಮಾಹಿತಿ ನೀಡಿದರು. ಅಧ್ಯಾಪಕ  ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.

 .  





Saturday 7 September 2019

ತರಕಾರಿ ತೋಟದಲ್ಲಿ ಶ್ರಮದಾನ

      ಇಂದು (ತಾ. 07-09-2019) ಶಾಲಾ ತರಕಾರಿ ತೋಟದಲ್ಲಿ ಶ್ರಮದಾನದಲ್ಲಿ ನಡೆಯಿತು. ಈ ಶ್ರಮದಾನದಲ್ಲಿ ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ ಹರಿರಾಮ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಜಯರಾಜ್ ಶೆಟ್ಟಿ ಚಾರ್ಲ (ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ) ಹಾಗೂ ಕುಮಾರಿ ಶರಣ್ಯ ರವರು ಭಾಗವಹಿಸಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳು..








Friday 6 September 2019

ಓಣಂ ಆಚರಣೆ

      ಕೇರಳದ ಪ್ರಧಾನ ಹಬ್ಬವಾದ ಓಣಂ ಹಬ್ಬವನ್ನು ನಮ್ಮ ಕುಳೂರು ಶಾಲೆಯಲ್ಲೂ ಆಚರಿಸಲಾಯಿತು. ಆ ಪ್ರಯುಕ್ತ ಹೂವಿನ ರಂಗೋಲಿ ಬಿಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆಯನ್ನು ತಿಳಿಸಿದರು. ಕೇರಳದಲ್ಲುಂಟಾದ ಜಲ ಪ್ರಳಯದ ಕಾರಣದಿಂದಾಗಿ ಸರಳವಾಗಿ ಆಚರಿಸಲಾಯಿತು.














ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿ ಸಂಗ್ರಹ

        ಕೇರಳದಲ್ಲಿ ಉಂಟಾದ ಜಲಪ್ರಳಯಕ್ಕೆ ತತ್ತರಿಸಿದ ಜನರಿಗೆ ಸ್ಪಂದಿಸಲು ನಮ್ಮ ಶಾಲಾ ಮಕ್ಕಳಿಂದ ಮುಖ್ಯ ಮಂತ್ರಿಯವರ ನೆರೆ ಪರಿಹಾರ ನಿಧಿಗೆ ಧನ ಸಂಗ್ರಹ ನಡೆಯಿತು.







ಶಿಕ್ಷಕರ ದಿನಾಚರಣೆ

      ನಮ್ಮ ಕುಳೂರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳು ಶಿಕ್ಷಕರಿಗೆ ವಿವಿಧ ಮನೋರಂಜನಾ ಆಟಗಳ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.