FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 30 June 2018

ತೊಂಡೆ ಕೃಷಿಗೆ ಶ್ರಮದಾನ

          ಶಾಲಾ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಶಾಲಾ ಪರಿಸರದಲ್ಲಿ ನಡೆಸಲುದ್ದೇಶಿಸಲಾದ ತರಕಾರಿ ತೋಟದ ನಿರ್ಮಾಣಕ್ಕೆ ಶಾಲಾ ಹಳೆ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು ಹಾಗೂ ಶಾಲಾ ಶಿಕ್ಷಕರು ಶ್ರಮದಾನ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ತೊಂಡೆ ಕೃಷಿಗೆ ಬೇಕಾದ ಸುಮಾರು 50 ರಷ್ಟು ಗುಂಡಿಗಳನ್ನು ತೆಗೆದು ಎಲ್ಲರಿಗೂ ಮಾದರಿಯೆನಿಸಿದರು.











ವಿದ್ಯಾರಂಗ ಹಾಗೂ ಬಾಲಸಭೆ ಉದ್ಘಾಟನೆ

     ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರಂಗ ಸಾಹಿತ್ಯ ವೇದಿಕೆ ಹಾಗೂ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ.ಪಿ ನೆರವೇರಿಸಿ 'ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬಾಲಸಭೆಯು ಒಳ್ಳೆಯ ವೇದಿಕೆ. ಇದನ್ನು ಮಕ್ಕಳು ಸದ್ಬಳಕೆ ಮಾಡುವಂತಾಗಲಿ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕಿ ಸಾನ್ವಿಕ ವಹಿಸಿದ್ದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ಮಕ್ಕಳ ಹಸ್ತಪತ್ರಿಕೆಯಾದ 'ಚಿಲುಮೆ' ಯನ್ನು ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಶುಭಹಾರೈಸಿದರು. ವಿದ್ಯಾರ್ಥಿನಿ ಕುಮಾರಿ ಗಣ್ಯಶ್ರೀ ಸ್ವಾಗತಿಸಿ, ವಿದ್ಯಾರ್ಥಿ ದುರ್ಗಾಪ್ರಸಾದ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರಂಗ ಸಾಹಿತ್ಯ ವೇದಿಕೆ ಹಾಗೂ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
      ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ.ಪಿ ನೆರವೇರಿಸಿ 'ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬಾಲಸಭೆಯು ಒಳ್ಳೆಯ ವೇದಿಕೆ. ಇದನ್ನು ಮಕ್ಕಳು ಸದ್ಬಳಕೆ ಮಾಡುವಂತಾಗಲಿ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕಿ ಸಾನ್ವಿಕ ವಹಿಸಿದ್ದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ಮಕ್ಕಳ ಹಸ್ತಪತ್ರಿಕೆಯಾದ 'ಚಿಲುಮೆ' ಯನ್ನು ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಶುಭಹಾರೈಸಿದರು. ವಿದ್ಯಾರ್ಥಿನಿ ಕುಮಾರಿ ಗಣ್ಯಶ್ರೀ ಸ್ವಾಗತಿಸಿ, ವಿದ್ಯಾರ್ಥಿ ದುರ್ಗಾಪ್ರಸಾದ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.



Wednesday 27 June 2018

ನವಯುವಕ ಗ್ರಂಥಾಲಯ ಸಂದರ್ಶನ

        ವಾಚನಾ ವಾರಾಚರಣೆಯ ಭಾಗವಾಗಿ ನವಯುವಕ ಕಲಾ ವೃಂದದ ಗ್ರಂಥಾಲಯವನ್ನು ಸಂದರ್ಶಿಸಲಾಯಿತು. ಶಾಲಾ ಮಕ್ಕಳು ಗ್ರಂಥಾಲಯಯ ಪುಸ್ತಕಗಳನ್ನು ಪರಿಚಯಿಸಿಕೊಂಡರು. ಶಾಲಾ ಶಿಕ್ಷಕ ವೃಂದ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ಸಹಕರಿಸಿದರು.




Monday 25 June 2018

ವಾಚನಾ ಸಪ್ತಾಹದ ಸಮಾರೋಪ ಸಮಾರಂಭ

     ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು.
ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ, ಮಾತೃ ಸಂಘದ ಅಧ್ಯಕ್ಷೆ ಆಶಾಲತ ಕುಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಚನಾ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ನಯನ ಯಂ ವಂದಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ನವಿನಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ ಸಹಕರಿಸಿದರು.





Friday 22 June 2018

ಚಿತ್ರ ಪ್ರದರ್ಶನ ಹಾಗೂ ಪುರಾತನ ವಸ್ತು ಸಂಗ್ರಹ ಪ್ರದರ್ಶನ

         ನವಯುವಕ ಕಲಾವೃಂದ ಗ್ರಂಥಾಲಯ ಚಿನಾಲ, ಕುಳೂರು ಇದರ ನೇತೃತ್ವದಲ್ಲಿ ಗ್ರಂಥಾಲಯ ವಾಚನ ಪಕ್ಷಾಚರಣೆಯ ಭಾಗವಾಗಿ ಚಿತ್ರ ಪ್ರದರ್ಶನ ಹಾಗೂ ಪುರಾತನ ವಸ್ತು ಸಂಗ್ರಹ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಲತ ಕುಳೂರು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ರಾಧಾಕೃಷ್ಣ ಮಾಸ್ಟರ್, ನವಯುವಕ ಕಲಾವೃಂದ ಗ್ರಂಥಾಲಯದ ಸದಸ್ಯರಾದ ಶ್ರೀ ಕಮಲಾಕ್ಷ ಚಿನಾಲ ಉಪಸ್ಥಿತರಿದ್ದರು. ನವಯುವಕ ಕಲಾವೃಂದ ಗ್ರಂಥಾಲಯದ ಸದಸ್ಯರಾದ ಶ್ರೀ ಉದಯ ಸಿ. ಎಚ್ ಸ್ವಾಗತಿಸಿ, ಶ್ರೀ ಕಮಲಾಕ್ಷ ಚಿನಾಲ ವಂದಿಸಿದರು. ಚಿತ್ರ ಕಲಾವಿದರಾದ ರಾಧಾಕೃಷ್ಣ ಮಾಸ್ಟರ್ ರವರ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪುರಾತನ ವಸ್ತು ಸಂಗ್ರಹದ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗದ್ದೆ ಕೃಷಿ ಉಪಕರಣಗಳು, ಗೃಹೋಪಕರಣಗಳು, ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ನೋಟು, ಸ್ಟಾಂಪ್, ಭಿತ್ತಿ ಪತ್ರಿಕೆ ಎಲ್ಲರ ಗಮನ ಸೆಳೆಯಿತು.




















Thursday 21 June 2018

ಯೋಗ ದಿನಾಚರಣೆ

          ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಯವರು ಶಾಲಾ ಮಕ್ಕಳಿಗೆ ವಿಶ್ವ ಯೋಗ ದಿನದ ಮಹತ್ವವನ್ನು ತಿಳಿಸುವುದರೊಂದಿಗೆ ಸರಳ ಯೋಗಗಳನ್ನು ಮಾಡಿ ತೋರಿಸಿದರು. ಶಾಲಾ ಅಧ್ಯಾಪಿಕೆಯರಾದ ಸೌಮ್ಯ ಪಿ, ನಯನ ಬೇರಿಕೆ, ನಮಿತಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ ಉಪಸ್ಥಿತರಿದ್ದು ಸಹಕರಿಸಿದರು.





Tuesday 19 June 2018

ವಾಚನಾ ಸಪ್ತಾಹ ಉದ್ಘಾಟನೆ

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಸಪ್ತಾಹದ ಉದ್ಘಾಟನೆ ನಡೆಯಿತು.
ಪಿ.ಎನ್ ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ದಿನವಾಗಿ ಆಚರಿಸಿ ಒಂದು ವಾರಗಳ ಕಾಲ ವಾಚನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ರವರು ನೆರವೇರಿಸಿ 'ತಲೆ ತಗ್ಗಿಸಿ ಪುಸ್ತಕ ಓದು, ಅದು ನಿನ್ನ ತಲೆ ಎತ್ತುವಂತೆ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಓದುವುದರಿಂದ ಜ್ಞಾನ ಭಂಡಾರ ಹೆಚ್ಚಾಗುವುದಲ್ಲದೆ ಬುದ್ಧಿಯೂ ಚುರುಕಾಗುತ್ತದೆ' ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಅಧ್ಯಕ್ಷತೆ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಅಧ್ಯಾಪಿಕೆ ಸೌಮ್ಯ ಪಿ ವಂದಿಸಿದರು. ಅಧ್ಯಾಪಿಕೆಯರಾದ ನಯನ ಬೇರಿಕೆ, ಅಶ್ವಿನಿ ಎಲಿಯಾಣ ಸಹಕರಿಸಿದರು.






Monday 18 June 2018

ಬಿ.ಆರ್.ಸಿ ತರಬೇತುದಾರ ಭೇಟಿ

       'ಹಲೋ ಇಂಗ್ಲೀಷ್' ಕಾರ್ಯಕ್ರಮದ ಭಾಗವಾಗಿ ಬಿ. ಆರ್. ಸಿ ತರಬೇತುದಾರ ಇಸ್ಮಾಯಿಲ್ ಮಾಸ್ಟರ್ ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ 'ಹಲೋ ಇಂಗ್ಲೀಷ್' ಚಟುವಟಿಕೆಗಳನ್ನು ಶಾಲಾ ಶಿಕ್ಷಕಿ ಸೌಮ್ಯ ಪಿ ನಡೆಸಿಕೊಟ್ಟರು.






Friday 15 June 2018

ಕನ್ನಡ ಕಂದನ ಸಿರಿಚಂದನ ಗಿಡ

          ಸಿರಿ ಚಂದನ ಕನ್ನಡ ಯುವ ಬಳಗ ಕಾಸರಗೋಡು ಇವರ ನೇತೃತ್ವದಲ್ಲಿ ಪರಿಸರ ದಿನಾಚರಣೆಯ ಭಾಗವಾಗಿ 'ಕನ್ನಡ ಕಂದನ ಸಿರಿಚಂದನ ಗಿಡ' ಎನ್ನುವ ವಿನೂತನ ಕಾರ್ಯಕ್ರಮ ನಮ್ಮ ಕುಳೂರು ಶಾಲಾ ವಿದ್ಯಾರ್ಥಿನಿ ಕುಮಾರಿ ಸಾನ್ವಿಕಳ ಮನೆಯಲ್ಲಿ ನಡೆಯಿತು. ಇದರಂಗವಾಗಿ ಸಾನ್ವಿಕ ತನ್ನ ಮನೆ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಡಿ ಇಟ್ಟಳು. ಈ ಸಂದರ್ಭದಲ್ಲಿ ಸಿರಿ ಚಂದನ ಕನ್ನಡ ಯುವ ಬಳಗ ಕಾಸರಗೋಡು ಇವರ ರೂವಾರಿ, ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಶ್ರೀ ರತ್ನಾಕರ ಮಲ್ಲಮೂಲೆ, ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಜಯರಾಜ್ ಶೆಟ್ಟಿ ಚಾರ್ಲ, ಸಿರಿ ಚಂದನ ಕನ್ನಡ ಯುವ ಬಳಗದ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.