FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 13 June 2018

ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

      ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ನಡೆಯಿತು.
         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ವಹಿಸಿದ್ದರು. ಪಿ.ಟಿ.ಎ ಉಪಾಧ್ಯಕ್ಷೆ ಸೌಮ್ಯಲತ ಕುಳಿಂಜ, ಮಾತೃ ಸಂಘದ ಅಧ್ಯಕ್ಷೆ ಆಶಾಲತ ಕುಳೂರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ಕಳೆದ ಶೈಕ್ಷಣಿಕ ವರ್ಷದ ಶಾಲಾ ವರದಿಯನ್ನು ಮಂಡಿಸಿದರು. ಬಳಿಕ ಈ ವರ್ಷದ ನೂತನ ರಕ್ಷಕ-ಶಿಕ್ಷಕ ಸಂಘ ಹಾಗೂ ಮಾತೃ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ಅವಿರೋಧವಾಗಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷೆಯಾಗಿ ಪ್ರೇಮ ಜಿ ಶೆಟ್ಟಿ ಕುಳೂರು ರವರು ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾಗಿ ಸೌಮ್ಯಲತಾ, ಹೇಮಲತಾ ಕೆ, ರಾಜಲಕ್ಷ್ಮೀ, ಸ್ವಾತಿ, ಆಶಾಲತ, ಸುನೀತಾ, ಯಶೋಧ ಕುಳೂರು, ಅಯ್ಯಪ್ಪದಾಸ್, ಸವಿತ, ರೇಷ್ಮ, ಬೇಬಿ, ಸುಪ್ರೀತ, ರೂಪ, ಝೈನಬ, ಆನಂದ ಹಾಗೂ ಯಶೋಧ ಪೊಯ್ಯೆಲ್ ಆಯ್ಕೆಯಾದರು.
          ಮಾತೃ ಮಂಡಳಿಯ ಅಧ್ಯಕ್ಷೆಯಾಗಿ ಆಶಾಲತಾ ಕುಳೂರು ಪುನರಾಯ್ಕೆಗೊಂಡರು. ಉಪಾಧ್ಯಕ್ಷೆಯಾಗಿ ಸುನೀತಾ ಕುಳೂರು ಅವಿರೋಧವಾಗಿ ಆಯ್ಕೆಯಾದರು. ಸದಸ್ಯೆರಾಗಿ ರಾಜಲಕ್ಷ್ಮೀ, ಸ್ವಾತಿ, ಹೇಮಲತಾ, ಸೌಮ್ಯಲತ ಕುಳಿಂಜ, ಸವಿತ, ರೇಷ್ಮ, ಯಶೋಧ ಕುಳೂರು, ಬೇಬಿ, ಸುಪ್ರಿತ, ರೂಪ, ಝೈನಬ ಹಾಗೂ ಯಶೋಧ ಪೊಯ್ಯೆಲ್ ಆಯ್ಕೆಯಾದರು. ಪ್ರೀ-ಪ್ರೈಮರಿ ವಿಭಾಗದ ಸಮಿತಿಗೆ ಅಧ್ಯಕ್ಷರಾಗಿ ಕಮಲಾಕ್ಷ ಚಿನಾಲ ಆಯ್ಕೆಗೊಂಡರು.
           ಇದೇ ಸಂದರ್ಭದಲ್ಲಿ ಶಾಲಾ ವಾಹನದ ಕೊಡುಗೆ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಪ್ರೀ-ಪ್ರೈಮರಿ ವಿಭಾಗದ ವ್ಯವಸ್ಥೆಯನ್ನು ಮಾಡಿದ ಕೊಡುಗೈ ದಾನಿಗಳಿಗೆ ಪಿ.ಟಿ.ಎ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು, ಅಧ್ಯಾಪಿಕೆ ನಯನ ಕೆ ವಂದಿಸಿದರು.

No comments:

Post a Comment