FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 29 October 2016

ಶಾಸ್ತ್ರ ಮೇಳದ ಪ್ರತಿಭೆಗಳು

ಶಾಸ್ತ್ರ ಮೇಳದ ಪ್ರತಿಭೆಗಳು
ಸರಕಾರಿ ಪ್ರೌಢ ಶಾಲೆ ಪೈವಳಿಕೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ಬರೆಯುವ ಚೋಕ್ ನಿರ್ಮಾಣ ಸ್ಪರ್ಧೆಯಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ಪ್ರಥಮ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣ ಸ್ಪರ್ಧೆಯಲ್ಲಿ ಹರ್ಷಿತ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೆಟಲ್ ಎನ್'ಗ್ರೇವಿಂಗ್'ನಲ್ಲಿ ಶ್ರವಣ್ 'ಎ' ಗ್ರೇಡ್'ನೊಂದಿಗೆ ತೃತೀಯ, ತೆಂಗಿನ ಕಾಯಿ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲಾ ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಶಾಲಾ ಪಿ.ಟಿ.ಎ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Friday 28 October 2016

ದೀಪಾವಳಿ ಆಚರಣೆ

             ನಮ್ಮ ಶಾಲೆಯಲ್ಲಿ ದೀಪಾವಳಿ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸಾಲು ಹಣತೆಗಳನ್ನು ಹಚ್ಚಿ, ವಿವಿಧ ಪಟಾಕಿಗಳನ್ನು ಸಿಡಿಸಿ ಮಕ್ಕಳು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ದೀಪಾವಳಿಯ ಹಿನ್ನೆಲೆಯನ್ನು ಕಥೆ ಹೇಳುವುದರೊಂದಿಗೆ ಮಕ್ಕಳಿಗೆ ವಿವರಿಸಿದರು. ಮಧ್ಯಾಹ್ನ ಪಾಯಸದ ಊಟ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಸೌಮ್ಯ ಪಿ, ರಘುನಾಥ ಕೆ, ಕುಮಾರಿ ಶ್ವೇತ ಹಾಗೂ ಗಂಜಿ ಬೇಯಿಸುವ ಜಲಜ ರವರು ಉಪಸ್ಥಿತರಿದ್ದು ಸಹಕರಿಸಿದರು.











Thursday 27 October 2016

ಉಪಜಿಲ್ಲಾ ವೃತ್ತಿಪರಿಚಯ ಮೇಳದ ಪ್ರತಿಭೆಗಳು

        ಸರಕಾರಿ ಪ್ರೌಢ ಶಾಲೆ ಪೈವಳಿಕೆ, ಕಾಯರ್'ಕಟ್ಟೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬರೆಯವ ಚೋಕ್ ನಿರ್ಮಾಣದಲ್ಲಿ ಶ್ರೇಯ ಕರ್ಕೇರ 'ಎ'ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ಹರ್ಷಿತ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎನ್'ಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ತೃತೀಯ ಸ್ಥಾನ ಹಾಗೂ ಗೆರಟೆಯಿಂದ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷಣ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲಾ ಪಿ.ಟಿ.ಎ ಅಭಿನಂದನೆ ಸಲ್ಲಿಸಿದ್ದಾರೆ.


Wednesday 26 October 2016

ಶಾಲಾ ಮಟ್ಟದ ಕ್ರೀಡಾಕೂಟ

           ಉಪಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳನ್ನು ಆಯ್ಕೆ ಮಾಡಲು ಶಾಲಾ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಎಲ್ಲಾ ಮಕ್ಕಳು ಸ್ಪರ್ಧಾತ್ಮಕವಾಗಿ ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ, ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತ ಕುಳೂರು ಉಪಸ್ಥಿತರಿದ್ದು ಸಹಕರಿಸಿದರು.










Monday 17 October 2016

ಗೌರವದ ನೆನಪಿನ ಕಾಣಿಕೆ

         ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆಗೈದು ವರ್ಗಾವಣೆಗೊಂಡ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್, ಅಧ್ಯಾಪಕ ಶ್ರೀ ಇಸ್ಮಾಯಿಲ್ ಹಾಗೂ ಅಧ್ಯಾಪಿಕೆ ಶ್ರೀಮತೀ ಪ್ರತಿಭಾ ರವರಿಗೆ ಶಾಲಾ ಪಿ.ಟಿ.ಎ ವತಿಯಿಂದ ಸವಿನೆನಪಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಶ್ರೀಮತೀ ಚಂದ್ರಾವತಿ,ಮಾಜೀ ಪಿ.ಟಿ.ಎ ಅಧ್ಯಕ್ಷ ಶ್ರೀ ಹರಿರಾಮ್ ಕುಳೂರು, ಪಿಟಿ.ಎ ಅಧ್ಯಕ್ಷೆ ಶ್ರೀಮತೀ ಸೌಮ್ಯಲತಾ, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತೀ ಮಮತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ವಿನೋದ್ ಕುಮಾರ್ ಬಿ ಸ್ವಾಗತಿಸಿ, ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ವಂದಿಸಿದರು. ಶಾಲಾ ಅಧ್ಯಾಪಿಕೆ ಶ್ರೀಮತೀ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು.














Saturday 15 October 2016

ವಿಶ್ವ ಕೈ ತೊಳೆಯುವ ದಿನಾಚರಣೆ (Global hand wash day)

           ನಮ್ಮೀ ಶಾಲೆಯಲ್ಲಿ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ರವರು ದಿನ ವಿಶೇಷತೆಯನ್ನು ತಿಳಿಸಿ, ವ್ಯಕ್ತಿ ಶುಚಿತ್ವದ ಕುರಿತು ಅರಿವು ಮೂಡಿಸಿದರು. ಮಕ್ಕಳಿಗೆ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷತೆಯನ್ನು ನೀಡುವುದರೊಂದಿಗೆ ಮಕ್ಕಳಲ್ಲೂ ಕೈ ತೊಳೆಯುವ ವಿಧಾನವನ್ನು ಮಾಡಿಸಿದರು.






Friday 7 October 2016

ಶಾರದಾ ಪೂಜೆ

         ನವರಾತ್ರಿಯ ಅಂಗವಾಗಿ ನಮ್ಮೀ ಶಾಲೆಯಲ್ಲಿ ಶಾರದಾ ಪೂಜೆಯನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಪಾಯಸದೂಟದೊಂದಿಗೆ ಭೋಜನವನ್ನು ಸವಿಯಲಾಯಿತು.








Wednesday 5 October 2016

ಶಾಸ್ತ್ರ ಮೇಳದ ತರಭೇತಿ

         ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳಕ್ಕೆ ಮಕ್ಕಳನ್ನು ತಯಾರು ಮಾಡಲು ಮಕ್ಕಳಿಗೆ ತರಭೇತಿಯನ್ನು ನೀಡಲಾಯಿತು. ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ಸ್ಥಳೀಯರಾದ ಚೋಮ ಕುಳೂರು ರವರು ಪ್ರಾತ್ಯಕ್ಷಿತೆ ನೀಡಿ, ತರಭೇತಿಯನ್ನು ಕೊಟ್ಟರು. ಜೊತೆಗೆ ಶಾಲಾ ಶಿಕ್ಷಕ ವೃಂದ ಮಕ್ಕಳಿಗೆ ತರಭೇತಿಯನ್ನು ನೀಡಿದರು.