FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 21 July 2017

ಚಾಂದ್ರ ದಿನಾಚರಣೆ

           ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರ ದಿನವನ್ನು ಆಚರಿಸಲಾಯಿತು.
           ಆ ಪ್ರಯುಕ್ತ ನಡೆಸಿದ ಚಿತ್ರ ಪ್ರದರ್ಶನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಉದ್ಘಾಟಿಸಿದರು. ಜೊತೆಗೆ ಚಾಂದ್ರ ಯಾನದ ವೀಡಿಯೋ ತೋರಿಸಲಾಯಿತು. ಮಕ್ಕಳಿಗೆ ಚಾಂದ್ರ ದಿನದ ವಿಶೇಷತೆಯನ್ನು ತಿಳಿಸಲಾಯಿತು. ಬಳಿಕ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಯವರು ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯ ಪಿ, ರೇಶ್ಮಾ, ಶ್ವೇತಾ ಸಹಕರಿಸಿದರು.









Monday 17 July 2017

ಶಾಲಾ ಮಕ್ಕಳ ಬಯಲು ಪ್ರವಾಸ

                 ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೃಷಿಯ ಕುರಿತಾಗಿ ಮಾಹಿತಿಯನ್ನು ತಿಳಿಯಲು ಬಯಲು ಪ್ರವಾಸ ಕೈಗೊಂಡರು.
                  ಕುಳೂರು ಪೊಯ್ಯೆಲ್'ನಲ್ಲಿನ ಪ್ರಗತಿಪರ ಕೃಷಿಕರಾದ ಶ್ರೀ ಪಿ.ಆರ್.ಶೆಟ್ಟಿ ಯವರ ಕೃಷಿ ಭೂಮಿಗೆ ತೆರಳಿ ಭತ್ತ ಕೃಷಿಯ ವಿವಿಧ ವಿಧಾನಗಳನ್ನು ತಿಳಿದುಕೊಂಡರು. ಮಕ್ಕಳು ಸ್ವತಃ ಗದ್ದೆಗೆ ಇಳಿದು ನೇಜಿ ತೆಗೆಯುವ ಕಾಯಕವನ್ನು ಮಾಡಿ ಸ್ವ-ಅನುಭವವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ನೇಜಿ ತೆಗೆಯುತ್ತಿದ್ದ ರಾಜೀವಿ ಪೊಯ್ಯೆಲುರವರು ಓಬೇಲೆ ಪಾಡ್ದನ ಹಾಡುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು. ಶ್ರೀ ಶಶಿಧರ ಪೊಯ್ಯೆಲ್, ಶ್ರೀ ಕೇಶವ ಕುಳಿಂಜರವರು ಮಾಡುತ್ತಿದ್ದ ಉಳುಮೆಯ ಕೆಲಸವನ್ನು ಕಂಡು ಮಾಹಿತಿಯನ್ನು ಪಡೆದರು. ಇದೇ ಸಂದರ್ಭದಲ್ಲಿ ಕೃಷಿ ಕಾಯಕದಲ್ಲಿ ನಿಪುಣತೆಯನ್ನು ಪಡೆದಿರುವ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ರವರಲ್ಲಿ ಮಕ್ಕಳು ವಿಶೇಷ ಸಂದರ್ಶನ ನಡೆಸಿ ಕೃಷಿ ಕಾಯಕದ ಕುರಿತಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು. ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ತಾಳ್ಮೆಯಿಂದ ಸವಿವರವಾಗಿ ಮಾಹಿತಿಯನ್ನು ಕೊಟ್ಟದ್ದು ಔಚಿತ್ಯಪೂರ್ಣವೆನಿಸಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತಾ ಬಯಲು ಪ್ರವಾಸದ ನೇತೃತ್ವ ವಹಿಸಿದ್ದರು.






Tuesday 11 July 2017

ವಿಶ್ವ ಜನಸಂಖ್ಯಾ ದಿನಾಚರಣೆ

               ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
               ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಮಕ್ಕಳಿಗೆ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಬಳಿಕ ಮಕ್ಕಳಿಂದ 'ಜನಸಂಖ್ಯಾ ಹೆಚ್ಚಳದ ಒಳಿತು ಮತ್ತು ಕೆಡುಕುಗಳು' ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸಂವಾದದ ಮದ್ಯಸ್ಥಿಕೆಯನ್ನು ವಹಿಸಿದ್ದರು. ಮಕ್ಕಳ ಎರಡು ಗುಂಪುಗಳ ನಡುವೆ ಸಂವಾದ ನಡೆಯಿತು. ಶಾಲಾ ನಾಯಕಿ ಕುಮಾರಿ ಶ್ರೇಯಾ ಕರ್ಕೇರ ಸ್ವಾಗತಿಸಿ, ಉಪನಾಯಕ ಶ್ರವಣ್ ಕುಮಾರ್ ವಂದಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ರೇಶ್ಮಾ, ಶ್ವೇತಾ ಸಹಕರಿಸಿದರು.



Friday 7 July 2017

ಶಾಲೋದ್ಯಾನದಲ್ಲಿ ಕೆಲಸ

               ಶಾಲಾ ಉದ್ಯಾನದಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕೆಲಸ ನಡೆಸಲಾಯಿತು. ಶ್ರೀ ಹರಿರಾಮ ಕುಳೂರು, ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.





Sunday 2 July 2017

ಉಚಿತ ವೈದ್ಯಕೀಯ ಶಿಬಿರ

             ನಮ್ಮ ಶಾಲೆಯಲ್ಲಿ ಮೀಂಜ ಗ್ರಾಮ ಪಂಚಾಯತು, ಹಳೆ ವಿದ್ಯಾರ್ಥಿ ಸಂಘ ಹಾಗೂ ಆಯುರ್ವೇದಿಕ್ ಆಸ್ಪತ್ರೆ ಮೀಂಜ ಇದರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
             ಶಿಬಿರದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೀಂಜ ಆಯುರ್ವೇದಿಕ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಗಳಾದ ಡಾ. ರಾಜಾರಾಮ, ಡಾ. ಮಹೇಶ್, ಡಾ. ಗಣೇಶ್, ಕುಳೂರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ, ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ಶ್ರೀ ನಾರಾಯಣ ನೈಕ್, ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಕಂಚಿಲ, ಉಪಾಧ್ಯಕ್ಷರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕುಳೂರು ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ಯವರನ್ನು ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ  ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಹರಿರಾಮ ಕುಳೂರು ಸ್ವಾಗತಿಸಿ, ಸದಸ್ಯರಾದ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ರವರು ವಂದಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ನಿರೂಪಣೆಗೈದರು. ಬಳಿಕ ಸಾರ್ವಜನಿಕರ ಆರೋಗ್ಯ ಪರೀಕ್ಷೆ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀ ಜಗದೀಶ್ ಶೆಟ್ಟಿ ಎಲಿಯಾಣ, ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಶ್ರೀ ವಸಂತ ಪೂಜಾರಿ, ಕುಮಾರಿ ಶ್ವೇತಾ ಎಲಿಯಾಣ, ಜಲಜ ಪೊಯ್ಯೆಲು, ನಂದಕುಮಾರ್ ಕುಳೂರು ಉಪಸ್ಥಿತರಿದ್ದು ಸಹಕರಿಸಿದರು.