FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 16 March 2026

ವೀಕ್ಷಿತಳ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಉಡುಗೊರೆ :

         ನಮ್ಮ ಶಾಲಾ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವೀಕ್ಷಿತ ತನ್ನ 10 ನೇ ವರ್ಷದ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಉಡುಗೊರೆಯನ್ನು ನೀಡಿ ವಿಶೇಷವಾಗಿ ಆಚರಿಸಿದಳು. 

       ವೀಕ್ಷಿತ ಇಂದು ಹೆತ್ತವರಾದ ಶ್ರೀ ಆನಂದ ಆಚಾರ್ಯ ಆದರ್ಶ ನಗರ ಹಾಗೂ ಉಷಾ ಆದರ್ಶ ನಗರ ರವರೊಂದಿಗೆ ಬಂದು ಶಾಲೆಯ ಎಲ್ಲಾ ಮಕ್ಕಳಿಗೆ ಪುಸ್ತಕ ಮತ್ತು  ಪೆನ್ಸಿಲ್ ಹಾಗೂ ಶಿಕ್ಷಕಿಯರಿಗೆ ಪೆನ್ನುಗಳನ್ನು ನೀಡುವ ಮೂಲಕ ವಿಶೇಷವಾಗಿ ಆಚರಿಸಿದಳು.

     ‌‌ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ಪ್ರೋತ್ಸಾಹಿಸಿ ಸಹಕರಿಸಿದ ವೀಕ್ಷಿತಳ ಹೆತ್ತವರಿಗೆ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ವೀಕ್ಷಿತಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...








No comments:

Post a Comment