ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಈ ವರ್ಷದ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಇಂದು ನಡೆಯಿತು.
ಭಾವನಾತ್ಮಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮುಗ್ಧ ಮಕ್ಕಳ ಕಣ್ಣೀರಿನ ವಿದಾಯವು ಎಲ್ಲರ ಕಣ್ಣನ್ನೂ ಒದ್ದೆಯಾಗಿಸಿತು.ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಪಿ, ಶ್ರೀಮತಿ ನಯನ ಎಂ, ಶ್ರೀಮತಿ ಶ್ವೇತ ಇ, ಶ್ರೀಮತಿ ಅಶ್ವಿನಿ ಎಂ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ ಉಪಸ್ಥಿತರಿದ್ದು ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಮಕ್ಕಳು ತಮ್ಮ ಮನಸಿನ ಮಾತುಗಳನ್ನು ಭಾರವಾದ ಮನಸಿನಿಂದ ಹೇಳುವಾಗ ಎಲ್ಲರ ಕಣ್ಣಂಚಲ್ಲೂ ನೀರು. ವಿದ್ಯಾರ್ಥಿಗಳಾದ ಉಲ್ಲಾಸ್ ಕೆ, ತನ್ವಿ, ಮನ್ವಿತ್ ಕೆ, ಸಾತ್ವಿಕ ಪಿ ಶೆಟ್ಟಿ ತಮ್ಮ ಮನದಾಳದ ಮಾತುಗಳನ್ನು ಆಡಿದರು.
ಹೆತ್ತವರಾದ ಶ್ರೀಮತಿ ಉಷಾ ಆದರ್ಶನಗರ, ಶ್ರೀಮತಿ ಭಾರತಿ, ಶ್ರೀಮತಿ ವಿನೋದ ಸುಣ್ಣಾರ, ಶ್ರೀಮತಿ ಉದಯಕುಮಾರಿ ಮನದಾಳದ ಮಾತುಗಳನ್ನಾಡಿ ಶಾಲೆಗೆ ಧನ್ಯವಾದಗಳನ್ನು ಅರ್ಪಿಸಿ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾಲ್ಕನೇ ತರಗತಿಯ ಹೆತ್ತವರು ಶಾಲೆಗೆ ಸವಿನೆನಪಿಗಾಗಿ ಟೇಬಲನ್ನು ಕೊಡುಗೆಯಾಗಿ ನೀಡಿದರು.
ಬಳಿಕ ಎಲ್ಲರಿಗೂ ಲಘು ಉಪಾಹಾರವನ್ನು ನೀಡಲಾಯಿತು.



















No comments:
Post a Comment