FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 9 February 2026

ಕುಳೂರು ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ‌ ಬಿಡುಗಡೆ ಕಾರ್ಯಕ್ರಮ :

         ಶತಮಾನೋತ್ಸವವನ್ನು ಕಂಡು ಇದೀಗ 102 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ‌ ಬಿಡುಗಡೆ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು. 

       ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಆಮಂತ್ರಣ ಪತ್ರಿಕೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ‌ಮೊಹಮ್ಮದ್ ಹಾಜಿ ಕಂಚಿಲ ಬಿಡುಗಡೆಗೊಳಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಯುವ ಉದ್ಯಮಿಯಾಗಿರುವ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರು ಆಗಮಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಮುಖರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ,  ಶಾಲಾ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕವಿತಾ ದೇರಂಬಳ, ಪ್ರೀ ಪ್ರೈಮರಿ ವಿಭಾಗದ ಅಧ್ಯಕ್ಷೆಯಾದ ಶ್ರೀಮತಿ ಪ್ರಿಯಾಂಕ ಕೇಮಜಾಲು, ಸದಸ್ಯರಾದ ಶ್ರೀಮತಿ ಶ್ವೇತ ಕೇಮಜಾಲು, ಶಾಲಾ ನಾಯಕ ಉಲ್ಲಾಸ್, ಉಪನಾಯಕಿ ಕುಮಾರಿ ವೀಕ್ಷಿತ ಎ ಹಾಗೂ ಶಾಲಾ ಶಿಕ್ಷಕ‌ ವೃಂದ ಉಪಸ್ಥಿತರಿದ್ದರು. 

         ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಶಾಲಾ ವಾರ್ಷಿಕೋತ್ಸವವುಇದೇ ತಿಂಗಳ 18 ರಂದು ನಡೆಯಲಿದ್ದು ಕಾರ್ಯಕ್ರಮದ  ಯಶಸ್ವಿಗೆ ಕರೆಯನ್ನು ನೀಡಲಾಯಿತು. ಹಳೆ ವಿದ್ಯಾರ್ಥಿ ಹಾಗೂ ಯುವ ಉದ್ಯಮಿಯಾಗಿರುವ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರು ತಾವು ಕೊಡುಗೆ ನೀಡಿದ ಶಾಲಾ ಮಕ್ಕಳ ಆಟದ ಉದ್ಯಾನದ ನವೀಕರಣಕ್ಕಾಗಿ ಸಹಕರಿಸಿ ಗಮನ ಸೆಳೆದರು. 





No comments:

Post a Comment