ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಶಾಲಾ ಪರಿಸರ ಸ್ವಚ್ಚತಾ ಕಾರ್ಯಕ್ರಮ ಹಾಗೂ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು.
ಶಾಲಾ ಪರಿಸರವನ್ನು ಶುಚೀಗೊಳಿಸುವುದರ ಜೊತೆಗೆ ಶಾಲಾ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಶ್ವೇತಾ ಕೇಮಜಲ್, ಉಪಾಧ್ಯಕ್ಷೆಯಾದ ಶ್ರೀಮತಿ ಪ್ರಿಯಾಂಕಾ ಕೇಮಜಲ್, ಪಿ.ಟಿ.ಎ. ಸದಸ್ಯರಾದ ಶ್ರೀಮತಿ ಸುಚರಿತ ಚಿನಾಲ, ಶ್ರೀಮತಿ ಕುಶಾಲಾಕ್ಷಿ ಎಲಿಯಾಣ, ಶ್ರೀಮತಿ ಸುಮಿತ್ರ ಚಿನಾಲ, ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ, ಶ್ರೀ ನೌಶಾದ್ ಕುಳೂರು ಮೊದಲಾದವರು ಕೈ ಜೋಡಿಸಿದರು. ಜೊತೆಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶಿಕ್ಷಕಿಯರಾದ ಶ್ರೀಮತಿ ನಯನ ಎಂ, ಹಾಗೂ ಶ್ರೀಮತಿ ಶ್ವೇತ ಇ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.ಶಾಲಾ ಮಕ್ಕಳೂ ಕೈ ಜೋಡಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಯವರು ಲಘು ಉಪಾಹಾರ, ಹಾಗೂ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಮತ್ತು ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿಯವರು ಮಧ್ಯಾಹ್ನದ ಊಟದ ವ್ಯವಸ್ಥೆಗೆ ಸಹಕರಿಸಿದರು.

















No comments:
Post a Comment