ಮಕ್ಕಳಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ, ಶಿಸ್ತು, ಸಮಯಪ್ರಜ್ಞೆ, ಸಮಾನತೆ, ಒಗ್ಗಟ್ಟು ಹಾಗೂ ಕ್ರೀಡಾಸಕ್ತಿಯನ್ನು ಮೂಡಿಸಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಚಾಲನೆ ನೀಡಿದರು. ಶಾಲಾ ಕ್ಕಳ ಆಕರ್ಷಕ ಪಥ ಸಂಚಲನದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರೊಂದಿಗೆ ಗೌರವ ವಂದನೆ ಸ್ವೀಕರಿಸಿದರು.ವಿವಿಧ ವಿಭಾಗಗಳಲ್ಲಿ ಹಲವು ಕ್ರೀಡಾ ಸ್ಪರ್ಧೆಗಳು ಜರಗಿದವು. ಮಕ್ಕಳೆಲ್ಲರೂ ಉತ್ಸಾಹದಿಂದ ಭಾಗವಹಿಸಿದರು.
ವಿಜೇತರಾದವರಿಗೆ ಬಹುಮಾನ ವಿತರಣೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಸದಸ್ಯರಾದ ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ, ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಪಿ, ಶ್ರೀಮತಿ ನಯನ ಎಂ, ಶ್ರೀಮತಿ ಅಶ್ವಿನಿ ಎಂ, ಶ್ರೀಮತಿ ಶ್ವೇತಾ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಮಲಯಾಳಂ ಶಿಕ್ಷಕಿ ಶ್ರೀಮತಿ ರೇಷ್ಮಾ, ಅಡುಗೆಯಾಳು ಶ್ರೀಮತಿ ಜಲಜ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತರನ್ನು ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಯಿತು.



























No comments:
Post a Comment