ಹುಟ್ಟು ಹಬ್ಬವು ಎಲ್ಲರೂ ಕಾತರದಿಂದ ಕಾಯುವ ಒಂದು ದಿನವಾಗಿದೆ. ಈ ದಿನವನ್ನು ಬಹಳ ವಿಶೇಷತೆಯಿಂದ ಆಚರಿಸಲು ಎಲ್ಲರೂ ಕಾತರದಿಂದ ಕಾಯುತ್ತಿರುತ್ತಾರೆ. ಇಂತಹ ದಿನವನ್ನು ಎಲ್ಲರಿಗೂ ಮಾದರಿಯಾದಂತೆ ಔಚಿತ್ಯಪೂರ್ಣವಾಗಿ ಆಚರಿಸುವವರು ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತಾರೆ. ಅಂತವರಲ್ಲಿ ನಮ್ಮ ಶಾಲಾ ಒಂದನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಣವ್ಯ ಭಾರದ್ವಾಜ್ ಕೂಡಾ ಒಬ್ಬಳು.
ಇಂದು ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ ಪ್ರಣವ್ಯ ಭಾರದ್ವಾಜ್ ತನ್ನ ಕುಳೂರು ಶಾಲೆಗೆ 50 ಕ್ಕಿಂತಲೂ ಅಧಿಕ ಮಕ್ಕಳ ಮಟ್ಟಕ್ಕನುಗುಣವಾದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿ ಎಲ್ಲರ ಗಮನ ಸೆಳೆದಳು. ಪ್ರಣವ್ಯಳ ತಾಯಿ ಶ್ರೀಮತಿ ಪ್ರತಿಭಾ ಹರೀಶ್ ನಾಯಕ್ ಕುಳಬೈಲ್ ರವರು ಶಾಲೆಗೆ ಬಂದು ಈ ಪುಸ್ತಕಗಳನ್ನು ಶಾಲಾ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಉಪಸ್ಥಿತರಿದ್ದರು.ಪ್ರಣವ್ಯಳ ಹುಟ್ಟು ಹಬ್ಬವನ್ನು ಔಚಿತ್ಯಪೂರ್ಣವಾಗಿ ಆಚರಿಸಲು ಪ್ರೋತ್ಸಾಹ ನೀಡಿದ ಅವಳ ಹೆತ್ತವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಕುಮಾರಿ ಪ್ರಣವ್ಯ ಭಾರದ್ವಾಜ್ ಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....




No comments:
Post a Comment