ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ವ್ಯಕ್ತಿ ಶುಚಿತ್ವವು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಈ ಶುಚಿತ್ವದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ವಿಶ್ವ ಕೈ ತೊಳೆಯುವ ದಿನ'ವನ್ನು ಆಚರಿಸಲಾಯಿತು.
ಆಹಾರ ತಿನ್ನುವ ಮೊದಲು ನಮ್ಮ ಕೈಯನ್ನು ತೊಳೆಯುವ ಪ್ರಾಮುಖ್ಯತೆ ಹಾಗೂ ಕೈ ತೊಳೆಯುವ ವಿಧಾನದ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಅರಿವು ಮೂಡಿಸಲಾಯಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿಯವರು ಇದನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕಿಯವರು ಉಪಸ್ಥಿತರಿದ್ದರು.




No comments:
Post a Comment