FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday, 15 August 2026

ಕುಳೂರು ಶಾಲೆಯಲ್ಲಿ ಸಂಭ್ರಮದ 80 ನೇ ಸ್ವಾತಂತ್ರ್ಯ ದಿನಾಚರಣೆ :

         ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ರಾಷ್ಟ್ರೀಯ ಆಚರಣೆಯಾದ 80 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

      ಆ ಪ್ರಯುಕ್ತ ಶಾಲಾ ಮಕ್ಕಳು, ಹೆತ್ತವರು ಹಾಗೂ ಊರವರಿಂದ ಆಕರ್ಷಕ ಮೆರವಣಿಗೆ ನಡೆಯಿತು.

        ಬಳಿಕ ನಡೆದ ಧ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರು ನೆರವೇರಿಸಿದರು.

      ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯರಾದ ಶ್ರೀಮತಿ ಶರ್ಮಿಳ ಎಂ ಶೆಟ್ಟಿ ಚಾರ್ಲ ಆಗಮಿಸಿದ್ದರು. ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಪಿ.ಆರ್. ಶೆಟ್ಟಿ ಪೊಯ್ಯೇಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಮೀಂಜ ಸಿ.ಡಿ.ಎಸ್. ಚೇರ್ ಪರ್ಸನ್ ಪದ್ಮಜಾ ಕುಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶ್ವೇತ ಕೇಮಜಲ್, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಕವಿತಾ ದೇರಂಬಳ ಶುಭ ಕೋರಿದರು‌.

       ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ನಿರ್ವಹಿಸಿದರು.

       ಶಾಲಾ ಶಿಕ್ಷಕಿ ಶ್ರೀಮತಿ ನಯನ ಎಂ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ವೇತ ಇ ವಂದಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಎಲ್ಲರಿಗೂ ಲಘು ಉಪಾಹಾರ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

      ಲಘು ಉಪಾಹಾರದ ವ್ಯವಸ್ಥೆಯನ್ನು ಶ್ರೀ ಪ್ರಭಾಕರ ವಿ ಮತ್ತು ಫ್ಯಾಮಿಲಿ ಸುಂಕದಕಟ್ಟೆ, ಮಕ್ಕಳ ಬಹುಮಾನದ ಪ್ರಾಯೋಜಕತ್ವವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ ಹಾಗೂ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು ವಹಿಸಿ ಸಹಕರಿಸಿದರು.

        ಮೀಂಜ ಗ್ರಾಮ ಪಂಚಾಯತು, ಫ್ರೆಂಡ್ಸ್ ಕ್ಲಬ್ ಕುಳೂರು, ಶ್ರೀ ಹರಿ ಭಜನಾ ಮಂದಿರ, ಜೀವನರಕ್ಷಾ ಕುಟುಂಬಶ್ರೀ, ಶಾಲಾ ಶಿಕ್ಷಕ ವೃಂದ, ಶ್ರೀಮತಿ ಶರ್ಮಿಳಾ ಎಂ. ಶೆಟ್ಟಿ, ಚಾರ್ಲ, ಶ್ರೀ ಜನಾರ್ಧನ ಪೂಜಾರಿ, ಶ್ರೀ ನಾರಾಯಣ್ ನೈಕ್ ನಡುಹಿತ್ಲು, ಶ್ರೀ ಪಿ.ಆರ್. ಶೆಟ್ಟಿ ಪೊಯ್ಯೇಲು, ಶ್ರೀ ಚಂದ್ರಹಾಸ ಪೂಜಾರಿ ಕುಳೂರು, ಶ್ರೀ ವಸಂತ ಪೂಜಾರಿ ಕುಳೂರು, ಶ್ರೀ ಅಬ್ದುಲ್ ಮಜೀದ್ ಚಾರ್ಲ, ಶ್ರೀ ಸದಾಶಿವ ಸೇನವ ನಾರ್ಣಹಿತ್ಲು, ಶ್ರೀ ಸದಾಶಿವ ಕಣ್ವತೀರ್ಥ, ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶ್ರೀ ಉದಯ ಚಿನಾಲ, ಶ್ರೀ ನಾರಾಯಣ ಕಲ್ಯಾಣತ್ತಾಯ, ಶ್ರೀ ನವಾಝ್ ಅಲಂಕಾರ್, ಶ್ರೀ ಮೊಹಮ್ಮದ್ ಕೊಜಮುಕು, ಶ್ರೀ ರಘುರಾಮ ಶೆಟ್ಟಿ ಎಲಿಯಾಣ, ಆರತಿ ಶೆಟ್ಟಿ ಪೊಯ್ಯೇಲು ಮೊದಲಾದವರು ವಿವಿಧ ರೀತಿಯ ಸಿಹಿತಿಂಡಿಗಳನ್ನು ನೀಡಿ ಸಹಕರಿಸಿದರು. 
















































No comments:

Post a Comment