FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 27 October 2017

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ನಮ್ಮ ಶಾಲಾ ಮಕ್ಕಳ ಅಮೋಘ ಸಾಧನೆ: ಎಲ್ಲರಿಂದ ಪ್ರಶಂಸೆ

               ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಅಮೋಘ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
               ಮೀಯಪದವು ಹೈಸ್ಕೂಲ್ ಹಾಗೂ ಯು.ಪಿ ಶಾಲೆಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷಾ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವರ್ಕ್'ನಲ್ಲಿ ನಾಗರತ್ನ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಜಾಣ್ಮೆ ಪ್ರಶ್ನೆಯ ಸ್ಪರ್ಧೆಯಲ್ಲಿ ಭುವನ ಕೆ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್'ನಲ್ಲಿ ಸಾನ್ವಿಕ ಹಾಗೂ ನವ್ಯ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದಲ್ಲಿ ಎಲ್.ಪಿ. ವಿಭಾಗದ ಮಿನಿ 50 ಮೀ. ಓಟದ ಸ್ಪರ್ಧೆಯಲ್ಲಿ ನವ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಕುಳೂರು ಶಾಲೆಯ ಮಕ್ಕಳ ಈ ಪ್ರತಿಭೆಗಳನ್ನು ಕಂಡು ಊರವರು ಕೊಂಡಾಡಿ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾತೃ ಮಂಡಳಿ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ. 


 ಹೇಮಂತ್

 ಲಕ್ಷ್ಮಣ

 ಶ್ರೇಯಾ ಕರ್ಕೇರ

 ಶ್ರವಣ್ ಕುಮಾರ್ 

 ವರ್ಷಾ ಬಿ

 ನಾಗರತ್ನ 

 ನವ್ಯ
  ಭುವನ ಕೆ

  ಸಾನ್ವಿಕ

No comments:

Post a Comment