FLASH NEWS
Wednesday, 28 September 2016
Thursday, 22 September 2016
Friday, 9 September 2016
ವಿಶೇಷ ಚೇತನ ಮಗುವಿನ ಮನೆ ಭೇಟಿ
ಓಣಂ ಆಚರಣೆಯ ದಿನದಂದು ಶಾಲೆಯ ವಿಶೇಷ ಚೇತನ ಮಗುವಾದ ಸಲಾಹುದ್ದೀನ್ ನವಾಸ್ ನ ಮನೆಗೆ ಭೇಟಿ ಕೊಡಲಾಯಿತು. ಇದೇ ಸಂದರ್ಭದಲ್ಲಿ ಮಗುವಿಗೆ 'ಓಣಂ ಕಿಟ್' ಹಾಗೂ ಶಾಲಾ ಶಿಕ್ಷಕ ವೃಂದದ ವತಿಯಿಂದ ಸಹಾಯಧನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ರವರು ನೀಡಿದರು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಶ್ರೀಮತಿ ಸೌಮ್ಯ ಪಿ, ಶ್ರೀ ರಘುನಾಥ್ ಕೆ, ಕುಮಾರಿ ಶ್ವೇತ ಉಪಸ್ಥಿತರಿದ್ದರು.
ಓಣಂ ಆಚರಣೆ
ಕೇರಳದ ಪ್ರಧಾನ ಹಬ್ಬವಾದ 'ಓಣಂ ಹಬ್ಬ'ದ ಆಚರಣೆಯನ್ನು ನಮ್ಮೀ ಶಾಲೆಯಲ್ಲಿ ಸಡಗರದಿಂದ ಆಚರಿಸಲಾಯಿತು. ಆ ಪ್ರಯುಕ್ತ ಬಣ್ಣ-ಬಣ್ಣದ ಹೂಗಳಿಂದ ಸುಂದರವಾದ 'ಪೂಕಲಂ' ರಚಿಸಲಾಯಿತು. ಶಾಲಾ ವಿದ್ಯಾರ್ಥಿ ಗಣೇಶ್ ಕೀರ್ತನ್ ಹಾಕಿದ 'ಮಾವೇಲಿ' ವೇಷ ಎಲ್ಲರ ಗಮನ ಸೆಳೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ರವರು ಓಣಂ ಆಚರಣೆಯ ಐತಿಹ್ಯವನ್ನು ತಿಳಿಸಿದರು. ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ, ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಶ್ರೀಮತಿ ಸೌಮ್ಯ ಪಿ, ಶ್ರೀ ರಘುನಾಥ್ ಕೆ, ಕಮಾರಿ ಶ್ವೇತ ಇ, ಶ್ರೀಮತಿ ಅಂಬುಜಾಕ್ಷಿ, ಶ್ರೀಮತಿ ಜಲಜ ಉಪಸ್ಥಿತರಿದ್ದು ಶುಭ ಕೋರಿದರು. ಮಧ್ಯಾಹ್ನ ವಿವಿಧ ಭಕ್ಷ-ಭೋಜ್ಯಗಳಿಂದೊಡಗೂಡಿದ 'ಓಣಂ ಸದ್ಯ'ವನ್ನು ಸವಿಯಲಾಯಿತು.
Tuesday, 6 September 2016
Subscribe to:
Posts (Atom)