ಕ್ರಿಸ್'ಮಸ್ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಗೋದಳಿ ಹಾಗೂ 'ಕ್ರಿಸ್ಮಸ್ ಟ್ರೀ' ರಚಿಸಲಾಯಿತು. ವಿದ್ಯಾರ್ಥಿ ಅಕ್ಷಯ್ ಕುಮಾರ್ ಹಾಕಿದ ಕ್ರಿಸ್ಮಸ್ ಅಜ್ಜನ ವೇಷ ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ಪಾಯಸದೊಂದಿಗೆ ಭೂರಿ ಭೋಜನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಎಲ್ಲರಿಗೂ ಕ್ರಿಸ್ಮಸ್ ಕೇಕ್, ಚಾಕಲೇಟ್'ಗಳನ್ನು ಹಂಚಲಾಯಿತು.
FLASH NEWS
Friday, 23 December 2016
Monday, 19 December 2016
Thursday, 8 December 2016
'ಹಸಿರು ಕೇರಳ - ಸುಂದರ ಕೇರಳ' ಕಾರ್ಯಕ್ರಮ
ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ಸರಕಾರದ ಯೋಜಿತ 'ಹಸಿರು ಕೇರಳ - ಸುಂದರ ಕೇರಳ' ಕಾರ್ಯಕ್ರಮವನ್ನು ನಡೆಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಅಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಯ ಕುರಿತಾದ ಪ್ರತಿಜ್ಞೆಗೈಯಲಾಯಿತು. ಬಳಿಕ ಶಾಲಾ ಪರಿಸರದ ಶುಚೀಕರಣದೊಂದಿಗೆ ತ್ಯಾಜ್ಯ ಸಂಸ್ಕರಣೆಗೆ ಹೊಂಡವನ್ನು ಶಾಲಾ ಅಧ್ಯಾಪಕರು ನಿರ್ಮಿಸಿದರು. 'ಹಸಿರು ಕೇರಳ - ಸುಂದರ ಕೇರಳ'ದ ಅಂಗವಾಗಿ ಮಕ್ಕಳು ನಡೆಸಿದ ಪರಿಸರ ಸ್ನೇಹೀ ಮೆರವಣಿಗೆಗೆ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ಚಾಲನೆಯನ್ನಿತ್ತರು. ಮನೆ-ಮನೆ ಭೇಟಿಯೊಂದಿಗೆ ಮೆರವಣಿಗೆ ನಡೆಸಿ ಪರಿಸರ ಹಾಗೂ ಜಲ ಸಂರಕ್ಷಣೆಯ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿನ ಉಪಾಧ್ಯಕ್ಷೆ ಶ್ರೀಮತಿ ಮಮತಾ ದಿವಾಕರ್, ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಆಶಾಲತ ಹಾಗೂ ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಸಂಶಾದ್ ಶಕೂರ್, ಉಪಾಧ್ಯಕ್ಷೆ ಶ್ರೀಮತಿ ಫಾತಿಮಾ, ಪಂಚಾಯತ್ ಕಾರ್ಯದರ್ಶಿ ಶ್ರೀ ನಂದಗೋಪಾಲನ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಕುಂಞ್ಞಿ, ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಶೋಭಾ ಸೋಮಪ್ಪ, ವಾರ್ಡ್ ಪ್ರತಿನಿಧಿಗಳಾದ ಶ್ರೀಮತಿ ಚಂದ್ರಾವತಿ ವಿ.ಪಿ, ಶ್ರೀ ಚಂದ್ರಶೇಖರ, ಶ್ರೀಮತಿ ಚಂದ್ರಾವತಿ ಮೂಡಂಬೈಲ್, ಗ್ರಾಮಾಧಿಕಾರಿ ಶ್ರೀ ಅಬ್ದುಲ್ ನಾಸೀರ್ ಶಾಲೆಯನ್ನು ಸಂದರ್ಶಿಸಿ ಶಾಲಾಮಟ್ಟದಲ್ಲಿ ನಡೆಸಿದ ಹಸಿರು ಕೇರಳ ಮೆರವಣಿಗೆ, ತ್ಯಾಜ್ಯ ಸಂಸ್ಕರಣೆಗೆ ಮಾಡಿದ ಹೊಂಡ, ಪರಿಸರ ಶುಚಿತ್ವ ಹಾಗೂ ಎರಡನೇ ಹಂತದ ಕೃಷಿ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ವಿನೋದ್ ಕುಮಾರ್ ಬಿ, ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತ, ಕುಮಾರಿ ರೇಷ್ಮ, ಸ್ಥಳೀಯರಾದ ಶ್ರೀ ಹರಿರಾಮ್ ಕುಳೂರು ಉಪಸ್ಥಿತರಿದ್ದು ಸಹಕರಿಸಿದರು.
Subscribe to:
Posts (Atom)