FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 31 March 2017

ಶಾಲಾ ಅಭಿವೃದ್ಧಿ ಸೆಮಿನಾರ್:

             ಸಾರ್ವಜನಿಕ ಶಿಕ್ಷಣ ರಂಗದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇರಳ ಸರಕಾರವು ಹಲವಾರು ಯೋಜನೆಗಳನ್ನು ತರುತ್ತಿದೆ. ಇದರ ಮುಂದುವರಿದ ಭಾಗವೇ ಶಾಲಾಭಿವೃದ್ಧಿ ಸೆಮಿನಾರ್ ಮಂಡನೆ. ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ತಾ. 31-03-2017 ನೇ ಶುಕ್ರವಾರದಂದು ನಡೆಸಲಾಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ಸಂಘದ ಅಧ್ಯಕ್ಷೆ ಮಮತಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶ್ರೀ ಶುಭಾನಂದ ಶೆಟ್ಟಿ ಕುಳೂರು, ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಹಾಗೂ ಪಿ.ಟಿ.ಎ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ್ ಕುಮಾರ್ ಬಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಿ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಶಾಲಾಭಿವೃದ್ಧಿ ಸೆಮಿನಾರ್ ಮಂಡಿಸಿದರು. ಬಳಿಕ ನೂತನ ಶಾಲಾಭಿವೃದ್ಧಿ ಸಮಿತಿಯನ್ನು ರೂಪೀಕರಿಸಲಾಯಿತು.





ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ:

            2016-17 ನೇ ಶೈಕ್ಷಣಿಕ ವರ್ಷದ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭವು ತಾ. 31-03-2017 ನೇ ಶುಕ್ರವಾರದಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ್ ಕುಮಾರ್ ಬಿ, ಪಿ.ಟಿ.ಎ ಅಧ್ಯಕ್ಷೆ ಸೌಮ್ಯಲತಾ, ಮಾತೃ ಸಂಘದ ಅಧ್ಯಕ್ಷೆ ಮಮತಾ, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳು ತಮ್ಮ ಶಾಲಾ ಅನುಭವ ಹಾಗೂ ಮುಂದಿನ ಗುರಿಯ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದರು. ಇದೇ ಸಂದರ್ಭದಲ್ಲಿ ನಾಲ್ಕನೇ ತರಗತಿ ಅಧ್ಯಾಪಕರಾದ ಜಯಪ್ರಶಾಂತ್ ಪಿ ಯವರು ಮಕ್ಕಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.











Saturday, 25 March 2017

ಮೀಂಜ ಪಂಚಾಯತ್ ಮಟ್ಟದ ಹಿರಿಮೆ:

            ಮೀಂಜ ಪಂಚಾಯತ್ ಮಟ್ಟದ ಬಾಲೋತ್ಸವ (ಹಿರಿಮೆ) 2016-17 ಕಾರ್ಯಕ್ರಮವು ತೊಟ್ಟೆತ್ತೋಡಿಯ ಶ್ರೀ ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮಕ್ಕಳಾದ ಜಿತಿನ್ ಕುಮಾರ್, ಹರ್ಷಿತ, ಭುವನ ಕೆ, ಶ್ರೇಯಾ ಕರ್ಕೇರ ಹಾಗೂ ಲಕ್ಷ್ಮಣ ರೊಂದಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪಿಟಿ.ಎ ಹಾಗೂ ಮಾತೃ ಮಂಡಳಿಯ ಅಧ್ಯಕ್ಷೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭಾಗವಹಿಸಿದರು. ನಮ್ಮ ಶಾಲೆಯ ಈ ವರ್ಷದ ಹಿರಿಮೆಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆಗಳು ಹಾಗೂ ಅದರಿಂದಾದ ಅಭಿವೃದ್ಧಿ ಕಾರ್ಯಗಳು ಹಾಗೂ ಶಾಲೆಯಲ್ಲಾದ ಅಭೂತಪೂರ್ವ ಬದಲಾವಣೆಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುದು ಮಾತ್ರವಲ್ಲದೆ ಪಂಚಾಯತ್ ಮಟ್ಟದ ಹಿರಿಮೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನೂ ಪಡೆದುಕೊಂಡೆವು.








Friday, 17 March 2017

ಶಾಲಾ ಶೈಕ್ಷಣಿಕ ಪ್ರವಾಸ:

           2016-17 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವಾಸವನ್ನು ತಾ. 17-03-2017 ರಂದು ನಡೆಸಿದೆವು. ಬೆಳಿಗ್ಗೆ 8:00 ಗಂಟೆಗೆ ಹೊರಟ ನಮ್ಮ ಪ್ರಯಾಣವು ಅನಂತಪುರ ಅನಂತಪದ್ಮನಾಭ ಸರೋವರ ಕ್ಷೇತ್ರ, ಕಿನ್ಫ್ರ ಕೈಗಾರಿಕಾ ಪಾರ್ಕ್, ಮಾಯಿಪ್ಪಾಡಿ ಅರಮನೆ, ಕಾಸರಗೋಡಿನಲ್ಲಿರುವ ಸರಕಾರಿ ಅಂಧರ ವಿದ್ಯಾಲಯ, ಕೈಮಗ್ಗದ ಕೇಂದ್ರವಾದ ಕಾಸರಗೋಡು ಸಾರೀ ಕೇಂದ್ರ, ಬೇಕಲಕೋಟೆ ಹಾಗೂ ಕಡಲತೀರವನ್ನು ಸಂದರ್ಶಿಸಲಾಯಿತು. ಶಾಲಾ ಮಕ್ಕಳೊಂದಿಗೆ ಶಿಕ್ಷಕ ವೃಂದ ಹಾಗೂ ಪಿ.ಟಿ.ಎ ಸದಸ್ಯರು ಉಪಸ್ಥಿತರಿದ್ದರು.



















Tuesday, 7 March 2017

ಹಳೆ ವಿದ್ಯಾರ್ಥಿ ಸಂಘದ ಸಭೆ:

              ಶಾಲಾ ವಾರ್ಷಿಕೋತ್ಸವದ ಯಶಸ್ಸಿನ ನಂತರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಭೆಯನ್ನು ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ವಹಿಸಿದ್ದರು. ಸಭೆಯಲ್ಲಿ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ್ ಕುಮಾರ್ ಬಿ,  ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಗದೀಶ್ ಶೆಟ್ಟಿ ಎಲಿಯಾಣ, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರಿರಾಮ ಕುಳೂರು ಸ್ವಾಗತಿಸಿ, ಸದಸ್ಯರಾದ ಶಶಿಕುಮಾರ್ ಕುಳೂರು ವಂದಿಸಿದರು.