FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 30 March 2018

ಹಿರಿಮೆಯ ಮೆಟ್ಟಿಲು 2018

        ನಮ್ಮ ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನೊಳಗೊಂಡ 'ಹಿರಿಮೆಯ ಮೆಟ್ಟಿಲು 2018' ಕಾರ್ಯಕ್ರಮ ನಡೆಯಿತು.
     ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ.ಪಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ಸಂಘದ ಅಧ್ಯಕ್ಷೆ ಆಶಾಲತಾ ಕುಳೂರು, ಶಾಲಾ ಹಳೆ ವಿದ್ಯಾರ್ಥಿ ಉದ್ಯಮಿ ಸುರೇಶ್ ಶೆಟ್ಟಿ ಚಾರ್ಲ, ಶಿರಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. 'ಹಿರಿಮೆಯ ಮೆಟ್ಟಿಲು 2018' ಸ್ವಾಗತ ಸಮಿತಿಯ ಸಂಚಾಲಕರಾದ ಹರಿರಾಮ ಕುಳೂರು ಸ್ವಾಗತಿಸಿ, ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳು ಹಾಗೂ ಕಲಿಕಾ ಪುರೋಗತಿಯನ್ನು ಬಿಂಬಿಸುವ ವಿಶೇಷ ಕಾರ್ಯಕ್ರಮ 'ಹಿರಿಮೆಯ ಮೆಟ್ಟಿಲು 2018' ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.


Sunday, 18 March 2018

ಮನೆ ಮನೆ ಭೇಟಿ:

           2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಗಾಗಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪಿ.ಟಿ.ಎ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಮನೆ ಮನೆ ಸಂದರ್ಶನದ ಕೆಲವು ನೋಟ....








Sunday, 11 March 2018

ಕಲ್ಪವೃಕ್ಷ:

          ನಮ್ಮ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರಿರಾಮ ಕುಳೂರು ರವರು ನೀಡಿದ ತೆಂಗಿನ ಸಸಿಯನ್ನು ಸೀತಾರಾಮ ಕುಳೂರು ರವರು ನೆಟ್ಟು ಪೊಷಿಸಿದ ಸಂದರ್ಭದ ಕೆಲವು ತುಣುಕುಗಳು.....





Friday, 2 March 2018

ಶಾಲಾ ಶೈಕ್ಷಣಿಕ ಪ್ರವಾಸ:

              ಈ ವರ್ಷದ ಶಾಲಾ ಶೈಕ್ಷಣಿಕ ಪ್ರವಾಸವನ್ನು ತಾ. 02-03-2018 ನೇ ಶುಕ್ರವಾರದಂದು ನಡೆಸಲಾಯಿತು. ಮಂಗಳೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲಾಯಿತು. ಮಂಗಳೂರಿನ ಸೈಂಟ್ ಅಲೋಶಿಯಸ್ ಮ್ಯೂಸಿಯಂ, ಸೈಂಟ್ ಅಲೋಶಿಯಸ್ ಚರ್ಚ್, ಸೈಂಟ್ ಅಲೋಶಿಯಸ್ ಈಜು ಕೊಳ, ಕುಲಶೇಖರದಲ್ಲಿರುವ ನಂದಿನಿ ಡೈರಿ, ಪಿಲಿಕುಳದಲ್ಲಿರುವ ವಿಜ್ಞಾನ ಕೇಂದ್ರ, ಸ್ವಾಮೀ ವಿವೇಕಾನಂದ ತಾರಾಲಯ, ಪಿಲಿಕುಳ ನಿಸರ್ಗಧಾಮ, ಮೃಗಾಲಯ, ದೋಣಿ ವಿಹಾರ ಕೇಂದ್ರ, ಸೋಮೇಶ್ವರ ಬೀಚ್ ಮೊದಲಾದೆಡೆ ಶಾಲಾ ಮಕ್ಕಳೊಂದಿಗೆ ಪಿ.ಟಿ.ಎ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ತೆರಳಿ ಸಂದರ್ಶಿಸಿದರು. ತಾ. 01-03-2018 ನೇ ಗುರುವಾರದಂದು ಉದ್ಘಾಟನೆಯಾದ ಏಷ್ಯಾದ ಮೊತ್ತ ಮೊದಲ 3ಡಿ ತಂತ್ರಜ್ಞಾನವನ್ನೊಳಗೊಂಡ ಸ್ವಾಮೀ ವಿವೇಕಾನಂದ ತಾರಾಲಯದಲ್ಲಿ ನಮಗೆ ಪ್ರದರ್ಶನ ನೋಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಉದ್ಘಾಟನೆಗೊಂಡು ಮೊದಲ 3 ದಿನಗಳ ಉಚಿತ ಪ್ರವೇಶ ಟಿಕೆಟುಗಳು ವಿತರಣೆಗೊಂಡಿದ್ದರೂ ನಮಗೆ ಉಚಿತವಾಗಿ ನೋಡುವ ಅವಕಾಶ ಸಿಕ್ಕಿರುವುದು ಮಾತ್ರವಲ್ಲದೆ ಈ ತಾರಾಲಯದಲ್ಲಿ ಪ್ರದರ್ಶನ ನೋಡಿದ ಮೊದಲ ಶಾಲಾ ಮಕ್ಕಳು ಎಂಬ ಹೆಮ್ಮೆಯೂ ಇದೆ. ಅಂತೂ ಈ ಸಲದ ಶೈಕ್ಷಣಿಕ ಪ್ರವಾಸವು ಯಶಸ್ವಿಯಾಗಿ ನಡೆಯಿತು.