FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 31 May 2018

ಹೊಸ ವ್ಯಾನಿನ ಪೂಜೆ

         ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ಕೊಡುಗೆಯಾಗಿ ದೊರೆತ ಹೊಸ ವ್ಯಾನಿನ ಪೂಜೆಯನ್ನು ಐಲ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಸಲಾಯಿತು.



Saturday, 26 May 2018

ಪ್ರೀ ಪ್ರೈಮರಿ ತರಗತಿ ಸಜ್ಜೀಕರಣ

       2018-19 ನೇ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಪ್ರೀ ಪ್ರೈಮರಿ ತರಗತಿಯ ಸಜ್ಜೀಕರಣವು ಶಾಲಾ ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ನಡೆಸಲಾಯಿತು. 




Saturday, 12 May 2018

ಮನೆ ಮನೆ ಭೇಟಿ

2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಗೆ ಮನೆ ಮನೆ ಸಂದರ್ಶನ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ದೊಂದಿಗೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ  ಸದಸ್ಯರು ಸೇರಿ ಮನೆ ಮನೆ ಸಂದರ್ಶನ ನಡೆಸಲಾಯಿತು.






Thursday, 3 May 2018

ಹಳೆ ವಿದ್ಯಾರ್ಥಿ ಸಂಘದ ಸಭೆ

        2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಕ್ಕಳ ದಾಖಲಾತಿ ಹಾಗೂ ಇತರ ವಿಚಾರಗಳ ಕುರಿತಾಗಿ ತೀರ್ಮಾನಿಸಲು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ತಾ. 03-05-2018 ರಂದು ನಡೆಸಲಾಯಿತು.




Wednesday, 2 May 2018

'ಚಿಣ್ಣರ ಚಿಲಿಪಿಲಿ' ಬೇಸಿಗೆ ಶಿಬಿರ

      ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜಾ ಕಾಲದ ಒಂದು ದಿನದ ಶಿಬಿರ 'ಚಿಣ್ಣರ ಚಿಲಿಪಿಲಿ' ನಡೆಯಿತು. ಶಿಬಿರವನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಶಿಬಿರದ ತರಬೇತುದಾರ ಶಶಿಕುಮಾರ್ ಕುಳೂರು ಉಪಸ್ಥಿತರಿದ್ದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಅಧ್ಯಾಪಕಿ ಸೌಮ್ಯ ಪಿ ವಂದಿಸಿದರು. ಬಳಿಕ ಶಾಲಾ ಹಳೆ ವಿದ್ಯಾರ್ಥಿ ಆಗಿರುವ ಶಿಬಿರದ ತರಬೇತುದಾರ ಶಶಿಕುಮಾರ್ ಕುಳೂರು ರವರು ಶಿಬಿರದ ಚಟುವಟಿಕೆಗಳನ್ನು ನಡೆಸಿಕೊಟ್ಟರು.