FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 31 July 2018

ಇಂಗ್ಲೀಷ್ ಬಾಲಸಭೆ

        ಪ್ರತಿ ತಿಂಗಳ ಕೊನೆಗೆ ನಡೆಸುವ ಬಾಲ ಸಭೆಯ ಪ್ರಯುಕ್ತ ಜುಲೈ ತಿಂಗಳ ಬಾಲ ಸಭೆಯನ್ನು ಇಂಗ್ಲೀಷ್ ಬಾಲಸಭೆಯಾಗಿ ನಡೆಸಲಾಯಿತು. ಮಕ್ಕಳ ರಚನೆಯಲ್ಲಿ ಮೂಡಿಬಂದ 'RAINBOW' ಎಂಬ ಇಂಗ್ಲೀಷ್ ಹಸ್ತಪತ್ರಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಬಿಡುಗಡೆಗೊಳಿಸಿದರು. ಬಳಿಕ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.












Monday, 30 July 2018

ಆಟಿದ ಕೂಟ

ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ತಿಂಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ನಡೆಸಿದ 'ಆಟಿದ ಕೂಟ' ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆ ಪ್ರಯುಕ್ತ ತುಳುನಾಡಿನಲ್ಲಿ ಆಟಿ ತಿಂಗಳ ಸಮಯದಲ್ಲಿ ತಯಾರಿಸುವ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಸವಿಯುವ ಅವಕಾಶವನ್ನು ಮಾಡಲಾಯಿತು. ಪತ್ರೊಡೆ, ಹಲಸಿನ ಗಟ್ಟಿ, ತಿಮರೆ ಚಟ್ನಿ (ಒಂದೆಲಗ), ತಜಂಕ್ ಹಲಸಿನ ಬೀಜ ಪಲ್ಯ, ಚೇಟ್ಲ, ಬಾಳೆದಿಂಡು ಉರುಳಿ ಘಸಿ, ಉರುಳಿ ಚಟ್ನಿ, ನುಗ್ಗೆಸೊಪ್ಪು ಪಲ್ಯ, ಬಾಳೆ ಪೂಂಬೆ ಚಟ್ನಿ, ಉಪ್ಪಿನಲ್ಲಿ ಹಾಕಿದ ಮಾವಿನಕಾಯಿ ಚಟ್ನಿ, ಉಪ್ಪಡ್ ಪಚ್ಚಿಲ್ (ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ ಪಲ್ಯ), ಮೆಣಸಿನಕಾಯಿ, ಪಪ್ಪಾಯಿ ಪಲ್ಯ, ಮೆಂತೆ ಮನ್ನಿ ಹೀಗೆ ಹಲವಾರು ಆಹಾರ ಪದಾರ್ಥಗಳ ಪ್ರದರ್ಶನ ಮಾಡುವ ಮೂಲಕ ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ತಯಾರಿಸುತ್ತಿದ್ದ ಆಹಾರ ಪದಾರ್ಥಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಲಾಯಿತು‌. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಆಟಿ ತಿಂಗಳ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಬಾಳೆಎಲೆಯಲ್ಲಿ ಎಲ್ಲಾ ಆಹಾರ ಪದಾರ್ಥಗಳ ಸವಿಯನ್ನು ಸವಿಯಲಾಯಿತು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ, ಶಿಕ್ಷಕಿಯರಾದ ಸೌಮ್ಯ ಪಿ, ನಯನ ಎಂ, ನವಿನಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ, ರಮೀಝ, ಸಹಾಯಕಿಯರಾದ ಜಲಜ ಪೊಯ್ಯೆಲ್, ಲತಾ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದರು.












Saturday, 28 July 2018

ಉಚಿತ ವೈದ್ಯಕೀಯ ಶಿಬಿರ

          ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀಂಜ ಗ್ರಾಮ ಪಂಚಾಯತು, ಆಯುರ್ವೇದಿಕ್ ಆಸ್ಪತ್ರೆ ಮೀಂಜ ಹಾಗೂ ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
         ಶಿಬಿರದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಶ್ರೀಮತ ಚಂದ್ರಾವತಿ ವಿ.ಪಿ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೀಂಜ ಆಯುರ್ವೇದಿಕ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆದ ಡಾ. ರಾಜಾರಾಮ ಡಿ.ಕೆ ಶಿಬಿರದ ಮಾಹಿತಿ ಹಾಗೂ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಶಮ್ನಾ, ಕುಳೂರು ಶಾಲಾ ಶಿಕ್ಷಕಿ ಸೌಮ್ಯ ಪಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಕೃಷ್ಣವೇಣಿ ಪಾದೆ ಕುಳೂರು, ಮಾಜಿ ವಾರ್ಡ್ ಸದಸ್ಯ ಬಾಲಪ್ಪ ಬಂಗೇರ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು ವಂದಿಸಿದರು. ಶಾಲಾ ಅಧ್ಯಾಪಕರಾದ  ಜಯಪ್ರಶಾಂತ್ ಪಾಲೆಂಗ್ರಿ ನಿರೂಪಣೆಗೈದರು. ಬಳಿಕ ಸಾರ್ವಜನಿಕರ ಆರೋಗ್ಯ ಪರೀಕ್ಷೆ ನಡೆಯಿತು. ಶಾಲಾ ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.















Thursday, 26 July 2018

ಕಾರ್ಗಿಲ್ ವಿಜಯ ದಿವಸ ಆಚರಣೆ

     ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಆ ಪ್ರಯುಕ್ತ ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಯವರು ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ವೀರ ಯೋಧರಿಗೆ ನಮನವನ್ನು ಸಲ್ಲಿಸಲಾಯಿತು. ಬಳಿಕ ಚಿತ್ರ ಹಾಗೂ ವೀಡಿಯೋ ಪ್ರದರ್ಶನ ನಡೆಯಿತು. ಶಾಲಾ ಅಧ್ಯಾಪಿಕೆಯರಾದ ಸೌಮ್ಯ ಪಿ, ನಯನ ಯಂ, ನವಿನಾಕ್ಷಿ ಚಾರ್ಲ ಹಾಗೂ ಅಶ್ವಿನಿ ಎಲಿಯಾಣ ಉಪಸ್ಥಿತರಿದ್ದು ಸಹಕರಿಸಿದರು.



Wednesday, 25 July 2018

ಕಂಪ್ಯೂಟರ್ ಕೊಡುಗೆ

          ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ತಮ್ಮಲ್ಲಿದ್ದ ಕಂಪ್ಯೂಟರನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಮತ್ತು ನವಿನಾಕ್ಷಿ ಜೆ ಚಾರ್ಲ ದಂಪತಿ ಕಂಪ್ಯೂಟರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ಹಾಗೂ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.



Friday, 20 July 2018

ಚಾಂದ್ರ ದಿನಾಚರಣೆ

      ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರ ದಿನವನ್ನು ಆಚರಿಸಲಾಯಿತು.
ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಚಾಂದ್ರ ದಿನದ ವಿಶೇಷತೆಗಳನ್ನು ಮಕ್ಕಳಿಗೆ ತಿಳಿಸಿದರು. ಚಾಂದ್ರ ದಿನಕ್ಕೆ ಸಂಬಂಧಿಸಿದಂತೆ ಚಿತ್ರ ಪ್ರದರ್ಶನ ಹಾಗೂ ವೀಡಿಯೋ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಯವರು ಮಕ್ಕಳಿಗೆ ಚಾಂದ್ರಯಾನದ ಅಣುಕು ಯಾತ್ರೆಯ ಅನುಭವವನ್ನು ನೀಡುವ ಮೂಲಕ ಹೊಸ ಅನುಭವವನ್ನು ನೀಡಿದರು. ಅಧ್ಯಾಪಿಕೆ ನಯನ ಯಂ ರವರು ರಸಪ್ರಶ್ನೆ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಿಕೆ ಸೌಮ್ಯ ಪಿ, ನವಿನಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ ಸಹಕರಿಸಿದರು.










Monday, 16 July 2018

ಐ.ಡಿ ವಿತರಣೆ

      ಶಾಲಾ ಮಕ್ಕಳಿಗೆ ಐ. ಡಿ ವಿತರಣೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ನೆರವೇರಿಸಿದರು.